ಕನ್ನಡದುನಿಯಾ

1.6M Followers

ಕೇಂದ್ರ ಸರ್ಕಾರಿ ನೌಕರರಿಗೆ ʼಬಂಪರ್ʼ ಕೊಡುಗೆ:‌ ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಮುಂಗಡ ಹಣ

22 Mar 2021.10:26 AM

ಹೋಳಿ ಹಬ್ಬಕ್ಕೆ ಇನ್ನು ಒಂದು ವಾರ ಬಾಕಿಯಿದೆ. ಈ ಬಾರಿ ತಿಂಗಳ ಕೊನೆಯಲ್ಲಿ ಹೋಳಿ ಬರ್ತಿದೆ. ಬಹುತೇಕ ನೌಕರರ ಜೇಬು ಖಾಲಿಯಾಗಿರುವ ಸಮಯವದು. ಹಬ್ಬ ಆಚರಿಸಲು ಹಣವಿಲ್ಲದೆ ಪರದಾಡುವ ನೌಕರರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರ, ನೌಕರರಿಗೆ ವಿಶೇಷ ಉತ್ಸವದ ಮುಂಗಡ ಯೋಜನೆಯ ಲಾಭವನ್ನು ನೀಡುತ್ತಿದೆ. 7ನೇ ವೇತನ ಆಯೋಗದಲ್ಲಿ ಯಾವುದೇ ಮುಂಗಡ ವೇತನದ ಪ್ರಸ್ತಾಪವಿಲ್ಲ. ಆದ್ರೂ ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಘೋಷಿಸಿದೆ. 6ನೇ ವೇತನ ಆಯೋಗದಲ್ಲಿ 4500 ರೂಪಾಯಿ ಸಿಗ್ತಿತ್ತು. ಈಗ ಸರ್ಕಾರ ಇದನ್ನು 10 ಸಾವಿರಕ್ಕೆ ಏರಿಸಿದೆ.

ಕೇಂದ್ರ ಸರ್ಕಾರಿ ನೌಕರರು ಹೋಳಿ ಆಚರಿಸಲು 10 ಸಾವಿರ ರೂಪಾಯಿ ಮುಂಗಡ ಹಣ ಪಡೆಯಬಹುದು. ಇದಕ್ಕೆ ಯಾವುದೇ ಬಡ್ಡಿಯಿಲ್ಲ.

ಇದ್ರ ಲಾಭ ಪಡೆಯಲು ಮಾರ್ಚ್ 31 ಕೊನೆ ದಿನ. ನೌಕರರು ಇದನ್ನು 10 ಕಂತುಗಳಲ್ಲಿ ವಾಪಸ್ ನೀಡಬೇಕು. ನೂರು ರೂಪಾಯಿ ಮಾಸಿಕ ಕಂತುಗಳಲ್ಲಿ ಅದನ್ನು ಮರು ಪಾವತಿ ಮಾಡಬೇಕು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags