Kannada News Now

1.8M Followers

ಡೈವೋರ್ಸ್‌ ನೀಡಿರುವ 'ಹೆಂಡ್ತಿಗೆ, ಗಂಡ ಜೀವನಾಂಶವನ್ನು' ಕೊಡಲೇ ಬೇಕು : ಸುಪ್ರಿಂಕೋರ್ಟ್‌ 'ಮಹತ್ವದ ಆದೇಶ'

21 Feb 2021.7:09 PM

ನವದೆಹಲಿ: ತನ್ನ ವಿಚ್ಚೇದಿತ ಹೆಂಡತಿಗೆ ಪತಿಯು ನೀಡಬೇಕಾಗಿರುವ ನಿರ್ವಹಣೆ ಹಣದ ಜವಾಬ್ದಾರಿಯಿಂದ ನುಣಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಒಕ್ಕಲಿಗರ ಮೀಸಲಾತಿ ಕಡಿತಗೊಳಿಸಿದ್ದು ದೇವೇಗೌಡರು - ಮಾಜಿ ಸಚಿವ ಎ.ಮಂಜು ಗಂಭೀರ ಆರೋಪ

ಪ್ರಕರಣದ ಹಿನ್ನಲೆ: ಟೆಲಿಕಾಂ ಕ್ಷೇತ್ರದ ರಾಷ್ಟ್ರೀಯ ಭದ್ರತೆಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ತಮಿಳುನಾಡು ನಿವಾಸಿ, ತನ್ನ ಬಳಿ ಹಣವಿಲ್ಲ, ತನ್ನ ವಿಚ್ಚೇದಿತ ಪತ್ನಿಗೆ ಹಣವನ್ನು ಪಾವತಿಸಲು ಎರಡು ವರ್ಷ ಕಾಲಾವಕಾಶ ನೀಡುವಂತೆ ನ್ಯಾಯಪೀಠದ ಮುಂದೆ ಕೇಳಿಕೊಂಡಿದ್ದರು. ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವನ್ನು ನೀಡಿದೆ.ಇದೇ ವೇಳೆ ನ್ಯಾಯಾಪೀಠ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಳ ಹಂತದ ನ್ಯಾಯಾಲಗಳು ನೀಡಿದ್ದ ತೀರ್ಪುಗಳನ್ನು ಅನುಸರಿಸಲು ಪದೇ ಪದೇ ವಿಫಲವಾದ ಬಗ್ಗೆ ಕೂಡ ಹೇಳಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀವು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದೀರಾ ಆಂತ ಚಾಟಿ ಬೀಸಿದೆ.

ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠವು, 'ಪತಿ ತನ್ನ ಪತ್ನಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಜೊತೆಗೆ ಜೀವನಾಂಶ ನೀಡುವುದು ಆತನ ಕರ್ತವ್ಯ' ಎಂದು ಹೇಳಿದೆ.

ಈ ಪ್ರಕರಣದಲ್ಲಿ, ಎರಡು ನ್ಯಾಯಾಲಯಗಳ ಅಡಿಯಲ್ಲಿ ತನ್ನ ಹೆಂಡತಿಗೆ ಹಣವನ್ನು ಪಾವತಿಸಲು ಉನ್ನತ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಸುಪ್ರಿಂಕೋರ್ಟ್‌ ನ್ಯಾಯಾಪೀಠ ಬಾಕಿ ಉಳಿದಿರುವ 2.60 ಕೋಟಿ ರೂ. ಜೊತೆಗೆ ಅವರ ಹೆಂಡತಿಗೆ ಮಾಸಿಕ 1.75 ಲಕ್ಷ ರೂ. ಪಾವತಿಸ ಬೇಕು ಇದನ್ನು ಮಾಡಲು ವಿಫಲವಾದರೆ ಜೈಲು ಶಿಕ್ಷೆಗೆ ಈಡಾಗಬೇಕಾಗುತ್ತದೆ ಅಂತ ತೀರ್ಪು ನೀಡಿದ್ದು. ಈ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ನಾಲ್ಕು ವಾರಗಳ ನಂತರ ಈ ವಿಷಯವನ್ನು ವಿಚಾರಣೆಗೆ ಕರೆಯಲಾಗಿದೆ.

Shocking News : ಸೆಕ್ಸ್​ಗೆ ಒತ್ತಾಯಿಸಿದ ಗಂಡನನ್ನು ಹೆಂಡತಿ ಮಾಡಿದ್ದೇನು ಗೊತ್ತಾ?

ಮಹಿಳೆ ಪರವಾಗಿ ಕೋರ್ಟಿನಲ್ಲಿ ಹಿರಿಯ ವಕೀಲ ಬಸವ ಪ್ರಭು ಪಾಟೀಲ್ ಅವರು ವಾದವನ್ನು ಮಂಡಿಸಿ ಉನ್ನತ ನ್ಯಾಯಾಲಯದ ಆದೇಶದ ಹೊರತಾಗಿಯೂ, ಅವರು ನಿರ್ವಹಣಾ ಮೊತ್ತವನ್ನು ಪಾವತಿಸುತ್ತಿಲ್ಲ ಮತ್ತು ಅದ್ದೂರಿಯಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಆತನ ಬಳಿ ಸಾಕಷ್ಟು ಹಣವಿದೆ ಮತ್ತು ತನ್ನ ಐದು ಕಂಪನಿಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಜರ್ಮನಿ ಮೂಲದ ಕಂಪನಿಗೆ ನೀಡಲು ಪ್ರಯತ್ನಿಸುತ್ತಿದ್ದಾನೆ ಎಂದು ವಕೀಲರು ಆರೋಪಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಪತಿ, ಟೆಲಿಕಾಂ ಕ್ಷೇತ್ರದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯೋಜನೆಯೊಂದನ್ನು ಕೈಗೆತ್ತಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿಗೆ ತನ್ನೆಲ್ಲ ಹಣವನ್ನು ವಿನಿಯೋಗಿಸಿರುವುದಾಗಿ ಹೇಳಿಕೊಂಡಿದ್ದಾರೆ. ಚೀನಾದಿಂದ ಟೆಲಿಕಾಂ ನೆಟ್ ವರ್ಕ್ ಗಳ ಹ್ಯಾಕಿಂಗ್ ಅನ್ನು ರಕ್ಷಿಸುವ ಯೋಜನೆಯೊಂದನ್ನು ತಾನು ರೂಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ನ್ಯಾಯಪೀಠ, ಅಗತ್ಯ ಬಿದ್ದರೆ ಪತಿ ಬ್ಯಾಂಕ್ ನಿಂದ ಸಾಲ ಪಡೆದು, ಒಂದು ವಾರದೊಳಗೆ ಜೀವನಾಂಶ ಹಾಗೂ ಬಾಕಿ ಹಣವನ್ನು ಪತ್ನಿಗೆ ಪಾವತಿಸಿ ಇಲ್ಲವೇ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಎಂದು ಆದೇಶ ನೀಡಿದ್ದಾರೆ. ತನ್ನ ಪತ್ನಿ ಅತ್ಯಂತ ಪ್ರಭಾವಿ ಮಹಿಳೆ ಯಾಗಿದ್ದು, ಮಾಧ್ಯಮಗಳೊಂದಿಗೆ ಸಂಬಂಧ ಹೊಂದಿದ್ದು, ತನ್ನ ಇಮೇಜ್ ಗೆ ಕಳಂಕ ತರಲು ಬಳಸಿಕೊಳ್ಳುತ್ತಿದ್ದಾರೆ ಎಂದು ಪತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ. ನ್ಯಾಯಪೀಠ, 'ನಾವು ಮಾಧ್ಯಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಪ್ರತಿಯೊಂದು ಪ್ರಕರಣದ ಸತ್ಯಾಂಶವನ್ನು ನಾವು ನೋಡುತ್ತೇವೆ ಅಂತ ಇದೇ ವೇಳೆ ಹೇಳಿದೆ. 2009ರಲ್ಲಿ ಪತ್ನಿ ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ದಪ್ರಕರಣ ವನ್ನು ಚೆನ್ನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಿದ್ದಳು.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags