Kannada News Now

1.8M Followers

ALERT : ಏಪ್ರಿಲ್ 1 ರಿಂದ ನೌಕರರ ಕೆಲಸ, ಸಂಬಳದಲ್ಲಿ ಬದಲಾಗಬಹುದು

28 Mar 2021.10:18 AM

ನವದೆಹಲಿ: ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಹೊಸ ಹಣಕಾಸಿನ ಆರಂಭದೊಂದಿಗೆ ಹಲವಾರು ಬದಲಾವಣೆಗಳು ಸಹ ಕೂಡ ಆಗಲಿದ್ದಾವೆ. ಬದಲಾವಣೆಗಳಲ್ಲಿ ಪ್ರಮುಖವಾದವು ಅಂದ್ರೆ, ನೌಕರರ ಕೆಲಸದ ಸಮಯ ಮತ್ತು ಅವರ ಸಂಬಳದ ರಚನೆಯಲ್ಲಿನ ಬದಲಾವಣೆ. ಪ್ರಸ್ತುತ 9 ಗಂಟೆಗಳಿಂದ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ. ಆದಾಗ್ಯೂ, ಕೆಲಸದ ಸಮಯ ಹೆಚ್ಚಳದೊಂದಿಗೆ, ಸರ್ಕಾರವು ಕೆಲಸದ ದಿನಗಳ ಸಂಖ್ಯೆಯನ್ನು ವಾರದಲ್ಲಿ ನಾಲ್ಕು ದಿನಗಳಿಗೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆಭರಣ ಪ್ರಿಯರಿಗೆ ಶುಭಸುದ್ದಿ : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ

'ನಾನ್-ವೆಜ್' ಪುರುಷರಿಗೆ ಡೇಂಜರ್‌ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆಯಂತೆ

ಏಪ್ರಿಲ್ 1 ರಿಂದ ಗ್ರ್ಯಾಚುಟಿ ಮತ್ತು ಭವಿಷ್ಯ ನಿಧಿಯಲ್ಲಿನ ಹೆಚ್ಚಳ ಮತ್ತು ಟೇಕ್-ಹೋಮ್ ಸಂಬಳದಲ್ಲಿನ ಇಳಿಕೆಯೊಂದಿಗೆ ನೌಕರರ ವೇತನ ರಚನೆಯಲ್ಲಿನ ಬದಲಾವಣೆಯನ್ನು ಸಹ ಒಳಗೊಂಡಿರುತ್ತದೆ.

2020 ರಲ್ಲಿ ಸರ್ಕಾರ ಮೂರು ವೇತನ ಸಂಹಿತೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದರಿಂದ ಇದು ಜಾರಿಗೆ ಬರಲಿದೆ. ಈ ಮೂರು ಕಾನೂನುಗಳನ್ನು ಈಗ ಏಪ್ರಿಲ್ 1, 2021 ರಿಂದ ಜಾರಿಗೆ ತರಬಹುದು. ಇದರಿಂದ, ನೌಕರರ ಟೇಕ್-ಹೋಮ್ ಸಂಬಳ ಕಡಿಮೆಯಾಗುತ್ತದೆ. ಅಲ್ಲದೆ, ಇದರ ಪರಿಣಾಮವು ಎಲ್ಲಾ ಉದ್ಯೋಗಿಗಳು ಮತ್ತು ಉದ್ಯೋಗದಾತರ ಮೇಲೆ ಇರುತ್ತದೆ. ಖಾಸಗಿ ಕಂಪನಿಗಳ ಬ್ಯಾಲೆನ್ಸ್ ಶೀಟ್ ಕೂಡ ಈ ಹೊಸ ನಿಯಮದಿಂದ ಪ್ರಭಾವಿತವಾಗಿರುತ್ತದೆ ಎನ್ನಲಾಗಿದೆ.

  • ವೇತನದ ಹೊಸ ವ್ಯಾಖ್ಯಾನದಡಿಯಲ್ಲಿ, ಭತ್ಯೆಗಳು ಒಟ್ಟು ವೇತನದ ಶೇಕಡಾ 50 ರಷ್ಟಾಗುತ್ತದೆ.
  • ಹೊಸ ಕಾನೂನು ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
  • ಹೊಸ ನಿಯಮಗಳ ಪ್ರಕಾರ, ಈಗ ಮೂಲ ವೇತನವು ಒಟ್ಟು ವೇತನದ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಈ ಸಂದರ್ಭದಲ್ಲಿ, ನೌಕರರ ವೇತನದ ರಚನೆಯು ಬದಲಾಗುತ್ತದೆ.
  • ಭವಿಷ್ಯ ನಿಧಿಯು ಮೂಲ ವೇತನವನ್ನು ಆಧರಿಸಿರುವುದರಿಂದ, ಮೂಲ ವೇತನದ ಹೆಚ್ಚಳದೊಂದಿಗೆ ಪಿಎಫ್ ಹೆಚ್ಚಾಗುತ್ತದೆ, ಅಂದರೆ ಟೇಕ್-ಹೋಮ್ ಸಂಬಳದಲ್ಲಿ ಕಡಿತ ಉಂಟಾಗುತ್ತದೆ.
    ನೌಕರರ ಗ್ರ್ಯಾಚುಟಿ ಹೆಚ್ಚಳ ಮತ್ತು ಪಿಎಫ್‌ಗೆ ನೀಡಿದ ಕೊಡುಗೆ ನಿವೃತ್ತಿಯ ನಂತರ ಪಡೆದ ಮೊತ್ತವನ್ನು ಹೆಚ್ಚಿಸುತ್ತದೆ.
  • ಹೊಸ ಕರಡು ಕಾನೂನು ಗರಿಷ್ಠ 12 ಗಂಟೆಗಳ ಕಾಲ ಕೆಲಸ ಮಾಡಲು ಪ್ರಸ್ತಾಪಿಸಿದೆ.
  • ನಿಯಮಗಳ ಪ್ರಕಾರ, ಯಾವುದೇ ಉದ್ಯೋಗಿಯಿಂದ 5 ಗಂಟೆಗಳಿಗಿಂತ ಹೆಚ್ಚು ನಿರಂತರ ಕೆಲಸವನ್ನು ನಿಷೇಧಿಸಲಾಗಿದೆ.
  • ಪ್ರತಿ 5 ಗಂಟೆಗಳ ನಂತರ 30 ನಿಮಿಷಗಳ ವಿಶ್ರಾಂತಿ ನೀಡುವಂತೆ ನೌಕರರಿಗೆ ಸೂಚನೆ ನೀಡಲಾಗಿದೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags