Kannada News Now

1.8M Followers

BIG BREAKING NEWS : 'ಸಿಎಸ್' ಹೊರತಾಗಿ ಯಾವುದೇ ಸಚಿವರು, ಅಧಿಕಾರಿಗಳು 'ಕೊರೋನಾ ನಿಯಂತ್ರಣ' ಕುರಿತು ಹೇಳಿಕೆ, ಆದೇಶ ನೀಡುವಂತಿಲ್ಲ - ಸಿಎಂ ಯಡಿಯೂರಪ್ಪ ಖಡಕ್ ಸೂಚನೆ

29 Mar 2021.5:35 PM

ಬೆಂಗಳೂರು : ಕೇಂದ್ರ ಗೃಹ ಮಂತ್ರಾಲಯದ ಮಾದರಿಯಲ್ಲೇ ರಾಜ್ಯಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ತೆರವುಗೊಳಿಸುವಿಕೆ, ಪುನರಾರಂಭ, ಕಂಟೈನ್ಮೆಂಟ್ ವಿವಿಧ ನಿರ್ಭಂಧಗಳನ್ನು ಹೇರುವುದು ಇತ್ಯಾದಿ ಆದೇಶಗಳನ್ನು ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ರಾಜ್ಯದ ಕಾರ್ಯಕಾರಿ ಸಮಿತಿಗೆ ಸೆಕ್ರೆಟೇರಿಯಲ್ ನೆರವು ನೀಡುತ್ತಿರುವುದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗವು ಕಾಲಕಾಲಕ್ಕೆ ಹೊರಡಿಸುತ್ತಿದೆ. ಆದ್ರೇ ಇತ್ತೀಚೆಗೆ ಆದೇಶಗಳನ್ನು ಇತರೆ ಇಲಾಖೆಗಳು ಹೊರಡಿಸುತ್ತಿರುವುದನ್ನು ಗಮನಿಸಲಾಗಿದೆ. ಸದರಿ ಆದೇಶಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಬಹುದೇ ವಿನಹ, ಹೊಸ ನಿರ್ಬಂಧಗಳನ್ನು ಹೇರಿಸುವ ಬಗ್ಗೆ ಯಾವುದೇ ಸಚಿವರಾಗಲೀ, ಅಧಿಕಾರಿಗಳಾಗಲೀ, ಪತ್ರಿಕಾ ಹೇಳಿಕೆ ನೀಡಬಾರಂದೆಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಆಗಿ ಆದೇಶಿಸಿದ್ದಾರೆ.

BIG BREAKING NEWS : ಮಾಜಿ ಸಚಿವರ ಸಿಡಿ ಕೇಸ್ ಗೆ ಅತಿ ದೊಡ್ಡ ಟ್ವಿಸ್ಟ್ : ಸಿಡಿ ಯುವತಿ ಹಾಜರಾಗಲು ಕೋರ್ಟ್ ಅನುಮತಿ

ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಲ್ಲಾ ಸಚಿವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೋವಿಡ್-19ಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನದಲ್ಲಿ ಏಕರೂಪತೆ ಮತ್ತು ದೃಢತೆಯನ್ನು ತರಲು ಭಾರತ ಸರ್ಕಾರವು ಅನುಸರಿಸುತ್ತಿರುವ ವಿಧಾನವನ್ನೇ ರಾಜ್ಯ ಸರ್ಕಾರವು ಪಾಲಿಸಲು, ಇನ್ನು ಮುಂದೆ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಕಂಟೈನ್ಮೆಂಟ್, ಜನರ ಮತ್ತು ವಾಹನಗಳ ಸಂಚಾರ ಮತ್ತು ಗುಂಪುಗಾರಿಕೆ ನಿರ್ಬಂಧ ಹೇರುವುದನ್ನು, ಅನುಮತಿ ನೀಡಿದ, ನೀಡಲಾದ ಚಟುವಟಿಕೆಗಳು ಮತ್ತು ಸಂಬಂಧಿತ ವಿಷಯಗಳನ್ನು ಕುರಿತು ಯಾವುದೇ ಸೂಚನೆ ಮತ್ತು ನಿರ್ದೇಶನವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಮಾತ್ರ ಹೊರಡಿಸುವುದು.

ಸಚಿವರಿಗೆ ಚೆಲ್ಲಾಟ, ಜನರಿಗೆ 'ಕೋವಿಡ್ ಸಂಕಟ', ಸರ್ಕಾರಕ್ಕೆ 'ಸಿಡಿ ಕಾಟ' - ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಕಿಡಿ

ಅಂತಹ ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿಯವರ ಅನುಮೋದನೆ ಪಡೆದ ನಂತ್ರವೇ ಹೊರಡಿಸತಕ್ಕದ್ದು. ಸದರಿ ಆದೇಶಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಬಹುದೇ ವಿನಹ, ಹೊಸ ನಿರ್ಬಂಧಗಳನ್ನು ಹೇರಿಸುವ ಬಗ್ಗೆ ಯಾವುದೇ ಸಚಿವರಾಗಲೀ, ಅಧಿಕಾರಿಗಳಾಗಲೀ ಪತ್ರಿಕಾ ಹೇಳಿಕೆ ನೀಡಬಾರದೆಂದು ಸೂಚಿಸಿದ್ದಾರೆ.

BREAKING: ಗಡ್ಚಿರೋಲಿ ಅರಣ್ಯದಲ್ಲಿ ಪೊಲೀಸ್-ನಕ್ಸಲರ ನಡುವೆ ಗುಂಡಿನ ಚಕಮಕಿ, 5 ನಕ್ಸಲರ ಹತ್ಯೆ

ಮುಖ್ಯ ಕಾರ್ಯದರ್ಶಿಯವರು ಹೊರಡಿಸಿದ ಮೇಲ್ಕಂಡ ಆದೇಶಗಳ ಆಧಾರದ ಮೇಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳು ನಿರ್ಧಿಷ್ಟವಾದ ಎಸ್‌ಓಪಿಗಳನ್ನು ಹೊರಡಿಸುವುದು ಎಂಬುದಾಗಿ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags