Kannada News Now

1.8M Followers

ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಗುಡ್‌ ನ್ಯೂಸ್:‌ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ `ಆಹಾರ ಭತ್ಯೆʼ ಏರಿಕೆ

02 Apr 2021.06:23 AM

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಚುನಾವಣೆ, ಹಬ್ಬಹರಿದಿನ, ಪ್ರತಿಭಟನೆ ಸೇರಿದಂತೆ ವಿಶೇಷ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆವನ್ನ ಹೆಚ್ಚಿಸಿದೆ.

ವರ್ಗಾವಣೆ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇದುವರೆಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆವನ್ನ 100 ರೂ.ಯಿಂದ 200 ರೂ.ಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅದ್ರಂತೆ, ಈ ಆದೇಶ ತಕ್ಷಣದಿಂದ್ಲೇ ಜಾರಿಗೆ ಬರುವಂತೆ ಸೂಚಿಸಿದೆ.

ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಲ್ಲಿ `NSS' ಘಟಕ ಕಡ್ಡಾಯ : ಸಚಿವ ನಾರಾಯಣಗೌಡ

ಪೊಲೀಸ್ ಇಲಾಖೆ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ, 'ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿದ್ದು, ಆಹಾರ ತಯಾರಕರು ಸಹ ಊಟ/ತಿಂಡಿ ಬೆಲೆ ಹೆಚ್ಚಿಸುತ್ತಿದ್ದಾರೆ.

ಇದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ದಿನಕ್ಕೆ 100 ರೂ. ಆಹಾರ ಭತ್ಯೆ ನೀಡಲಾಗುತ್ತಿದೆ. ಇದರಲ್ಲಿ ಒಬ್ಬರಿಗೆ ದಿನಕ್ಕೆ ಉಪಹಾರ, ಎರಡು ಊಟ ಮತ್ತು ಎರಡು ಬಾರಿ ಕಾಫಿ/ಟೀ ನೀಡಲು ಸಾಧ್ಯವಾಗ್ತಿಲ್ಲ. ಕನಿಷ್ಠ 250 ರೂ. ಬೇಕಾಗುತ್ತಿದೆ. ಹಾಗಾಗಿ ಆಹಾರ ಭತ್ಯೆವನ್ನ 250 ರೂ.ಗೆ ಏರಿಕೆ ಮಾಡಬೇಕೆಂದು' ಮನವಿ ಮಾಡಿದ್ದರು.

ಈ ಮನವಿಯನ್ನ ಪುರಸ್ಕೃರಸಿರುವ ಸರ್ಕಾರ, ʼ ಗೃಹ ಇಲಾಖೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗೆ ತಲಾ 100 ರೂ.ಯಿಂದ 200 ರೂ.ಗೆ ಹೆಚ್ಚಿಸಿʼ ಆದೇಶ ಹೊರಡಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags