Kannada News Now

1.8M Followers

`K-SET' ಪರೀಕ್ಷೆಗೆ ಅರ್ಜಿ ಆಹ್ವಾನ : ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

07 Feb 2021.09:35 AM

ಮೈಸೂರು : ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು 2021 ರ ಏಪ್ರಿಲ್ 11 ರಂದು ನಡೆಸಲಿದೆ.

ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಜಾಮೀನುರಹಿತ ವಾರೆಂಟ್​ ಹೊರಡಿಸಿದ ಎನ್​ಐಎ

ಕೆಎಸ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಯು ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯ, ಕಾಲೇಜು ಉನ್ನತ ಶಿಕ್ಷಣ ಸಂಸ್ಥೆ (ಸರಕಾರಿ ಅನುದಾನಿತ ಹಾಗೂ ಖಾಸಗಿ)ಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಉಪನ್ಯಾಸಕ ಹುದ್ದೆಗೆ ನೇಮಕಗೊಳ್ಳಲು ಅರ್ಹತೆ ಪಡೆಯುತ್ತಾರೆ. ಕೆಸೆಟ್ ಪರೀಕ್ಷೆಯ ಪ್ರಕಟಣೆ, ಅರ್ಹತಾ ನಿಬಂಧನೆ, ಪರೀಕ್ಷಾ ಪದ್ಧತಿ, ಪಠ್ಯಕ್ರಮ, ಮಾದರಿ ಪ್ರಶ್ನೆ ಪತ್ರಿಕೆ, ಅಭ್ಯರ್ಥಿಗಳಿಗೆ ಸೂಚನೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಮೊದಲಾದ ವಿವರವನ್ನು ಕೆಸೆಟ್ ಅಂತರ್ಜಾಲದಲ್ಲಿ http//:kset.unl-mysore.nic.in ಪ್ರಕಟಿಸಲಾಗಿದೆ.

ಪರೀಕ್ಷೆಯನ್ನು ವಿವಿಧ 41 ವಿಷಯಗಳಲ್ಲಿ ಯುಜಿಸಿಯ ಮಾರ್ಗದರ್ಶನದಂತೆ ನಡೆಸಲಾಗುವುದು ಹಾಗೂ ಈ ವಿಷಯಗಳ ಮಾಹಿತಿಯನ್ನು ಜಾಲತಾಣದಲ್ಲಿ ಪಡೆಯಬಹುದು.

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನ ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಶುಲ್ಕ ಸಾಮಾನ್ಯ ವರ್ಗದವರಿಗೆ 1150 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿಯವರಿಗೆ 950 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪಿಡಬ್ಲುಡಿ (ಪರ್ಸನ್ಸ್ ವಿತ್ ಡಿಸ್‌ಎಬಿಲಿಟೀಸ್) ವರ್ಗದವರಿಗೆ 650 ರೂ. ನಿಗದಿಪಡಿಸಲಾಗಿದೆ.

ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 9 ನೇ ಫೆಬ್ರವರಿ 2021

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07 ನೇ ಮಾರ್ಚ್ 2021

250 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮಾರ್ಚ್ 13 2021.

ತಾಲೂಕು ಪಂಚಾಯಿತಿ ವ್ಯವಸ್ಥೆ ತೆಗೆಯಲು ಸಾಧ್ಯವಿಲ್ಲ : ಸಚಿವ ಶಿವಾರಾಮ್ ಹೆಬ್ಬಾರ್

ನೋಂದಣಿ ನಂತರ ಬ್ಯಾಂಕ್ ಚಲನ್ ಪ್ರತಿ ತೆಗೆದುಕೊಂಡು ಪರೀಕ್ಷಾ ಶುಲ್ಕವನ್ನು `State Bank MOPS (Multi Option Payment System) ಯಾವುದೇ ಶಾಖೆಯಲ್ಲಿ ಪಾವತಿಸಿದ ಎರಡು ದಿನಗಳ ನಂತರ ಅಭ್ಯರ್ಥಿಗಳು ಅರ್ಜಿಯನ್ನು ಮತ್ತು ಇತರ ಪ್ರತಿಗಳಾದ ಹಾಜರಾತಿ ಪತ್ರ ಹಾಗೂ ಪ್ರವೇಶಪತ್ರವನ್ನು ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರವೇಶಪತ್ರ ಇಟ್ಟುಕೊಂಡು, ಅರ್ಜಿಯ ಪ್ರತಿ, ಹಾಜರಾತಿ ಪತ್ರ, ಜಾತಿ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಹಾಗೂ ಸ್ನಾತಕೋತ್ತರ ಪದವಿಯ ಅಂಕಪಟ್ಟಿ ಪ್ರತಿಯನ್ನು ಎ4 ಅಳತೆಯ ಲಕೋಟೆಯಲ್ಲಿ 'ಕೆ-ಎಸ್‌ಇಟಿ ಉಪನ್ಯಾಸಕರ ಅರ್ಹತಾ ಪರೀಕ್ಷೆ-2021' ಎಂದು ನಮೂದಿಸಿ, ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿಗೆ ಮಾರ್ಚ್ 15 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅನ್ನದಾತರ ಪ್ರತಿಭಟನೆ : ಟಿಕ್ರಿ ಗಡಿಯಲ್ಲಿ ಧರಣಿ ನಿರತ ರೈತ ಆತ್ಮಹತ್ಯೆ!







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags