Oneindia

1.1M Followers

ಏಪ್ರಿಲ್ 1ರಿಂದ ಬದಲಾಗಲಿದೆ ಸ್ವಯಂಚಾಲಿತ ಪಾವತಿ; ಆರ್‌ಬಿಐ ಹೊಸ ನಿಯಮದಲ್ಲಿ ಏನಿದೆ?

31 Mar 2021.05:00 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮದಿಂದಾಗಿ ಮೊಬೈಲ್, ವಿದ್ಯುತ್ ಹಾಗೂ ಇನ್ನಿತರೆ ಬಿಲ್‌ಗಳ ಪಾವತಿಗಾಗಿ ನಿಮ್ಮ ಬ್ಯಾಂಕ್‌ ಖಾತೆಯಿಂದ ಮಾಡುತ್ತಿದ್ದ ಸ್ವಯಂಚಾಲಿತ ಪಾವತಿಗಳು (ಆಟೊ ಡೆಬಿಟ್) ನಿಯಮಗಳು ಹಾಗೂ ಒಟಿಟಿ ಪ್ಲಾಟ್‌ಫಾರಂ ಬಳಕೆ ಮೇಲಿನ ಶುಲ್ಕಗಳು ಏಪ್ರಿಲ್ 1ರಿಂದ ಬದಲಾಗುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಅಥವವಾ ಇನ್ನಿತರ ಪ್ರಿಪೇಡ್ ಇನ್‌ಸ್ಟ್ರುಮೆಂಟ್ (ಪಿಪಿಐ) ಮೂಲಕ ಮಾಡುವ ವಹಿವಾಟಿನ ಕುರಿತು ಹೆಚ್ಚುವರಿ ದೃಢೀಕರಣ ನಿರೀಕ್ಷಿಸಿರುವ ಈ ನಿಯಮದಿಂದಾಗಿ (Additional factor authentication) ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರುವುದಾಗಿ ತಿಳಿದುಬಂದಿದೆ.

ಆರ್‌ಬಿಐ ನಿಯಮ ಏನು ಹೇಳುತ್ತಿದೆ? ನಿಮಗೆ ಇದು ಹೇಗೆ ಅನ್ವಯವಾಗುತ್ತದೆ?

ಹೊಸ ನಿಯಮ ಹಾಗೂ ಅದರ ಪ್ರಭಾವದ ಕುರಿತು ತಿಳಿದುಕೊಳ್ಳಲು ಈ ಹತ್ತು ಪ್ರಮುಖ ಅಂಶಗಳನ್ನು ನೋಡಿ...

ರೆಪೋ, ರಿವರ್ಸ್ ರೆಪೋ ದರ ಎಂದರೇನು? ಸಿಆರ್‌ಆರ್, ಎಸ್‌ಎಲ್‌ಆರ್‌ ನಡುವಿನ ವ್ಯತ್ಯಾಸ ಏನು?

1. 2021ರ ಏಪ್ರಿಲ್ 1ರಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರಿಕರಿಂಗ್ ಪೇಮೆಂಟ್‌ ಮುಂದುವರಿಯಲು ಗ್ರಾಹಕರಿಂದ ಹೆಚ್ಚುವರಿ ದೃಢೀಕರಣದ ಅಗತ್ಯವಿರುತ್ತದೆ.

2. ಆರಂಭಿಕವಾಗಿ ಈ ನಿಯಮವನ್ನು 2000ರೂ ಬೆಲೆಯ ರಿಕರಿಂಗ್ ವಹಿವಾಟಿಗೆ ಅನ್ವಯಿಸಲಾಗಿತ್ತು. ಆದರೆ ಗ್ರಾಹಕರ ಮನವಿ ಮೇರೆಗೆ ಆ ಮಿತಿಯನ್ನು 5000 ರೂಗೆ ಏರಿಸಿರುವುದಾಗಿ 2020ರ ಡಿಸೆಂಬರ್‌ನಲ್ಲಿ ಆರ್‌ಬಿಐ ಘೋಷಿಸಿತು. ಈ ಮಿತಿಗಿಂತ ಹೆಚ್ಚಿನ ವಹಿವಾಟಿಗೆ ಒನ್ ‌ಟೈಮ್ ಪಾಸ್‌ ವರ್ಡ್ (ಒಟಿಪಿ) ಅಗತ್ಯವಿರುತ್ತದೆ.

3. ರಿಕರಿಂಗ್ ವಹಿವಾಟಿನ ಈ ದೊಡ್ಡ ಬದಲಾವಣೆ ಕುರಿತು ಆರ್‌ಬಿಐ 2019ರ ಆಗಸ್ಟ್‌ನಲ್ಲಿ ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕುಗಳು, ಕಾರ್ಡ್ ಪಾವತಿ ನೆಟ್‌ವರ್ಕ್ ಗಳು, ಪ್ರಿಪೇಡ್ ಉಪಕರಣ ವಿತರಕರು ಹಾಗೂ ಎನ್‌ಪಿಸಿಐಗೆ ಸೂಚನೆ ನೀಡಿದೆ.

ಮುಂದಿನ ಆರ್ಥಿಕ ವರ್ಷದಲ್ಲಿ ಶೇ. 10.5ರಷ್ಟು ಭಾರತದ ಜಿಡಿಪಿ ಬೆಳವಣಿಗೆ: ಆರ್‌ಬಿಐ

4. ಕ್ರೆಡಿಟ್ ಕಾರ್ಡ್ ಗಳು, ಡೆಬಿಟ್ ಕಾರ್ಡ್, ಇತರೆ ಪ್ರಿಪೇಡ್ ಪಾವತಿ ಸಾಧನಗಳ ಸೇವೆ ನೀಡುವ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಮಾತ್ರವಲ್ಲದೇ ಯುಪಿಐ ಆಧಾರಿತ ಪಾವತಿಗಳ ಮೊಬೈಲ್ ಪಾವತಿ, ವ್ಯಾಲೆಟ್ ಗಳಿಗೂ ಈ ನಿಯಮ ಅನ್ವಯಿಸುತ್ತದೆ.

5. ಕಾರ್ಡ್‌ಗಳು, ಪಿಪಿಐಗಳು ಹಾಗೂ ಯುಪಿಐಗಳನ್ನು ಬಳಸಿ ರಿಕರಿಂಗ್ ವಹಿವಾಟು ನಡೆಸುವ ಪ್ರಕ್ರಿಯೆ ಮೇಲಿನ ಈ ನಿಬಂಧನೆಯನ್ನು ಮಾರ್ಚ್ 31ರ ನಂತರ ಪಾಲಿಸುವುದು ಕಡ್ಡಾಯ ಎಂದು ಡಿಸೆಂಬರ್ 4ರಂದು ಆರ್‌ಬಿಐ ಸುತ್ತೋಲೆ ಹೊರಡಿಸಿದೆ.

6. ಹೊಸ ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕುಗಳು ಮೊದಲ ಪಾವತಿ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮೊದಲು ನೋಟಿಫಿಕೇಶನ್ ಕಳುಹಿಸಬೇಕಾಗುತ್ತದೆ. ಗ್ರಾಹಕರು ಅದನ್ನು ಅನುಮೋದಿಸಿದಾಗ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ. ಒಂದು ವೇಳೆ ಪಾವತಿ 5000 ರೂ.ಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ಗ್ರಾಹಕರಿಗೆ ಒಟಿಪಿ (OTP) ಕಳುಹಿಸಬೇಕಾಗುತ್ತದೆ. ನೋಂದಣಿಯ ಸಮಯದಲ್ಲಿ ಗ್ರಾಹಕರು ಎಸ್‌ಎಂಎಂ ಅಥವಾ ಇ-ಮೇಲ್‌ ನಂಥ ಅಧಿಸೂಚನೆಯ ವಿಧಾನವನ್ನು ಆಯ್ಕೆ ಮಾಡುತ್ತಾರೆ.

7. ಅಧಿಸೂಚನೆಗೆ ಮುಖ್ಯವಾಗಿ ಗ್ರಾಹಕರ ಒಪ್ಪಿಗೆಯ ಅವಶ್ಯಕತೆಯಿರುತ್ತದೆ. ಆನಂತರವಷ್ಟೇ ಪಾವತಿಗೆ ಅವಕಾಶವಿರುತ್ತದೆ.

8. ಬ್ಯಾಂಕುಗಳು ಈ ಪಾವತಿಗಳನ್ನು ನಿರಾಕರಿಸಬಹುದಾಗಿದೆ. ಬಿಲ್ ಪಾವತಿ ಕುರಿತು ಬ್ಯಾಂಕ್‌ಗಳು ಈಗಾಗಲೇ ಗ್ರಾಹಕರಿಗೆ ನೋಟಿಫಿಕೇಶನ್ ನೀಡುತ್ತಿದೆ.

9. ರಿಕರಿಂಗ್ ಚಾರ್ಚ್‌ಗಳಿಗೆ ಆಟೊ ಪೇಮೆಂಟ್ ವಿಧಾನ ಅನುಸರಿಸುವ ಉದ್ಯಮಗಳ ಮೇಲೆ ಈ ಹೊಸ ನಿಯಮ ಪ್ರಭಾವ ಬೀರಲಿದೆ. ಕೆಲವು ಒಪ್ಪಂದದ ಪ್ರಕಾರ, ಮೂರನೇ ವ್ಯಕ್ತಿಯ ವ್ಯವಹಾರವೂ ಇದರಲ್ಲಿ ಗೌಣವಾಗಲಿದ್ದು, ಬ್ಯಾಂಕುಗಳಿಗೆ ತಮ್ಮ ಗ್ರಾಹಕರ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

10. ಈ ನಿಯಮದ ಗಡುವು ವಿಸ್ತರಿಸಲು ಕೇಂದ್ರ ಬ್ಯಾಂಕ್ ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸುವ ನಿರೀಕ್ಷೆಯಿದೆ. ಈ ನಿಯಮದಡಿಯಲ್ಲಿ ಕಾರ್ಯನಿರ್ವಹಿಸಲು ಬ್ಯಾಂಕುಗಳು ಹಾಗೂ ಪಾವತಿ ಸೇವೆ ನೀಡುವ ಸಂಸ್ಥೆಗಳು ಸಿದ್ಧವಿವೆಯೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಹೀಗಾಗಿ ಬ್ಯಾಂಕ್‌ಗಳು ಹಾಗೂ ವಾಲೆಟ್‌ಗಳು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಿದೆ.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags