Kannada News Now

1.8M Followers

GOOD NEWS: ರಾಜ್ಯಾದ್ಯಂತ ಪೋಸ್ಟ್ ಆಫೀಸ್ ಮೂಲಕ ನೀಡುತ್ತಿದ್ದ 'ಪಿಂಚಣಿ ರದ್ದು', ಇನ್ಮುಂದೆ 'ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ'

24 Jan 2021.6:29 PM

ಚಿಕ್ಕಮಗಳೂರು: : ಹಳ್ಳಿಕಟ್ಟೆಗೆ ಜಿಲ್ಲಾಧಿಕಾರಿ ಪ್ರಯಾಣ ಎನ್ನುವ ಯೋಜನೆಯನ್ನು ಶೀಘ್ರದಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಅಂತ ಕಂದಾಯ ಸಚಿವ ಆರ್‌.ಆಶೋಕ್‌ ಕುಮಾರ್‌ ಅವರು ಹೇಳಿದ್ದಾರೆ. ಅವರು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶ ಹಾಗೂ ಶೃಂಗೇರಿಯಲ್ಲಿ ಅಕ್ಷರ ಮಿತ್ರ ಕಾರ್ಯಕ್ರಮದ ಸಲುವಾಗಿ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಇಲ್ಲಿ ತನಕ ಜನ ಸಾಮಾನ್ಯರು ಪೆನ್ಷನ್, ಖಾತೆ, ಕಂದಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗೆ ತೆರಳುತ್ತ ತಮ್ಮ ಚಪ್ಪಲಿಯನ್ನು ಸವೆಸುತ್ತಿದ್ದು, ಆದರೆ ಈಗ ಅವರು ಕೂಡ ಚಪ್ಪಲಿಯನ್ನು ಸವೆಸಿ ಹಳ್ಳಿ ಕಡೆ ಪ್ರಯಾಣ ಮಾಡಲಿ ಜನರ ನೋವು-ನಲಿವು ಸುಖಃ-ದುಖಃಗಳ ಬಗ್ಗೆ ಪರಿಚಯವಾಗಲಿ ಅಂತ ಮಾರ್ಮಿಕವಾಗಿ ಹೇಳಿದರು.

ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಮೂರನೇ ಶನಿವಾರ ಎಲ್ಲಾ ಹಿರಿಯ ಅಧಿಕಾರಿಗಳು ಹಳ್ಳಿಗಳಲ್ಲಿ, ಗ್ರಾಮದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಇರಬೇಕು. ಯಾವ ಜಿಲ್ಲಾಧಿಕಾರಿಗೆ ಪೂರ್ತಿ ದಿನ ಇರಲು ಸಾಧ್ಯ ಅಂತಹವರು ಅಲ್ಲಿಯೇ ವಾಸ್ತವ್ಯ ಮಾಡಬೇಕು ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು, ಆದಾಯ ಇಲಾಖೆಯನ್ನು ಹಳ್ಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶ ಇಟ್ಟುಕೊಂಡು ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ ಎಂದರು.

ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಇದೇ 27 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗವನ್ನು ಮಾಡುತ್ತಿದ್ದು, ಮನೆ ಬಾಗಿಲಿಗೆ ಪೆನ್ಷನ್ ಹಣ ಕೊಡುವುದುಕ್ಕೆ ಮುಂದಾಗಿದ್ದು, ಆಧಾರ್ ಕಾರ್ಡ್‍ನಲ್ಲಿ ಯಾರಿಗೆ 60 ವರ್ಷ ವಯಸ್ಸಾಗಿದ್ದು, ನಮ್ಮ ರೆವಿನ್ಯೂ ಇನ್ಸ್‌ಪೆಕ್ಟರ್ ಅಥವ ವಿಲೇಜ್ ಅಕೌಂಟೆಂಟ್ ಅವರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಹಣ ಕೊಡುತ್ತಾರೆ. ಬ್ಯಾಂಕ್ ಪಾಸ್‍ಬುಕ್ ಕೊಟ್ಟರೆ ಸಾಕು. ನಾವು ಮತ್ಯಾವುದೇ ದಾಖಲೆ ಕೇಳಲ್ಲ ಎಂದು ತಿಳಿಸಿದರು. ಇನ್ಮುಂದೆ ರಾಜ್ಯಾದ್ಯಂತ ಪೋಸ್ಟ್ ಆಫೀಸ್ ಮೂಲಕ ಓಲ್ಡ್ ಏಜ್ ಪೆನ್ಷನ್ ಕೋಡೋ ವ್ಯವಸ್ಥೆ ಇಲ್ಲ ರದ್ದು ಮಾಡಲಾಗಿದೆ ಅಂತ ಹೇಳಿದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags