myKhel ಕನ್ನಡ

98k Followers

2021ರ ಐಪಿಎಲ್‌ನಿಂದ ಹಿಂದೆ ಸರಿದ ಆಸ್ಟ್ರೇಲಿಯಾದ ಮಿಚೆಲ್ ಮಾರ್ಚ್

31 Mar 2021.5:42 PM

ನವದೆಹಲಿ: ಆಸ್ಟ್ರೇಲಿಯಾದ ಬ್ಯಾಟಿಂಗ್ ಆಲ್ ರೌಂಡರ್ ಮಿಚೆಲ್ ಮಾರ್ಷ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಿಂದ ಹಿಂದೆ ಸರಿದಿದ್ದಾರೆ. ಸುದೀರ್ಘ ಕಾಲ ಬಯೋಬಬಲ್‌ನಲ್ಲಿ ಕಳೆಯುವುದು ತ್ರಾಸದಾಯಕ ಎಂದು ಮಾರ್ಷ್ ಈ ಬಾರಿಯ ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

14ನೇ ಆವೃತ್ತಿ ಐಪಿಎಲ್‌ನಲ್ಲಿ ತಾನು ಆಡದಿರಲು ನಿರ್ಧರಿಸಿರುವ ಸಂಗತಿಯನ್ನು ಮಿಚೆಲ್ ಮಾರ್ಷ್ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತು ಸನ್ ರೈಸರ್ಸ್ ಹೈದರಾಬಾದ್‌ ಫ್ರಾಂಚೈಸಿಗೆ ಕೆಲ ದಿನಗಳ ಹಿಂದೆಯೇ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಐಪಿಎಲ್‌ಗಾಗಿ ಸನ್ ರೈಸರ್ಸ್ ಹೈದರಾಬಾದ್, ಮಾರ್ಷ್ ಜಾಗಕ್ಕೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಜೇಸನ್ ರಾಯ್ ಅವರನ್ನು ಕರೆತಂದಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ರಾಯ್ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು.

ಈ ಐವರು ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್‌ನಿಂದ ದೂರ! ಕಾರಣ ಇಲ್ಲಿದೆ

2020ರ ಆಟಗಾರರ ಹರಾಜಿನಲ್ಲಿ ಮಾರ್ಷ್ ಅವರನ್ನು ಅವರ ಮೂಲಬೆಲೆ 2 ಕೋ.ರೂ.ಗೆ ಎಸ್‌ಆರ್‌ಎಚ್ ಖರೀದಿಸಿತ್ತು. ಆದರೆ ಮಾರ್ಷ್ ಕಳೆದ ಸೀಸನ್‌ನಲ್ಲೂ ಹೆಚ್ಚಿನ ಪಂದ್ಯಗಳಲ್ಲಿ ಆಡಿರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಆರಂಭಿಕ ಪಂದ್ಯದಲ್ಲೇ ಕಾಲಿನ ಮೊಣಕ್ಕಟ್ಟು ತಿರುಚಿ ಟೂರ್ನಿಯಿಂದ ಹೊರ ಬಿದ್ದಿದ್ದರು. ಮಾರ್ಷ್ ಈವರೆಗೆ ಒಟ್ಟು 21 ಐಪಿಎಲ್‌ ಪಂದ್ಯಗಳಲ್ಲಿ 225 ರನ್, 20 ವಿಕೆಟ್ ದಾಖಲೆ ಹೊಂದಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Mykhel Kannada

#Hashtags