Kannada News Now

1.8M Followers

ʼPOST OFFICE‌ʼ ಗ್ರಾಹಕರಿಗೆ ಗುಡ್ ನ್ಯೂಸ್‌: ಇನ್ಮುಂದೆ ನೀವು ಯಾವುದೇ ಸ್ಥಳದಿಂದ ಬೇಕಾದ್ರು ಬ್ಯಾಂಕಿಂಗ್‌ ಮಾಡ್ಬೋದು..!

01 Apr 2021.06:04 AM

ಡಿಜಿಟಲ್‌ ಡೆಸ್ಕ್:‌ ಅಂಚೆ ಕಚೇರಿ ಉಳಿತಾಯ ಖಾತೆ ಗ್ರಾಹಕರಿಗೆ ನಿಜಕ್ಕೂ ಇದು ಗುಡ್‌ ನ್ಯೂಸ್.‌ ಯಾಕಂದ್ರೆ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್) ಏಪ್ರಿಲ್ ವೇಳೆಗೆ ಇತರ ಬ್ಯಾಂಕ್ ಖಾತೆಗಳೊಂದಿಗೆ ಸೇರಿ ಎಲ್ಲಾ ಸೇವೆಗಳನ್ನ ಡಿಜಿಟಲೀಕರಣಗೊಳಿಸಲಾಗ್ತಿದೆ.

ಅಂಚೆ ಕಚೇರಿ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್..!
ಅಂಚೆ ಕಚೇರಿಯ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ (ಸಿಬಿಎಸ್) ವ್ಯವಸ್ಥೆ ವಿಶ್ವದಲ್ಲೇ ಅತಿ ದೊಡ್ಡದಾಗಿದ್ದು, ಈಗಾಗಲೇ 23,483 ಅಂಚೆ ಕಚೇರಿಗಳು ನೆಟ್ ವರ್ಕ್ʼಗೆ ಸಂಪರ್ಕ ಹೊಂದಿದೆ. 50 ಕೋಟಿಗೂ ಹೆಚ್ಚು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್ ಬಿ) ಆಫ್ ಇಂಡಿಯಾ ಪೋಸ್ಟ್ ದೇಶಾದ್ಯಂತ 1.56 ಲಕ್ಷ ಅಂಚೆ ಕಚೇರಿಗಳ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದೆ.

85 ಲಕ್ಷ ವಹಿವಾಟು..!

ಡಿಜಿಟಲೀಕರಣದ ಜೊತೆಗೆ ನಾವು ಜನರಿಗೆ ಸೇವೆಗಳನ್ನ ಮನೆಯಲ್ಲಿ ಒದಗಿಸಲು ಗಮನ ಹರಿಸಲಾಗ್ತಿದ್ದು, ಈ ವರ್ಷ 85 ಲಕ್ಷ ವಹಿವಾಟು ಮೂಲಕ 900 ಕೋಟಿ ರೂ.ಗಳನ್ನ ಕಳುಹಿಸಿದ್ದು, 3 ಲಕ್ಷ ಪಿಂಚಣಿದಾರರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಕನಿಷ್ಠ ಬ್ಯಾಲೆನ್ಸ್ 500 ರೂ…!
ಅಂಚೆ ಇಲಾಖೆಯು ಉಳಿತಾಯ ಖಾತೆಯ ಕನಿಷ್ಠ ಶಿಲ್ಕಗಳನ್ನ 50 ರೂ.ಗಳಿಂದ 500 ರೂ.ಗೆ (ಕನಿಷ್ಠ ಬ್ಯಾಲೆನ್ಸ್ 500 ರೂಪಾಯಿ) ಹೆಚ್ಚಿಸಿದೆ.

13 ಕೋಟಿ ಖಾತೆಗಳಲ್ಲಿ ಬಾಕಿ..!
ಅಂಕಿ-ಸಂಖ್ಯೆಗಳ ಪ್ರಕಾರ, ಡಿಸೆಂಬರ್ 19, 2019ರಂತೆ, ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಕನಿಷ್ಠ ಶಿಲ್ಕ 500 ರೂಪಾಯಿಗಳಿಗಿಂತ ಕಡಿಮೆ ಇತ್ತು. ಈ ಬಗ್ಗೆ ಅಂಚೆ ಕಚೇರಿ ನಿರ್ದೇಶಕರು ಎಲ್ಲ ಅಂಚೆ ಕಚೇರಿಗೆ ತಿಳಿಸಿದ್ದಾರೆ. ಕನಿಷ್ಠ ಬ್ಯಾಲೆನ್ಸ್ ಕಡಿಮೆಯಾಗುತ್ತಿರುವ ಹಿನ್ನೆಲೆ ಅಂಚೆ ಕಚೇರಿಗೆ ವಾರ್ಷಿಕ 2800 ಕೋಟಿ ರೂ. ನಷ್ಟವಾಗ್ತಿದೆ.

ಈ ಬಗ್ಗೆ ಮಾತನಾಡಿದ ಅಂಚೆ ಇಲಾಖೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿಸೋಯಿ, ರೈಲ್ವೆ, ರಸ್ತೆ ಮತ್ತು ವಿಮಾನ ಸಂಚಾರ ಬಂದ್ ಆದಾಗ ಅಂಚೆ ಇಲಾಖೆಯು ಅಗತ್ಯ ವಸ್ತುಗಳನ್ನ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದೆ ಎಂದರು.

ಹೊಸ ವರ್ಷದಲ್ಲಿ, ನಾವು ಸೇವೆಗಳ ಡಿಜಿಟಲೀಕರಣವನ್ನ ಹೆಚ್ಚಿಸಲು ಮತ್ತು ಮನೆಗಳಿಗೆ ಸೇವೆಗಳನ್ನ ತಲುಪಿಸಲು ಒತ್ತು ನೀಡುತ್ತೇವೆ ಎಂದವರು, ಹಣಕಾಸು ಸೇವೆಗಳು ಈಗಾಗಲೇ ಡಿಜಿಟಲ್ ಆಗಿರುತ್ತವೆ. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ʼಗಳನ್ನ ಏಪ್ರಿಲ್ ವೇಳೆಗೆ ಇತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಲಿಂಕ್ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags