Kannada News Now

1.8M Followers

ಬ್ರೇಕಿಂಗ್‌: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

16 Feb 2021.11:33 AM

ಬೆಂಗಳೂರು: ಫೆಬ್ರವರಿ 22ರಿಂದ 6ರಿಂದ 8ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ವಿಚಾರವಾಗಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ವಿಧಾನಸೌಧದಲ್ಲಿ ನಡೆದ ಬಳಿಕ ಮಾಧ್ಯಮಗಳಿಗೆ ಸಚಿವ ಸುರೇಶ್‌ ಕುಮಾರ್‌ ಅವರು ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ, 9,10 ಹಾಗು ಪಿಯು ತರಗತಿಯ ಹಾಜರಾತಿ ಉತ್ತಮವಾಗಿತ್ತು, ನಾವು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಬೇಕು ಅಂಥ ಕೂಡ ಹೇಳಿರಲಿಲ್ಲ, ಈ ನಡುವಿನಲ್ಲೂ ಕೂಡ ವಿದ್ಯಾರ್ಥಿಗಳಿಂದ ಹಾಗೂ ಅವರ ಪೋಶಕರ ಕಡೆಯಿಂದ ಉತ್ತಮ ಸ್ಪಂದನೆ ಕಂಡು ಬಂದಿದೆ ಅಂತ ಹೇಳಿದರು. ವಿದ್ಯಾಗಮದ ಫಲಿತಾಂಶಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು ಅಂತ ಇದೇ ವೇಳೆ ಅವರು ಹೇಳಿದರು.

1 ರಿಂದ 8ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಪೋಷಕರು ಸರ್ಕಾರವನ್ನು ಒತ್ತಾಯ ಮಾಡಿದ್ದರು, ಇದಲ್ಲದೇ 5 ಬಾರಿ ಆರೋಗ್ಯ ಇಲಾಖೆಯ ಅಧಿಕಾರಗಳ ಜೊತೆಗೆ ಹಾಗೂ ಟಾಸ್ಕ್‌ ಫೋರ್ಸ್‌ ಜೊತೆಗೆ ಸಭೆ ನಡೆಸಿ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು. ಶಾಲೆ ಆರಂಭಿಸದ ಹಿನ್ನಲೆಯಲ್ಲಿ ಯಾವ ಪರಿಣಾಮವನ್ನು ಬೀರಲಿದೆ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಅಜೀಂ ಪ್ರೇಮ್‌ಜಿ ವಿವಿ ದೇಶದ ವಿವಿಧ ಕಡೆಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿದ್ದು, ಈ ವೇಳೆಯಲ್ಲಿ ಆಘಾತಕಾರಿಮಾಹಿತಿಯೊಂದು ಸಿಕ್ಕಿದ್ದು, ಶೇ 90 ಮಕ್ಕಳು ವಿದ್ಯಾಬ್ಯಾಸವನ್ನೇ ಮರೆತಿದ್ದಾರೆ ಅಂತ ಹೇಳಿದರು. ಇನ್ನೂ ಕೇರಳ ಭಾಗದಿಂದ ಬರುವ ಮಕ್ಕಳಿಗೆ ಶಿಕ್ಷಕರಿಗೆ ಕರೋನ ವರದಿ ಇರೋದು ಕಡ್ಡಾಯವಾಗಿದೆ ಅಂತ ಅವರು ಇದೇ ವೇಳೆ ಹೇಳಿದರು. ವರದಿಯಲ್ಲಿ ನೆಗೆಟಿವ್‌ ಇದ್ದರೆ ಮಾತ್ರ ಇವರಿಗೆ ತರಗತಿಗೆ ಬರಲು ಅವಕಾಶ ನೀಡಲಾಗಿವುದು. ಇನ್ನೂ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಈಗಾಗಲೇ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ.

ಮಕ್ಕಳು ಶಾಲೆಗೆ ಬರೋದು ಕಡ್ಡಾಯವಲ್ಲ, ಕೊಠಡಿಗಳ ಲಭ್ಯತೆಯನ್ನು ಆಧಾರಿಸಿ ಮುಂದಿನ ದಿನಗಳಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು, ಇದಲ್ಲದೇ ಎಲ್ಲಾ ಜಿಲ್ಲೆಗಳ ಹಾಸ್ಟೆಲ್‌ಗಳನ್ನು ತೆರೆಯುವುಕ್ಕೆ ಆದೇಶ ಮಾಡಲಾಗಿದ್ದು, ಇದರಿಂದ ಮಕ್ಕಳಿಗೆ ಸಹಾಯವಾಗಲಿದೆ. ಶಾಲೆ ಆರಂಭವಾಗುವುದಕ್ಕೂ ಮುನ್ನ ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆಗೆ ವಿಡಿಯೋ ಕಾನ್ಪೇರೆನ್ಸ್‌ ಮೂಲಕ ಮಾತನಾಡಲಾಗುವುದು ಇದಲ್ಲದೇ 1 ರಿಂದ 5 ನೇ ತರಗತಿಗಳನ್ನು ವಿದ್ಯಾಗಮನ ಮೂಲಕ ಶುರು ಮಾಡಲಾಗುವುದು ತದನಂತರ ಮುಂಬರುವ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags