ನವದೆಹಲಿ: ಭಾರತೀಯ ಮಧ್ಯಮ ವರ್ಗದ ನೌಕರರಿಗೆ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) 2019-20ನೇ ಸಾಲಿಗೆ ಆರು ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ನೀಡಲು ಆರಂಭಿಸಿದೆ. ಈಗ ಖಾತೆದಾರರು ತಮ್ಮ ಪರಿಷ್ಕೃತ ಇಪಿಎಫ್ ಖಾತೆಗಳನ್ನು 2019-20ನೇ ಸಾಲಿಗೆ ಶೇ.8.5ಬಡ್ಡಿ ದರ ನೀಡುವುದಕ್ಕೆ ಮುಂದಾಗಿದೆ.
ಇಪಿಎಫ್ ವೆಬ್ ಸೈಟ್ ಪ್ರಕಾರ - epfindia.gov.in, ಇಪಿಎಫ್ ಖಾತೆಯಲ್ಲಿ, ಒಬ್ಬ ಉದ್ಯೋಗಿತನ್ನ ಸಂಬಳದ ಶೇಕಡಾ 12 ರಷ್ಟು ಹಣವನ್ನು ಖಾತೆಗೆ ಪಾವತಿಸುತ್ತಾನೆ, ಮತ್ತು ಉದ್ಯೋಗದಾತರು ಕೂಡ ಅದೇ ಸಮಾನ ಮೊತ್ತವನ್ನು ನೀಡುತ್ತಾರೆ.
SSLC' ಪಾಸಾದವರಿಗೆ ಭರ್ಜರಿ ಸಿಹಿಸುದ್ದಿ : 'RBI' ನಲ್ಲಿ 241 ಹುದ್ದೆಗಳಿಗೆ ಅರ್ಜಿ ಆಹ್ವಾನ
UMANG ಆಪ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ
ಎಸ್ ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ : ಮೊಬೈಲ್ ಸಂಖ್ಯೆಮಾತ್ರವಲ್ಲದೆ, UAN ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟ ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ ಎಸ್ ಎಂಎಸ್ ಕಳುಹಿಸುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ ನೀವು 'EPFOHO UAN' ಅನ್ನು 7738299899 ಗೆ ಎಸ್ ಎಂಎಸ್ ಮಾಡಬೇಕು.
ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? : UAN ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟ EPFO ಚಂದಾದಾರರು, ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯಲ್ಲಿ ತಮ್ಮ ಪಿಎಫ್ ವಿವರಗಳನ್ನು UAN ನಲ್ಲಿ ನೋಂದಾಯಿಸಿದ ಅವರ ಮೊಬೈಲ್ ಸಂಖ್ಯೆ011-22901406 ಗೆ ಮಿಸ್ಡ್ ಕಾಲ್ ಮೂಲಕ ಪಡೆಯಬಹುದು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now