Kannada News Now

1.8M Followers

`EPFO' ಖಾತೆದಾರರಿಗೆ ಮತ್ತೊಂದು ಗುಡ್ ನ್ಯೂಸ್

26 Dec 2020.06:14 AM

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ಸದಸ್ಯರ ನಿರೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಈಡೇರಲಿದೆ. 6 ಕೋಟಿ ನೌಕರರಿಗೆ ಈ ರೀತಿ ಲಾಭ ವಾಗಲಿದೆ. ಹೌದು 2021ರ ಜನವರಿ 1ಕ್ಕೆ ಮುನ್ನ ನೌಕರರ ಖಾತೆಗಳಿಗೆ ಇಪಿಎಫ್ ಒ ಬಡ್ಡಿ ಮೊತ್ತವನ್ನು ಸರ್ಕಾರ ಶೇ.8.5ರ ದರದಲ್ಲಿ ವರ್ಗಾಯಿಸಲಿದೆ ಎಂದು ತಿಳಿಸಿದೆ.

ಇದಕ್ಕೂ ಮೊದಲು ಸೆಪ್ಟೆಂಬರ್ ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಗಂಗ್ವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಇಪಿಎಫ್ ಒ ಬಡ್ಡಿದರವನ್ನು ಎರಡು ಕಂತುಗಳಲ್ಲಿ ಶೇ.8.15 ಮತ್ತು ಶೇ.0.35 ರಷ್ಟು ನೀಡುವುದಾಗಿ ಘೋಷಿಸಿತ್ತು.

ಉನ್ನತ ಮೂಲಗಳ ಪ್ರಕಾರ, 2019-20ನೇ ಸಾಲಿಗೆ 2 ಕಂತುಗಳಲ್ಲಿ ನೀಡುವ ಬದಲು ಶೇ 8.5ರಷ್ಟು ಬಡ್ಡಿ ಮೊತ್ತವನ್ನು ನೀಡುವಂತೆ ಕಾರ್ಮಿಕ ಸಚಿವಾಲಯ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಡಿಸೆಂಬರ್ ನಲ್ಲಿಯೇ ಈ ಪ್ರಸ್ತಾವ ವನ್ನು ಕಳುಹಿಸಲಾಗಿತ್ತು.

ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಈ ಪ್ರಸ್ತಾವನೆಗೆ ಅನುಮೋದನೆ ಸಿಗುವ ಭರವಸೆ ಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಮೊತ್ತವನ್ನು ಇಪಿಎಫ್ ಒ ಸದಸ್ಯರ ಖಾತೆಗಳಲ್ಲಿ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಇಪಿಎಫ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಅಧಿಕೃತ ಇಪಿಎಫ್ ಒ ವೆಬ್ ಸೈಟ್ epfindia.gov.in ಭೇಟಿ ನೀಡಿ
ಇ-ಪಾಸ್ ಬುಕ್ ಆಯ್ಕೆಯನ್ನು passbook.epfindia.gov.in
ನೀವು ನಿಮ್ಮ UAN ಸಂಖ್ಯೆ, ಪಾಸ್ ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಹಾಕಬೇಕಾಗುತ್ತದೆ
ಎಲ್ಲಾ ವಿವರಗಳನ್ನು ತುಂಬಿದ ನಂತರ, ಹೊಸ ಪುಟವು ತೆರೆಯುತ್ತದೆ ಅಲ್ಲಿ ನೀವು ಸದಸ್ಯ ಐಡಿಯನ್ನು ತೆರೆಯಬೇಕಾಗುತ್ತದೆ
ಈಗ ನಿಮ್ಮ ಖಾತೆಗಳಲ್ಲಿ ಒಟ್ಟು ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ

UMANg ಆಪ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ

UMANg ಆಪ್ (ಹೊಸ ಯುಗದ ಆಡಳಿತಕ್ಕಾಗಿ ಯುನಿಫೈಡ್ ಮೊಬೈಲ್ ಅಪ್ಲಿಕೇಶನ್) ತೆರೆಯಿರಿ ಮತ್ತು EPFO ಮೇಲೆ .
ಇನ್ನೊಂದು ಪುಟದಲ್ಲಿ ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ
'ವ್ಯೂ ಪಾಸ್ ಬುಕ್' ಆಯ್ಕೆಯನ್ನು
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮ್ಮ ಯುಎಎನ್ ನಂಬರ್ ಮತ್ತು ಪಾಸ್ ವರ್ಡ್ (OTP) ಅನ್ನು ಹಾಕಿರಿ.
ನೀವು ಈಗ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags