ವಿಜಯವಾಣಿ

505k Followers

ಏಪ್ರಿಲ್‌ ತಿಂಗಳಿನಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಇದೆಯೆ? ಹಾಗಿದ್ದರೆ ರಜೆಯ ಬಗ್ಗೆ ತಿಳಿದುಕೊಳ್ಳಿ

30 Mar 2021.09:55 AM

ನವದೆಹಲಿ: ಬಹುತೇಕ ಮಂದಿಗೆ ಪ್ರತಿ ದಿನವೂ ಬ್ಯಾಂಕ್‌ಗಳಲ್ಲಿ ಕೆಲಸ ಇದ್ದೇ ಇರುತ್ತದೆ. ಅದರಲ್ಲಿಯೂ ಉದ್ಯಮಿಗಳು, ಕೆಲವೊಂದು ವ್ಯಾಪಾರ ವಹಿವಾಟು ನಡೆಸುವವರಿಗೆ ಬ್ಯಾಂಕ್‌ ವ್ಯವಹಾರ ಸಾಮಾನ್ಯ.

ಆದ್ದರಿಂದ ಏಪ್ರಿಲ್‌ ತಿಂಗಳಿನಲ್ಲಿ ನಿಮಗೇನಾದರೂ ಬ್ಯಾಂಕ್‌ಗಳಲ್ಲಿ ವ್ಯವಹಾರಗಳು ಇದ್ದರೆ ಅದರ ರಜೆಯ ಬಗ್ಗೆ ತಿಳಿದುಕೊಳ್ಳಿ. ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಕೆಲವೊಂದು ರಜೆಗಳಲ್ಲಿ ವ್ಯತ್ಯಾಸವಾಗಲಿದೆ. ಕರ್ನಾಟಕದಲ್ಲಿರುವ ಬ್ಯಾಂಕ್‌ಗಳಿಗೆ ರಿಸರ್ವ್‌ ಬ್ಯಾಂಕ್‌ ಯಾವೆಲ್ಲಾ ದಿನ ರಜೆ ಘೋಷಿಸಿದೆ ಎಂದು ಇಲ್ಲಿದೆ ನೋಡಿ ವಿವರ:

ಏಪ್ರಿಲ್ 1 ಗುರುವಾರ -ವಾರ್ಷಿಕ ಖಾತೆಗಳ ಮುಕ್ತಾಯದ ದಿನ/ ಹೊಸ ಆರ್ಥಿಕ ವರ್ಷ ಆರಂಭ
ಏಪ್ರಿಲ್ 2 ಶುಕ್ರವಾರ - ಗುಡ್ ಫ್ರೈಡೇ
ಏಪ್ರಿಲ್‌ 4 ಭಾನುವಾರ
ಏಪ್ರಿಲ್‌ 10 ಎರಡನೇ ಶನಿವಾರ
ಏಪ್ರಿಲ್‌ 11 ಭಾನುವಾರ
ಏಪ್ರಿಲ್ 13 ಮಂಗಳವಾರ -ಯುಗಾದಿ
ಏಪ್ರಿಲ್ 14 ಬುಧವಾರ -ಅಂಬೇಡ್ಕರ್ ಜಯಂತಿ
ಏಪ್ರಿಲ್ 18, ಭಾನುವಾರ
ಏಪ್ರಿಲ್ 24 ನಾಲ್ಕನೇ ಶನಿವಾರ
ಏಪ್ರಿಲ್‌ 25 ಭಾನುವಾರ

ವಾರದಿಂದ ಉಂಟಾಗಿದ್ದ ಭಯಾನಕ ಟ್ರಾಫಿಕ್​ ಜಾಮ್​ಗೆ ಕೊನೆಗೂ ಸಿಕ್ತು ಅಲ್ಪ ಮುಕ್ತಿ- ಅಲುಗಾಡಿದ ವಾಹನ!

ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಹೊಡೆದು ವಿವಾದ ಮೈಮೇಲೆ ಎಳೆದುಕೊಂಡ ಕೇಂದ್ರ ಸಚಿವ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags