ಕನ್ನಡದುನಿಯಾ

1.6M Followers

ಗೃಹ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್: 6 EMI ಮನ್ನಾ ಘೋಷಣೆ -LIC ಹೌಸಿಂಗ್ ಫೈನಾನ್ಸ್ ಮಹತ್ವದ ಕ್ರಮ

25 Mar 2021.7:42 PM

ಬೆಂಗಳೂರು: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಗೃಹ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಗೃಹ ವರಿಷ್ಠ ವಿಶೇಷ ಗೃಹ ಸಾಲ ಯೋಜನೆ ಸಾಲ ಪಡೆದುಕೊಂಡವರಿಗೆ 6 ಇಎಂಐ ಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ವೇತನದಾರ ಸಾಲಗಾರರು, ಡಿಫೈನ್ಡ್ ಬೆನಿಫಿಟ್ ಪೆನ್ಷನ್ ಸ್ಕೀಂ ಪಿಂಚಣಿದಾರರಿಗೆ ಯೋಜನೆ ಅನ್ವಯವಾಗಲಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗೃಹ ವರಿಷ್ಠ ವಿಶೇಷ ಗೃಹಸಾಲ ಯೋಜನೆಯಡಿ ಸಾಲ ಪಡೆದುಕೊಂಡಿದ್ದರೆ 37, 38, 73, 74 ಹಾಗೂ 121 ಮತ್ತು 122 ನೇ ಇಎಂಐ ಮನ್ನಾ ಮಾಡಲಾಗುವುದು.

ಅಡಮಾನ ಸಾಲ ನೀಡುವ ಸಂಸ್ಥೆಯಾದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಸೇವೆಯಲ್ಲಿರುವ ಅಥವಾ ನಿವೃತ್ತರಾದ ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ, ರಕ್ಷಣೆ, ರೈಲ್ವೆ, ಬ್ಯಾಂಕ್ ಮೊದಲಾದ ವಲಯಗಳಲ್ಲಿ ಇರುವವರು, PSU ಇನ್ಸೂರೆನ್ಸ್ ದಾರರಿಗೆ ಇತರೆ ಯಾರು ಅರ್ಹರೋ ಅವರಿಗೆ ಯೋಜನೆ ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸುವ ಸಮಯದಲ್ಲಿ ವಯಸ್ಸು 65 ವರ್ಷಗಳವರೆಗೆ ಇರಬಹುದು. ಸಾಲದ ಅವಧಿಯು 80 ವರ್ಷ ಅಥವಾ ಗರಿಷ್ಠ 30 ವರ್ಷಗಳವರೆಗೆ, ಯಾವುದು ಮೊದಲಿನದ್ದಾಗಿದೆಯೋ ಅದನ್ನು ಪರಿಗಣಿಸುವುದು. ಸಾಲದ ಉದ್ದೇಶವು ವಸತಿ ಫ್ಲ್ಯಾಟ್‌ಗಳು ಅಥವಾ ಮನೆಗಳ ಖರೀದಿ / ನಿರ್ಮಾಣಕ್ಕಾಗಿ ಮತ್ತು ಅಸ್ತಿತ್ವದಲ್ಲಿರುವ ಆಸ್ತಿಗಳ ರಿಪೇರಿ / ವಿಸ್ತರಣೆಯಾಗಿರಬಹುದಾಗಿದೆ.

ಹೆಚ್ಚಿನ ಸಾಲದ ಅರ್ಹತೆಗಾಗಿ, ಅರ್ಜಿದಾರರು ತಮ್ಮ ಗಳಿಸುವ ಮಕ್ಕಳೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಪಿಎಂಎವೈ ಸಿಎಲ್‌ಎಸ್‌ಎಸ್ ಮಾನದಂಡಗಳನ್ನು ಪೂರೈಸುವ ಸಾಲಗಾರರು 2.67 ಲಕ್ಷ ರೂ.ವರೆಗೆ ಬಡ್ಡಿ ಸಹಾಯಧನಕ್ಕೆ ಅರ್ಹರಾಗುತ್ತಾರೆ, ಇದಕ್ಕೆ ಬಡ್ಡಿ ಉಳಿತಾಯದ ರೂಪದಲ್ಲಿ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags