Kannada News Now

1.8M Followers

ವಾಹನ ಸವಾರರಿಗೆ ಬಿಗ್‌ ರಿಲೀಫ್‌: ದಾಖಲೆಗಳ ಸಿಂಧುತ್ವದ ಅವಧಿ ʼಜೂ.30ರʼವರೆಗೆ ವಿಸ್ತರಣೆ..!

29 Mar 2021.4:59 PM

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ರಾಜ್ಯಗಳಿಗೆ ಹೊರಡಿಸಿರುವ ಸಲಹೆಯ ಪ್ರಕಾರ, ಕೊರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ವಾಹನ ದಾಖಲೆಗಳ ಸಿಂಧುತ್ವವನ್ನ 2021ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಈ ಸಿಂಧುತ್ವವು ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಅಡಿಯಲ್ಲಿ ಅರ್ಹವಾದ ದಾಖಲೆಗಳಿಗೆ ವಿಸ್ತರಿಸುತ್ತದೆ. ಇವುಗಳಲ್ಲಿ ಫಿಟ್ ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಮತ್ತಿತರ ದಾಖಲೆಗಳು ಸೇರಿವೆ. ಈ ಹಿಂದೆ ಇದರ ಸಿಂಧುತ್ವ ಅವಧಿ 2020ರ ಫೆಬ್ರವರಿ 1ರವರೆಗೆ ಇತ್ತು. ನಂತ್ರ ಮಾರ್ಚ್ 31, 2021ರವರೆಗೆ ವಿಸ್ತರಿಸಲಾಯ್ತು. ಸಧ್ಯ ಈ ದಿನಾಂಕವನ್ನೂ ವಿಸ್ತರಿಸಿದ್ದು, ಜೂನ್‌ 30ರ ಹೊಸ ಗಡುವು ನೀಡಲಾಗಿದೆ.

BIG BREAKING NEWS : ರಾಜ್ಯದ 7 ನಗರಸಭೆ, 3 ಪುರಸಭೆ ಹಾಗೂ 2 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆ : ಇಲ್ಲಿದೆ ಮಾಹಿತಿ

'ಫೆಬ್ರವರಿ 1ರಿಂದ ಅವಧಿ ಮುಗಿದಿರುವ ದಾಖಲೆಗಳ ಸಿಂಧುತ್ವ 2021ರ ಜೂನ್ 30ರವರೆಗೆ ಅನ್ವಯವಾಗಲಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ. 2021ರ ಜೂನ್ 30ರ ವರೆಗೂ ಅಂತಹ ದಾಖಲೆಗಳನ್ನು ಮಾನ್ಯ ಎಂದು ಪರಿಗಣಿಸುವಂತೆ ಜಾರಿ ನಿರ್ದೇಶನಾಲಯಗಳಿಗೆ ಸೂಚಿಸಲಾಗಿದೆ. ಇದು ನಾಗರಿಕರಿಗೆ ಸಾರಿಗೆ ಸಂಬಂಧಿತ ಸೇವೆಗಳನ್ನ ಪಡೆಯಲು ಸಹಾಯ ಮಾಡುತ್ತದೆ' ಎಂದು MoRTH ತನ್ನ ಸಲಹಾ ಹೇಳಿಕೆಯಲ್ಲಿ ತಿಳಿಸಿದೆ.

ವಾಹನ ಮಾಲೀಕರಿಗೆ ಪರಿಹಾರ ನೀಡಲು ಹಾಗೂ ಸಾರಿಗೆ ಪ್ರಾಧಿಕಾರದ ಕಚೇರಿಗಳಲ್ಲಿ ನಯಾಜ್ʼಗೆ ಕಡಿವಾಣ ಹಾಕಲು ರಾಷ್ಟ್ರವ್ಯಾಪಿ ಬಂದ್ ಹಿನ್ನೆಲೆಯಲ್ಲಿ 2020ರ ಮಾರ್ಚ್ 30ರಂದು ಈ ವ್ಯಾಲಿಡಿಟಿಯನ್ನು ವಿಸ್ತರಿಸಲಾಗಿತ್ತು. ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ದೀರ್ಘಕಾಲ‌ ವಿಸ್ತರಣೆಗಳಿಗೆ ಅನುಮತಿ ನೀಡುವುದಷ್ಟೇ ತಾರ್ಕಿಕವಾಗಿತ್ತು. 2020ರ ಜೂನ್ 9ರ ವರೆಗೂ ಇದೇ ರೀತಿಯ ವಿಸ್ತರಣೆಗಳನ್ನು ಸರ್ಕಾರ ಘೋಷಿಸಿತ್ತು. ಆಗಸ್ಟ್ 9, 2020, ನಂತರ ಡಿಸೆಂಬರ್ 27, 2020ರವರೆಗೆ. ನಂತರ 2021ರ ಫೆಬ್ರವರಿ 1ರ ವರೆಗೂ ವಿಸ್ತರಣೆ ಅವಧಿ ಪರಿಷ್ಕರಿಸಲಾಗಿದ್ದು, ಮಾರ್ಚ್ 31ರ ವರೆಗೆ ಚಾಲ್ತಿಯಲ್ಲಿತ್ತು. ಈಗ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ಮುಳುಗುವ ಕಾಂಗ್ರೆಸ್ ಹಡಗಿಗೆ ಡಿ.ಕೆ.ಶಿವಕುಮಾರ್ ಕ್ಯಾಪ್ಟನ್ : ಸಚಿವ ಶ್ರೀರಾಮುಲು ವ್ಯಂಗ್ಯ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags