Kannada News Now

1.8M Followers

BREAKING: ʼಬ್ಯಾಂಕ್, ಬ್ಯಾಂಕಿಂಗ್ʼಯೇತರ ಹಣಕಾಸು ಸಂಸ್ಥೆಗಳು ಬಿಗ್‌ ರಿಲೀಫ್:‌ ಕಾರ್ಡ್ ಪಾವತಿಗಳ ʼಹೆಚ್ಚುವರಿ ದೃಢೀಕರಣʼದ ಗಡುವು ವಿಸ್ತರಣೆ

31 Mar 2021.3:51 PM

ಡಿಜಿಟಲ್‌ ಡೆಸ್ಕ್:‌ ಬ್ಯಾಂಕ್, ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳು (ಎನ್ ಬಿಎಫ್ ಸಿ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಬಿಗ್‌ ರಿಲೀಫ್ ನೀಡಿದ್ದು, ಆನ್ಲೈನ್ ವಹಿವಾಟುಗಳನ್ನ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ಹೌದು, ಈಗ ಹೊಸ ಚೌಕಟ್ಟನ್ನ ಜಾರಿಗೆ ತರಲು ಬ್ಯಾಂಕ್ʼಗಳು ಮತ್ತು ವ್ಯಾಲೆಟ್ʼಗಳಿಗೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ.

ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನ 'ಸೇಫ್‌ ಅಂಡ್ ಸೆಕ್ಯೂರಿಟಿ' ಮಾಡಲು, ಬ್ಯಾಂಕಿಂಗ್ ನಿಯಂತ್ರಕವು ದೃಢೀಕರಣದ ಹೆಚ್ಚುವರಿ ಫ್ಯಾಕ್ಟರ್ ಆಫ್ ಅಥೆಂಟಿಕೇಷನ್ (AFA) ಅನ್ನ ಪರಿಚಯಿಸಿದೆ. ಡೆಬಿಟ್ ಕಾರ್ಡ್ʼಗಳು, ಕ್ರೆಡಿಟ್ ಕಾರ್ಡ್ʼಗಳು, ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಅಥವಾ ಇತರ ಪ್ರೀಪೇಯ್ಡ್ ಪೇಮೆಂಟ್ ಇನ್ ಸ್ಟ್ರುಮೆಂಟ್ಸ್ (ಪಿಪಿಐ) ಗಳನ್ನ ಬಳಸಿಕೊಂಡು ಪುನರಾವರ್ತಿತ ವಹಿವಾಟುಗಳನ್ನ 2021ರ ಏಪ್ರಿಲ್ 1ರಿಂದ ಹೆಚ್ಚುವರಿ ಫ್ಯಾಕ್ಟರ್ ದೃಢೀಕರಣ (AFA) ಅಗತ್ಯವಿರುತ್ತದೆ ಎಂದು ಕೇಂದ್ರ ಬ್ಯಾಂಕ್ ಈ ಹಿಂದೆ ಉಲ್ಲೇಖಿಸಿದ ವರದಿಯಲ್ಲಿ ತಿಳಿಸಿತ್ತು.

ಸಧ್ಯ ಈ ಕಾಲಾವಕಾಶವನ್ನ ವಿಸ್ತರಿಸಿದೆ.

ಉದ್ಯೋಗಾಂಕ್ಷಿಗಳಿಗೆ 'ಮಹತ್ವದ ಮಾಹಿತಿ': '402 PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ', ಇಲ್ಲಿದೆ ಸಂಪೂರ್ಣ ಮಾಹಿತಿ ನಿಮಗಾಗಿ

ವಂಚನೆಯ ವ್ಯವಹಾರಗಳಿಂದ ಗ್ರಾಹಕರನ್ನ ರಕ್ಷಿಸುವುದು ಮತ್ತು ಗ್ರಾಹಕರ ಅನುಕೂಲವನ್ನು ಹೆಚ್ಚಿಸುವುದು ಈ ಚೌಕಟ್ಟಿನ ಮುಖ್ಯ ಉದ್ದೇಶವಾಗಿದೆ ಎಂದು ಆರ್ ಬಿಐ ತಿಳಿಸಿದ್ದು, '2021ರ ಮಾರ್ಚ್ 31ರ ವರೆಗೆ ಕಾಲಾವಕಾಶ ನೀಡುವಂತೆ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಸಲ್ಲಿಸಿದ್ದ ಮನವಿ ಆಧರಿಸಿ, 2020ರ ಡಿಸೆಂಬರ್ʼನಲ್ಲಿ ಬ್ಯಾಂಕ್ʼಗಳಿಗೆ 2021ರ ಮಾರ್ಚ್ 31ರೊಳಗೆ ವಲಸೆ ಹೋಗುವಂತೆ ರಿಸರ್ವ್ ಬ್ಯಾಂಕ್ ಸಲಹೆ ನೀಡಿತ್ತು. ಹೀಗಾಗಿ, ಈ ಚೌಕಟ್ಟನ್ನು ಅನುಸರಿಸಲು ಮಧ್ಯಸ್ಥಿಕೆದಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ' ಎಂದು ನಿಯಂತ್ರಕರು ತಿಳಿಸಿದ್ದಾರೆ.

'ಆದಾಗ್ಯೂ, ವಿಸ್ತೃತವಾದ ಟೈಮ್ ಲೈನ್ ನಂತರವೂ ಸಹ ಈ ಚೌಕಟ್ಟನ್ನ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿಲ್ಲ ಅನ್ನೋದನ್ನ ಇಲ್ಲಿ ಗುರುತಿಸಲಾಗಿದೆ. ಈ ಅನುಸರಣೆಯನ್ನ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅದನ್ನ ಪ್ರತ್ಯೇಕವಾಗಿ ಚರ್ಚಿಸಲಾಗುವುದು. ಕೆಲವು ಪಾಲುದಾರರ ಅನುಷ್ಠಾನ ವಿಳಂಬವು ದೊಡ್ಡ ಪ್ರಮಾಣದ ಗ್ರಾಹಕರಿಗೆ ಅನಾನುಕೂಲ ಮತ್ತು ಪೂರ್ವನಿಯೋಜಿತ ಪರಿಸ್ಥಿತಿಗೆ ಕಾರಣವಾಗಿದೆ' ಎಂದು ಆರ್ ಬಿಐ ಹೇಳಿದೆ.

'ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ' ದಂಪತಿಗಳ ಆರೋಗ್ಯ ವಿಚಾರಿಸಿದ 'ಪ್ರಧಾನಿ ನರೇಂದ್ರ ಮೋದಿ'

'ಗ್ರಾಹಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ತಡೆಯಲು, ಮಧ್ಯಸ್ಥಿಕೆದಾರರು ಚೌಕಟ್ಟಿನ ಒಳಗೆ ವಲಸೆ ಹೋಗಲು ಸಮಯ ರೇಖೆಯನ್ನು ಆರು ತಿಂಗಳವರೆಗೆ ಅಂದರೆ ಸೆಪ್ಟೆಂಬರ್ 30, 2021ರವರೆಗೆ ವಿಸ್ತರಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ ಎಂದು ಆರ್ ಬಿಐ ತಿಳಿಸಿದೆ.

ತಣ್ಣೀರು ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags