Kannada News Now

1.8M Followers

BIGGNEWS: ಗ್ರಾಚ್ಯುಯಿಟಿ ಪಾವತಿಗೆ 'ನೌಕರರು ಅರ್ಜಿ ಸಲ್ಲಿಸುವ' ಅಗತ್ಯವಿಲ್ಲ , ಸಂಸ್ಥೆಯೇ ಪಾವತಿಸಬೇಕು: ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು

28 Mar 2021.01:00 AM

ಬೆಂಗಳೂರು : ಉದ್ಯೋಗಿಯು ತನ್ನ ಕಂಪಿನಿ/ಸಂಸ್ಥೆಯಿಂದ ಉದ್ಯೋಗ ತೊರೆದ 30 ದಿನಗಳಲ್ಲಿ ಸಂಸ್ಥೆಯೇ 30 ದಿನಗಳಲ್ಲಿ ಗ್ರ್ಯಾಚುಟಿ ಪಾವತಿಸಬೇಕಾಗಿದ್ದು. ಅದಕ್ಕಾಗಿ ನೌಕರ ಸಂಸ್ಥೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಉದ್ಯೋಗವನ್ನು ಮಾಡುವುದುನ್ನು ನಿಲ್ಲಿಸಿದ ನಂತರದ ಸಂಸ್ಥೆಯೇ ಈ ಮೊತ್ತವನ್ನು ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

1972ರ ಪಾವತಿ ಗ್ರಾಚ್ಯುಟಿ ಕಾಯಿದೆಯ ಸೆಕ್ಷನ್ 4ರ ಪ್ರಕಾರ ಉದ್ಯೋಗದಾತರು ಉದ್ಯೋಗ ವನ್ನು ನಿಲ್ಲಿಸಿದಲ್ಲಿ, ಆ ನೌಕರನ ಬೇಡಿಕೆಯನ್ನು ಪರಿಗಣಿಸದೆ, ಗ್ರಾಚ್ಯುಟಿಯನ್ನು ತಕ್ಷಣವೇತನವಾಗಿ ನೀಡಬೇಕು ಎಂದು ಕೋರ್ಟ್ ಹೇಳಿದೆ.

ಬೆಂಗಳೂರಿನ ವರ್ಮಾ ಇಂಡಸ್ಟ್ರಿಯಲ್ ಪ್ರೈ. ಲಿ ಹಾಗೂ ಐಬಿಸಿ ನಾಲೆಜ್ ಪಾರ್ಕ್ ನಲ್ಲಿ ಕೆಲಸ ಮಾಡಿದ್ದ ಪಿ.ಎನ್ ಜಾನಕಿರಾಮನ್ ಶೆಟ್ಟಿ 2002 ರಲ್ಲಿ ನಿವೃತ್ತಿ ಹೊಂದಿದ್ದರು.

ಆದರೆ, ಗ್ರ್ಯಾಚುಟಿಯನ್ನು 2015ರಲ್ಲಿ ಅರ್ಜಿ ಸಲ್ಲಿಸಿದ ನಂತರ ಪಾವತಿಸಲಾಗಿತ್ತು. ಈ ಕಾಯ್ದೆಯಡಿ ಯಲ್ಲಿ ಸ್ಥಾಪಿಸಲಾದ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು, ಇದೇ ವೇಳ ಸಕ್ಷಮ ಪ್ರಾಧಿಕಾರ ಗ್ರಾಚ್ಯುಟಿ ಪಾವತಿಸಲು 13 ವರ್ಷಗಳ ವಿಳಂಬಕ್ಕೆ ಬಡ್ಡಿ ಯನ್ನು ಪಾವತಿಸುವಂತೆ 2017ರಲ್ಲಿ ಕಂಪನಿಗೆ ನಿರ್ದೇಶನ ನೀಡಿತ್ತು. ಶೆಟ್ಟಿ ಅವರು ಕೆಲವು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದ ಐಬಿಸಿ ನಾಲೆಡ್ಜ್ ಪಾರ್ಕ್ ಗೆ ಪ್ರಾಧಿಕಾರವು ಬಡ್ಡಿ ಸಹಿತ ಗ್ರಾಚ್ಯುಟಿ ನೀಡುವಂತೆ ನಿರ್ದೇಶನ ನೀಡಿತ್ತು. ಆದರೆ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಲು ವಿಳಂಬ ವಾಗಿದ್ದಕ್ಕಾಗಿ ಗ್ರ್ಯಾಚುಟಿವನ್ನು ನೀಡಲು ತಡವಾಯಿತು ಇದಲ್ಲದೇ ಸಕ್ಷಮ ಪ್ರಾಧಿಕಾರ ನೀಡಿದ್ದ ಮೊತ್ತದ ಮೇಲೆ ಬಡ್ಡಿ ಯನ್ನು ಹೇರುವುದನ್ನು ಎರಡೂ ಕಂಪನಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಹೈಕೋರ್ಟ್ ಕಾಯ್ದೆಯ ನಿಮಯಾನುಸಾರ ಸಂಸ್ಥೆ ತಾನೇ ಮುಂದಾಗಿ ಉದ್ಯೋಗಿ ಕೆಲಸ ಕೊನೆಗೊಳಿಸಿದ 30 ದಿನಗಳಲ್ಲಿ ಗ್ರ್ಯಾಚುಟಿ ಪಾವತಿಸಬೇಕು. ಅದಕ್ಕಾಗಿ ಕೆಲಸ ಬಿಟ್ಟ ವ್ಯಕ್ತಿ ಅರ್ಜಿ ಸಲ್ಲಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಉಚ್ಚ ನ್ಯಾಯಾಲಯಗಳ ತೀರ್ಪಿನೊಂದಿಗೆ ಆದೇಶ ನೀಡಿದೆ.


 

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags