ಪ್ರಜಾವಾಣಿ

1.5M Followers

ಭಾರತದ ಆರ್ಥಿಕತೆ ಸುಧಾರಿಸಿದ್ದರೂ ಸಂಕಷ್ಟದಿಂದ ಪಾರಾಗಿಲ್ಲ: ವಿಶ್ವಬ್ಯಾಂಕ್‌

31 Mar 2021.8:00 PM

ವಾಷಿಂಗ್ಟನ್‌: ಕೋವಿಡ್‌-19 ಪಿಡುಗು ಹಾಗೂ ದೇಶದಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ ಪರಿಣಾಮ ಕುಸಿದಿದ್ದ ಭಾರತದ ಆರ್ಥಿಕತೆ ಆಶ್ಚರ್ಯಕರವಾಗಿ ಪುಟಿದೆದ್ದಿದೆ. ಆದರೆ, ಸಂಕಷ್ಟದಿಂದ ಇನ್ನೂ ಪಾರಾಗಿಲ್ಲ ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿದೆ.

ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿರುವ 'ಸೌತ್‌ ಏಷ್ಯಾ ಎಕನಾಮಿಕ್‌ ಫೋಕಸ್‌' ಎಂಬ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, 2021-22ನೇ ಸಾಲಿನಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ 7.5 ರಿಂದ ಶೇ 12.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

2017-18ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿ ದರ ಶೇ 8.3 ತಲುಪಿತ್ತು. ಆದರೆ, ಕೋವಿಡ್‌-19 ವ್ಯಾಪಕಗೊಂಡ ವರ್ಷದಲ್ಲಿ ಇದು ಶೇ 4ಕ್ಕೆ ಕುಸಿಯಿತು ಎಂದೂ ವರದಿಯಲ್ಲಿ ವಿವರಿಸಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags