Oneindia

1.1M Followers

ಏಪ್ರಿಲ್ 1ರಿಂದ ಯಾವೆಲ್ಲ ವಸ್ತು ದರ ಏರಿಕೆ? ಯಾವುದು ಇಳಿಕೆ?

31 Mar 2021.2:52 PM

ಏಪ್ರಿಲ್ ತಿಂಗಳಿನಿಂದ 2021-22 ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಜೊತೆಗೆ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ ತೆರಿಗೆಗಳು ಏ.1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಕೆಲ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ. ಇದರ ಜೊತೆಗೆ ಆಯಾ ರಾಜ್ಯಗಳ ಬಜೆಟ್ ವೇಳೆ ಹಾಕಿರುವ ಸೆಸ್ ಕೂಡಾ ಪರಿಣಾಮ ಬೀರಲಿದೆ.

ಮಿಕ್ಕಂತೆ ಪೆಟ್ರೋಲ್, ಡೀಸೆಲ್ ಉತ್ಪನ್ನಗಳು, ಚಿನ್ನ ಮುಂತಾದ ಆಭರಣಗಳ ಮೇಲಿನ ಆಮದು ಸುಂಕ ಏರಿಕೆ ಇಳಿಕೆಯಾಗಿದ್ದು, Iಈಗಾಗಲೇ ಏರಿಳಿತ ಕಾಣುತ್ತಿವೆ.

ಇದರ ಜೊತೆಗೆ ವೈಯಕ್ತಿಕ ಆರ್ಥಿಕತೆ, ಆದಾಯದ ಮೇಲೂ ಪರಿಣಾಮ ಬೀರಬಹುದಾದ ಈ ಅಂಶಗಳ ಬಗ್ಗೆ ಒನ್‌ಇಂಡಿಯಾದಲ್ಲಿ ತಿಳಿಸಲಾಗಿದೆ. ಅಡುಗೆ ಅನಿಲ ದರದಲ್ಲಿ ಬದಲಾವಣೆ, ಬ್ಯಾಂಕಿಂಗ್ ನಿಯಮಗಳು, ತೆರಿಗೆ ನಿಯಮಗಳು, ಟಿಡಿಎಸ್/ಟಿಸಿಎಸ್ ಕಡಿತ ಹೀಗೆ ಕೆಲವು ಪ್ರಮುಖ ಅಂಶಗಳು ಏಪ್ರಿಲ್ 1ರಿಂದ ಬದಲಾಗಲಿವೆ.

ಮೊಬೈಲ್ ಫೊನ್ ಬೆಲೆ ಏರಿಕೆ

2021 ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಮದಾಗುವ ಕೆಲವೊಂದು ವಸ್ತುಗಳ ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ವಿದೇಶದಿಂದ ಆಮದಾಗುವ ಬಿಡಿಭಾಗಗಳು ಸೇರಿದಂತೆ ಇತರೆ ಸರಕುಗಳು ದುಬಾರಿಯಾಗಲಿದೆ.

ವಿದೇಶಿ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಬೆಲೆ, ಮೊಬೈಲ್ ಬಿಡಿಭಾಗಗಳು, ಕ್ಯಾಮೆರಾ ಬಾಡಿ, ಕ್ಯಾಮೆರಾ ಲೆನ್ಸ್ ಇತರೆ ಉಪಕರಣಗಳು, ಟಿವಿ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಂಡರೆ ದುಬಾರಿ ಅಬಕಾರಿ ಸುಂಕ, ಆಮದು ಸುಂಕದಿಂದ ಹೆಚ್ಚಿನ ದುಡ್ಡು ತೆರಬೇಕಾಗುತ್ತದೆ.


ಯಾವುದು ಏರಿಕೆ

ಮದ್ಯ, ವಾಹನ ಬಿಡಿಭಾಗಗಳು, ಅಡುಗೆ ಎಣ್ಣೆ, ಲೆದರ್ ಶೂ, ಮೀನಿನ ಆಹಾರ ಏರಿಕೆ ಕಾಣಲಿದೆ. ಕರ್ನಾಟಕದಲ್ಲಿ ಶೇ 6ರಷ್ಟು ಮದ್ಯದ ಮೇಲಿನ ಸೆಸ್ ಮುಂದುವರೆಸಲಾಗಿದ್ದು, ಯಥಾಸ್ಥಿತಿ ಮುಂದುವರೆಯಲಿದೆ.

ಶೇ 50ರಷ್ಟಿದ್ದ ಕೆಲವು ಮದ್ಯ ಉತ್ಪನ್ನಗಳ ಸೆಸ್‌ಅನ್ನು ದುಪ್ಪಟ್ಟು ಮಾಡಲಾಗಿದೆ. ಅಂದರೆ ಶೇ 100ಕ್ಕೆ ಈ ಉತ್ಪನ್ನಗಳ ಸೆಸ್ ಮೌಲ್ಯ ತಲುಪಿದೆ. ಎಲ್ಲ ವೈನ್ ಬಳಕೆಯ ಸರಕುಗಳ ಮೇಲಿನ ಸೆಸ್ ಶೇ 50ರಷ್ಟಿತ್ತು. ಅದನ್ನು ಈಗ ಶೇ 100ಕ್ಕೆ ಏರಿಸಲಾಗಿದೆ.


ವಿದೇಶಿ ವಸ್ತು, ಆಮದು ಪದಾರ್ಥ ದುಬಾರಿ

ರೆಫ್ರಿಜರೇಟರ್ಸ್, ಏರ್ ಕಂಡಿಷನರ್ಸ್, ಎಲ್ ಇ ಡಿ ಲ್ಯಾಂಪ್ಸ್, ಪಿಸಿಬಿ, ಕಚ್ಚಾ ರೇಷ್ಮೆ ಹಾಗೂ ಹತ್ತಿ, ಸೋಲಾರ್ ಇನ್ವರ್ಟರ್ ಹಾಗೂ ಲ್ಯಾಂಟರ್ನ್, ಆಟೋಮೊಬೈಲ್ ಬಿಡಿಭಾಗಗಳು, ವಿಂಡ್ ಸ್ಕ್ರೀನ್ ವೈಪರ್ಸ್, ಸಿಗ್ನಲಿಂಗ್ ಸಾಧನ, ಮೊಬೈಲ್ ಫೋನ್ ಬಿಡಿಭಾಗ,
ಲಿಥಿಯಂ ಅಯನ್ ಬ್ಯಾಟರಿ, ನೈಲಾನ್ ಫೈಬರ್, ಸಿಂಥೆಟಿಕ್ ಕಲ್ಲು, ಪಾಲಿಷ್ ಮಾಡಿದ ಜಿರ್ಕೊನಿಯಾ ..ಇತ್ಯಾದಿ


ಯಾವುದೆಲ್ಲ ಇಳಿಕೆ

ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಇಳಿಕೆ, ಪ್ಲಾಟಿನಂ, ಪಲ್ಲಾಡಿಯಂ ತೆರಿಗೆ ಇಳಿಕೆ, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಆಮದು ಮಾಡಿಕೊಂಡ ವೈದ್ಯಕೀಯ ಉಪಕರಣಗಳು. ಪೆಟ್ರೋಲ್ ಮೇಲೆ ಕರ್ನಾಟಕದಲ್ಲಿ ಹೆಚ್ಚಿನ ಸೆಸ್ ಇಲ್ಲ.ಇಳಿಕೆ ಪಟ್ಟಿಯಲ್ಲಿ 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕ ಇಲ್ಲ. ಶೇ 5 ರಿಂದ 3ಕ್ಕೆ ಇಳಿಕೆ. ಹೀಗಾಗಿ ಸಣ್ಣ ಪುಟ್ಟ ಅಪಾರ್ಟ್ಮೆಂಟ್ ಖರೀದಿದಾರರಿಗೆ ಅನುಕೂಲವಾಗಲಿದೆ. ಇ ವಾಹನಗಳ ಜಿ ಎಸ್ ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ.


source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags