Kannada News Now

1.8M Followers

ತೆರಿಗೆದಾರರೇ: ʼರಿಟರ್ನ್ಸ್ʼ ತುಂಬಲು ನಿಮಗಿದು ಲಾಸ್ಟ್‌ ಚಾನ್ಸ್.. ಮಿಸ್‌ ಮಾಡ್ಕೊಂಡ್ರೆ ʼಡಬಲ್‌ ದಂಡʼ ಗ್ಯಾರೆಂಟಿ..!

10 Jan 2021.2:44 PM

ಡಿಜಿಟಲ್‌ ಡೆಸ್ಕ್: ನೀವಿನ್ನೂ‌ ಆದಾಯ ತೆರಿಗೆ ರಿಟರ್ನ್ ತುಂಬಿಲ್ಲವೇ? ಹೌದು, ಎಂದಾದಲ್ಲಿ, ಇಂದೇ (ಭಾನುವಾರ) ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ. ನೀವೇನಾದ್ರು ಇವತ್ತು ರಿಟರ್ನ್ಸ್ ತುಂಬದಿದ್ರೆ, ದುಪ್ಪಟ್ಟು ದಂಡ ತೆರಬೇಕಾಗುತ್ತದೆ.

ಜನವರಿ 10ರ ನಂತರ ತೆರಿಗೆದಾರ ರಿಟರ್ನ್ ಫೈಲ್ ಮಾಡಿದ್ರೆ, ಹೆಚ್ಚಿನ ದಂಡ ವಿಧಿಸಲಾಗುತ್ತೆ. ಹೌದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಎಫ್ ಅಡಿಯಲ್ಲಿ ಮೌಲ್ಯಮಾಪನ ವರ್ಷದಲ್ಲಿ ತಡವಾಗಿ ರಿಟರ್ನ್ ಸಲ್ಲಿಕೆಯಾದ್ರೆ ಗರಿಷ್ಠ 10 ಸಾವಿರ ರೂ. ದಂಡ ವಿಧಿಸಲಾಗುತ್ತೆ.

ಇನ್ನು ಜನವರಿ 10, 2021 ರಂದು ಅಂದ್ರೆ ಇಂದು ಮಧ್ಯಾಹ್ನ 12:34ಕ್ಕೆ ಟ್ವೀಟ್ ಮಾಡಿರುವ ಐಟಿ ಇಲಾಖೆ, 'ಇಂದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅಂಕಿ-ಅಂಶಗಳು ಇಲ್ಲಿವೆ.

ಇಂದು ಮಧ್ಯಾಹ್ನ 12 ಗಂಟೆವರೆಗೆ 5,03,415 #ITRs ಅರ್ಜಿ ಸಲ್ಲಿಸಲಾಗಿದೆ ಮತ್ತು 1,56,473 #ITRs ದಾಖಲಾಗಿದೆ. ಯಾವುದೇ ಸಹಾಯಕ್ಕಾಗಿ https://bit.ly/2YgCyk3 ನಲ್ಲಿ PL ಸಂಪರ್ಕ ಮಾಡಿ. ನಾವು ಸಹಾಯ ಮಾಡಲು ಸಂತೋಷಪಡುತ್ತೇವೆ ಎಂದಿದೆ.

ಈ ಹಿಂದೆ ಡಿಸೆಂಬರ್ 30ರಂದು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ನೀಡಿದ್ದ ಗಡುವನ್ನ ಸರ್ಕಾರ 10 ದಿನಗಳ ಕಾಲ 2021ರ ಜನವರಿ 10ರವರೆಗೆ ವಿಸ್ತರಿಸಿತ್ತು. ಇನ್ನು ಉದ್ಯಮಗಳು ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ.

ಐಟಿಆರ್ ಸಲ್ಲಿಕೆಗೆ ನೀಡಿದ್ದ ಗಡುವನ್ನು ಸರ್ಕಾರ ಜುಲೈ 31ರಿಂದ 2020ರ ನವೆಂಬರ್ 30ರವರೆಗೆ ಹಾಗೂ ನಂತರ ಡಿಸೆಂಬರ್ 31, 2020ರವರೆಗೆ ವಿಸ್ತರಿಸಿದೆ. ಅಲ್ಲದೆ, ನೇರ ತೆರಿಗೆ ವಿವಾದ ಪರಿಹಾರ ಯೋಜನೆ ವಿವಾದ್ ಸೆ ವಿಶ್ವಾಸ್ ಅವರ ಡಿಕ್ಲರೇಷನ್ ಡಿಕ್ಲರೇಷನ್ʼಗೆ ಅರ್ಜಿ ಸಲ್ಲಿಸಲು ಇರುವ ದಿನಾಂಕವನ್ನ ಜನವರಿ 31ರವರೆಗೆ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ.

ಇದಲ್ಲದೆ, 2019-20ನೇ ಹಣಕಾಸು ವರ್ಷದ ಜಿಎಸ್ ಟಿ ವಾರ್ಷಿಕ ರಿಟರ್ನ್ ಸಲ್ಲಿಸುವ ದಿನಾಂಕವನ್ನು 2021ರ ಫೆಬ್ರವರಿ 28ರವರೆಗೆ ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ.

ಜನವರಿ 10ರವರೆಗೆ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ 2019-20 ನೇ ಹಣಕಾಸು ವರ್ಷ (2020-21 ಮೌಲ್ಯಮಾಪನ ವರ್ಷ) ಮತ್ತು ಯಾವ ವ್ಯಕ್ತಿಗಳ ಲೆಕ್ಕಪತ್ರಗಳನ್ನ ಆಡಿಟ್ ಮಾಡಬೇಕಾಗಿಲ್ಲ ಮತ್ತು ಸಾಮಾನ್ಯವಾಗಿ ಐಟಿಆರ್-1 ಅಥವಾ ಐಟಿಆರ್-4 ಫಾರ್ಮ್ʼಗಳನ್ನ ಬಳಸಿಕೊಂಡು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕು.

ಲೆಕ್ಕಪರಿಶೋಧನೆಗೆ ಒಳಪಡಬೇಕಾದ ಇತರ ತೆರಿಗೆದಾರರ (ಸಂಸ್ಥೆಯ ಪಾಲುದಾರರೂ ಸೇರಿದಂತೆ) ಮತ್ತು/ಅಥವಾ ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕಾದ ಗಡುವು ಫೆಬ್ರವರಿ 15, 2021ರವರೆಗೆ ವಿಸ್ತರಿಸಲಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags