ಕನ್ನಡದುನಿಯಾ

1.6M Followers

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಬದಲಾಗುವ ನಿಯಮಗಳ ಬಗ್ಗೆ ತಿಳಿಯಲು ಇಲ್ಲಿದೆ ಸುಲಭ ವಿಧಾನ

31 Mar 2021.09:58 AM

ನವದೆಹಲಿ: ವಿಲೀನಗೊಂಡ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಏಪ್ರಿಲ್ 1 ರಿಂದ 7 ಬ್ಯಾಂಕುಗಳ ಚೆಕ್ಬುಕ್, ಐಎಫ್‌ಎಸ್ಸಿ ಕೋಡ್, ಪಾಸ್ ಬುಕ್ ಬದಲಾವಣೆಯಾಗಲಿವೆ.

ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ಗಳಲ್ಲಿ ಈ ಬದಲಾವಣೆ ಜಾರಿಯಾಗಲಿದೆ. ವಿಲೀನದ ನಂತರ ಚೆಕ್ ಬುಕ್ ಗಳು ಮತ್ತು ಐಎಫ್‌ಎಸ್ಸಿ ಕೋಡ್, ಪಾಸ್ ಬುಕ್ ಗಳು ಬದಲಾವಣೆಯಾಗಲಿದ್ದು, ಈ ಬಗ್ಗೆ ಗ್ರಾಹಕರು ಗಮನಿಸುವುದು ಒಳ್ಳೆಯದು.

ಏಪ್ರಿಲ್ 1, 2019 ರಿಂದ ಜಾರಿಗೆ ಬರುವಂತೆ ದೇನಾ ಮತ್ತು ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಯಿತು. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನೊಂದಿಗೆ ವಿಲೀನಗೊಳಿಸಲಾಯಿತು.

ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿತು ಮತ್ತು ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕಿನಲ್ಲಿ ವಿಲೀನಗೊಂಡಿತು.

ಈ 7 ಬ್ಯಾಂಕ್‌ಗಳಲ್ಲಿ ಗ್ರಾಹಕರು ಖಾತೆ ಹೊಂದಿದ್ದರೆ, ಹೊಸ ಚೆಕ್ ಬುಕ್ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಖಾತೆದಾರರು ಈಗ ತಮ್ಮ ಹೊಸ ಐಎಫ್‌ಎಸ್‌ಸಿ ಕೋಡ್‌ಗಳನ್ನು ಆನ್‌ಲೈನ್‌ನಲ್ಲಿ ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು. www.unionbankofindia.co.in ವೆಬ್ ಸೈಟ್ ಗಮನಿಸಬಹುದಾಗಿದೆ.

ಬ್ಯಾಂಕಿನ ಕಸ್ಟೋಮರ್ ಕೇರ್ ಸಂಖ್ಯೆ 1800-208-2244 ಅಥವಾ 1800-425-1515 ಅಥವಾ 1800-425-3555 ಗೆ ಕರೆ ಮಾಡಬಹುದು. ನೀವು ಎಸ್‌ಎಂಎಸ್ ಮೂಲಕ ಮಾಹಿತಿ ಪಡೆಯಬಹುದು. ಇದಕ್ಕಾಗಿ, ನೀವು IFSC ಎಂದು ಟೈಪ್ ಮಾಡುವ ಮೂಲಕ 9223008486 ಗೆ ಸಂದೇಶವನ್ನು ಕಳುಹಿಸಬೇಕು.

ಹೊಸ ನಿಯಮಗಳು ಏಪ್ರಿಲ್ 1 ರಿಂದ ಅನ್ವಯವಾಗಲಿದ್ದು, ವಿಲೀನದ ಕಾರಣ, ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಎಂಐಸಿಆರ್ ಕೋಡ್, ಶಾಖೆಯ ವಿಳಾಸವನ್ನೂ ಬದಲಾಯಿಸಲಾಗುವುದು ಎಂದು ಹೇಳಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags