Oneindia

1.1M Followers

ಕೌಟುಂಬಿಕ ಪಿಂಚಣಿ ಮಿತಿ ಏರಿಕೆ, ಶುಭ ಸುದ್ದಿ ನೀಡಿದ ಸರ್ಕಾರ

14 Feb 2021.2:38 PM

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದೆ. ಕೌಟುಂಬಿಕ ಪಿಂಚಣಿ ಗರಿಷ್ಠ ಮಿತಿಯನ್ನು ಸರ್ಕಾರ ಏರಿಕೆ ಮಾಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದರಿಂದ ಲಕ್ಷಾಂತರ ಕುಟುಂಬಕ್ಕೆ ಪ್ರಯೋಜನವಾಗಲಿದೆ.

ಇಲ್ಲಿ ತನಕ ಕುಟುಂಬ ಪಿಂಚಣಿ ಗರಿಷ್ಠ ಮಿತಿ 45,000 ರು ನಷ್ಟಿತ್ತು. ಈಗ ಈ ಮಿತಿಯನ್ನು 1,25,000 ರು ಪ್ರತಿ ತಿಂಗಳಿಗೆ ಏರಿಕೆ ಮಾಡಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

ಆದರೆ, ಮೃತ ಪೋಷಕರ(ಇಬ್ಬರು ಸರ್ಕಾರಿ ನೌಕರರಾಗಿದ್ದು) ಪಿಂಚಣಿ(ಎರಡು ಕಡೆಯಿಂದ) ಮೊತ್ತ ಮಕ್ಕಳಿಗೆ ಸಿಗುವಾಗ ಎರಡು ಕುಟುಂಬದಿಂದ 1,25,000 ಪ್ರತಿ ತಿಂಗಳಿಗೆ ಎಂದು ನಿಗದಿಪಡಿಸಲಾಗಿದೆ. ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(DoPPW) ಅಧಿಸೂಚನೆಯನ್ನು ಪರಿಶೀಲಿಸಬಹುದು.

ತಿದ್ದುಪಡಿ ಏನು?: ಸಿಸಿಎಸ್ (ಪಿಂಚಣಿ) ನಿಯಮ 54(11) ರಂತೆ 2,50,000 ರು ಅರ್ಧದಷ್ಟು 1,25,000 ರು ಹಾಗೂ 2,50,000 ರು 30% ಅಂದರೆ 75,000 ರು ಎಂದು ನಿಗದಿಪಡಿಸಲಾಗಿದೆ.

ಈ ಹಿಂದಿನ ಆದೇಶದಲ್ಲಿ ಎರಡು ಕುಟುಂಬದ ಪಿಂಚಣಿ ಮೊತ್ತ 45,000 ರು ದಾಟುವಂತಿರಲಿಲ್ಲ. ಆದರೆ ಈಗ ಅಧಿಕ ಪ್ರಮಾಣದಲ್ಲಿ ಪಿಂಚಣಿ ಮೊತ್ತ ಕೈ ಸೇರಲಿದೆ.

source: goodreturns.in

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags