ವಿಜಯವಾಣಿ

505k Followers

ಕೇಂದ್ರ ಸರ್ಕಾರಿ ಉದ್ಯೋಗಿ ಆಗುವ ಆಸೆ ಇದೆಯೆ? ಹಾಗಿದ್ದರೆ ಇಲ್ಲಿವೆ ಭರಪೂರ ಅವಕಾಶ

28 Jan 2021.2:57 PM

ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕೆಂದು ಕನಸು ಹೊತ್ತ ಅಭ್ಯರ್ಥಿಗಳಿಗೆ ಯುಪಿಎಸ್‍ಸಿ ಸುವರ್ಣ ಅವಕಾಶ ಒದಗಿಸಿದೆ. ಕೇಂದ್ರ ವಿವಿಧ ಸಚಿವಾಲಯಗಳ ಇಲಾಖೆಗಳಲ್ಲಿ ಒಟ್ಟು 249 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿ, ಮುಂಬೈ ಹಾಗೂ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ನೇಮಕ ಮಾಡಬಹುದಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಲೋಕಸೇವಾ ಆಯೋಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 249

* ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ - 116
ಎನ್‍ಸಿಟಿ ದೆಹಲಿಯ ಇನ್​ಫಾರ್ಮೇಷನ್​ ಟೆಕ್ನಾಲಜಿ ಇಲಾಖೆಯಲ್ಲಿ ಒಟ್ಟು 116 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 52 ಸ್ಥಾನ, ಎಸ್ಸಿಗೆ 20, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 22, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 13 ಸ್ಥಾನ ಮೀಸಲಿರಿಸಿದ್ದು, ಇದರಲ್ಲಿ 5 ಸ್ಥಾನವನ್ನು ಅಂಗವಿಕಲರಿಗೆ ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಕಂಪ್ಯೂಟರ್ ಅಪ್ಲಿಕೇಷನ್ಸ್/ ಇನ್​ಫಾರ್ಮೇಷನ್​ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಟೆಕ್ನಾಲಜಿಯಲ್ಲಿ ಬಿಇ/ ಬಿಟಿಕ್/ ಸ್ನಾತಕೋತ್ತರ ಪದವಿ.
ವಯೋಮಿತಿ: ಗರಿಷ್ಠ 30 ವರ್ಷ.

* ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ - 80
ಗೃಹ ಇಲಾಖೆಯ ಅಭಿಯೋಜಕ ನಿರ್ದೇಶನಾಲಯದಲ್ಲಿ 80 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 29 ಸ್ಥಾನ, ಎಸ್ಸಿಗೆ 5, ಎಸ್ಟಿಗೆ 9, ಒಬಿಸಿಗೆ 18, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 19 ಸ್ಥಾನಗಳಿದ್ದು, ಇದರಲ್ಲಿ 4 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ: ಕಾನೂನು ಪದವಿ.
ವಯೋಮಿತಿ: ಗರಿಷ್ಠ 30 ವರ್ಷ.

* ಜೂನಿಯರ್ ಟೆಕ್ನಿಕಲ್ ಆಫೀಸರ್ - 6
ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಲ್ಲಿ 6 ಹುದ್ದೆಗಳಿವೆ. ಎಸ್ಸಿಗೆ 1, ಇತರ ಹಿಂದುಳಿದ ವರ್ಗಕ್ಕೆ 2, ಸಾಮಾನ್ಯವರ್ಗಕ್ಕೆ 3 ಸ್ಥಾನಗಳಿದ್ದು, ಇದರಲ್ಲಿ 1 ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ: ಆಯಿಲ್ ಟೆಕ್ನಾಲಜಿಯಲ್ಲಿ ಪದವಿ / ಆಯಿಲ್ ಟೆಕ್ನಾಲಜಿ ಇಂಜಿನಿಯರಿಂಗ್ ಪದವಿ
ವಯೋಮಿತಿ: ಗರಿಷ್ಠ 30 ವರ್ಷ.

* ಅಸಿಸ್ಟೆಂಟ್ ಡೈರೆಕ್ಟರ್ (ಮೀನುಗಾರಿಕೆ ಇಲಾಖೆ)- 1
ಈ ಹುದ್ದೆಯು ಸಾಮಾನ್ಯ ವರ್ಗದ ಅಂಗವಿಕಲ ಅಭ್ಯರ್ಥಿಗೆ ಮೀಸಲಾಗಿದ್ದು, ಮೀನುಗಾರಿಕೆ ಸಚಿವಾಲಯ ನೇಮಕ ಮಾಡಿಕೊಳ್ಳಲಿದೆ. ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಯಾಗಿದೆ.

* ಲೆಕ್ಚರ್ (ಮೆಡಿಕಲ್ ಸೋಷಿಯಲ್ ವರ್ಕ್) - 1
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಮುಂಬೈನಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆï ಫಿಜಿಕಲ್ ಮೆಡಿಸಿನ್ ಆಯಂಡ್ ರಿಹ್ಯಾಬಿಲಿಟೇಷನ್‍ನಲ್ಲಿ ಹುದ್ದೆ ಇದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ. ಗರಿಷ್ಠ ವಯೋಮಿತಿ 35 ವರ್ಷ. ಸೋಷಿಯಲ್ ವರ್ಕ್ (ಸ್ಪೆಷಲೈಸೇಷನ್ ಇನ್ ಮೆಡಿಕಲ್ ಆಯಂಡ್ ಸೈಕಿಯಾಟ್ರಿಕ್ಸ್ ಸೋಷಿಯಲ್ ವರ್ಕ್)ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ವೈದ್ಯಕೀಯ ಹುದ್ದೆಗಳ ವಿವರ
* ಸ್ಪೆಷಲಿಸ್ಟ್ ಗ್ರೇಡ್ ಐಐಐ ಅಸಿಸ್ಟೆಂಟ್ ಪ್ರೊಸಸರ್ (ಫಾರೆನ್​ಕ್ ಮೆಡಿಸಿನ್ - 6, ಪಬ್ಲಿಕ್ ಹೆಲ್ತ್ - 5, ಸರ್ಜಿಕಲ್ ಆಂಕೋಲಜಿ - 2, ಸೋಷಿಯಲ್ ಆಯಂಡ್ ಪ್ರಿವೆಂಟೀವ್ ಮೆಡಿಸೆನ್/ ಕಮ್ಯುನಿಟಿ ಮೆಡಿಸೆನ್ - 12, ಫಿಜಿಕಲ್ ಮೆಡಿಸಿನ್ ಆಯಂಡ್ ರಿಹ್ಯಾಬಿಲಿಟೇಷನ್ - 7, ರೇಡಿಯೋ ಥೆರಪಿ - 7, ಮೂತ್ರಶಾಸ - 6, )
ಈ ಮೇಲ್ಕಂಡ ಹುದ್ದೆಗಳಲ್ಲಿ ಸ್ಪೇಷಲೈಸೇಷನ್ ಅನುಗುಣವಾಗಿ ಎಂಬಿಬಿಎಸ್ ಪದವಿ ಪಡೆದಿರಬೇಕು. ಗರಿಷ್ಠ ವಯೋಮಿತಿ 40 ವರ್ಷ.

ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ನಂತರ ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಥವಾ ಕೇವಲ ಸಂದರ್ಶನ ಮೂಲಕವೂ ಆಯ್ಕೆ ಮಾಡಬಹುದಾಗಿದೆ.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಅಂಗವಿಲಕ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 12.2.2021
ಅಧಿಸೂಚನೆಗೆ: https://bit.ly/39qpGB3
ಮಾಹಿತಿಗೆ: https://www.upsconline.nic.in

ಎಸ್​ಎಸ್​ಎಲ್​ಸಿ ಕಲಿತವರಿಗೂ ಗುಡ್​ನ್ಯೂಸ್​: ಬೆಂಗಳೂರಿನ ಮಿಲಿಟರಿ ಶಾಲೆಯಲ್ಲಿದೆ ಉದ್ಯೋಗ

ಅಂಚೆ ಕಚೇರಿಯಲ್ಲಿವೆ ಡಾಕ್ ಸೇವಕ್‌ ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರಿಗೂ ಅವಕಾಶ

ಎಸ್‌ಎಸ್‌ಎಲ್‌ಸಿ ಆಗಿದ್ಯಾ? ಹಾಗಿದ್ರೆ ಆರ್‌ಬಿಐನಲ್ಲಿದೆ ಉದ್ಯೋಗ- ಬೆಂಗಳೂರಿನಲ್ಲೂ ಅವಕಾಶ

ಎಸ್​ಎಸ್​ಎಲ್​ಸಿಯಿಂದ ಉನ್ನತ ಪದವಿಯವರೆಗೂ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿವೆ ಹುದ್ದೆಗಳು

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags