ಈ ಸಂಜೆ

803k Followers

ಇನ್ನೂಈಡೇರದ ಬೇಡಿಕೆಗಳು, ಧರಣಿ-ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಾರಿಗೆ ನೌಕರರು

30 Mar 2021.2:10 PM

ಬೆಂಗಳೂರು, ಮಾ.30- ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ನ್ಯಾಯಯುತವಾಗಿ ಈಡೇರಿಸಿಲ್ಲ. ಹೀಗಾಗಿ ಏ.7ರಿಂದ ಅನಿರ್ದಿಷ್ಟಾವ ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿರ್ದಿಷ್ಠಾವ ಮುಷ್ಕರಕ್ಕೂ ಮುನ್ನ ನಾನಾ ರೀತಿಯ ಚಳವಳಿಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ಏ.1ರಿಂದ 6ರವರೆಗೆ ಸಂಸ್ಥೆಯ ಎಲ್ಲಾ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರದ ಗಮನ ಸೆಳೆಯಲಿದ್ದಾರೆ.ಏ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ ಮತ್ತು ಬಜ್ಜಿ, ಬೋಂಡಾಗಳನ್ನು ತಯಾರಿಸಿ ನೌಕರರು ಮಾರಾಟ ಮಾಡಲಿದ್ದಾರೆ.

ಏ.3ರಂದು ನೌಕರರು ಮತ್ತು ಕುಟುಂಬದ ಸದಸ್ಯರು ನಗರದ ಮುಖ್ಯ ಸರ್ಕಲ್‍ಗಳಲ್ಲಿ ಮಾನವ ಸರಪಣಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟಿಸಲಿದ್ದಾರೆ.

ಏ.4ರಂದು ಸರ್ವಜನಿಕರಿಗೆ ಕರಪತ್ರ ಹಂಚುವುದು, ಫೇಸ್‍ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಬೇಡಿಕೆಗಳನ್ನು ಮಂಡಿಸಲಾಗುವುದು.ಏ.5ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಏ.6ರಂದು ನೌಕರರ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ನೌಕರರು ಈ ಮೊದಲು ನಡೆಸಿದ ಪ್ರತಿಭಟನೆ ವೇಳೆ ಮಂಡಿಸಲಾಗಿದ್ದ 9 ಬೇಡಿಕೆಗಳ ಪೈಕಿ 8ಅನ್ನು ಈಡೇರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಅವು ನ್ಯೂನ್ಯತೆಯಿಂದ ಕೂಡಿವೆ. ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತಂತೆ ಈವರೆಗೆ ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ. ನಮ್ಮ ಕೂಟದ ಪದಾಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆದಿದೆ. ಅದರ ಹೊರತು ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಆರೋಗ್ಯ ಸೇವೆಯ ಬೇಡಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ 2016 ಸುತ್ತೋಲೆಯನ್ನೇ ಮುಂದುವರಿಸಲಾಗಿದೆ. ಅಂತರ್‍ನಿಗಮಗಳ ವರ್ಗಾವಣೆ ಪದ್ಧತಿ ವೈಜ್ಞಾನಿಕವಾಗಿ ಶಿಕ್ಷಕರ ಕೌನ್ಸಲಿಂಗ್ ಮಾದರಿಯಲ್ಲಿ ನಡೆಯಬೇಕೆಂದು ಕೇಳಲಾಗಿತ್ತು. ಹಲವಾರು ನಿಬಂಧನೆಗಳನ್ನು ಹಾಕಿ ಶೇ.2ರಷ್ಟು ವರ್ಗಾವಣೆಗೆ ಅವಕಾಶ ನೀಡಿದ್ದಾರೆ.

ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಘಟಕಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳು ಹೆಚ್ಚುತ್ತಿವೆ. ಓಟಿ ನೀಡದೆ ಹೆಚ್ಚಿನ ಸಮಯ ದುಡಿಸಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ಅನಾನುಕೂಲವಾಗುವಂತಹ ಪಾಳಿ ಕೆಲಸ ಮಾಡಲಾಗುತ್ತಿದೆ. ವಿರೋಧದ ನಡುವೆಯೂ ರೋಟಾ ಜಾರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಎನ್‍ಐಎನ್‍ಸಿ ಪದ್ಧತಿಯಲ್ಲಿ ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಳೆಯ ಸುತ್ತೋಲೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿದೆ. ಅದರ ಬದಲಾಗಿ ಅದನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಎಚ್‍ಆರ್‍ಎಂಎಸ್ ಪದ್ಧತಿ ಜಾರಿಯಾಗಿಲ್ಲ. ಬಾಟಾ, ಭತ್ಯೆ ಮತ್ತು ಓಟಿಯನ್ನು ಪರಿಷ್ಕರಿಸಲಾಗಿಲ್ಲ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಪೈಕಿ ಕೆಎಸ್‍ಆರ್‍ಟಿಸಿ 7 ನೌಕರರ ಕುಟುಂಬಕ್ಕೆ ಮಾತ್ರ 30 ಲಕ್ಷ ಜೀವ ವಿಮೆ ನೀಡಲಾಗಿದೆ. ಉಳಿದವರಿಗೆ ಕೊಟ್ಟಿಲ್ಲ.

ಎರಡು ವರ್ಷ ತರಬೇತಿ ಅವಯನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಭವಿಷ್ಯದಲ್ಲಿ ನೇಮಕವಾಗುವ ನೌಕರರಿಗೆ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, 2020ರ ಜನವರಿ 1ರಿಂದ ಮಾತ್ರ ಇದನ್ನು ಜಾರಿಗೊಳಿಸುವಂತೆ ಸೂಚನೆ ನೀಡುವ ಮೂಲಕ ಈಗಾಗಲೇ ತರಬೇತಿ ಪಡೆಯುತ್ತಿರುವ ನೌಕರರಿಗೆ ಅನುಕೂಲವಾಗದಂತೆ ಮಾಡಲಾಗಿದೆ ಎಂದು ಆರೋಪಿಸಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags