ಕನ್ನಡದುನಿಯಾ

1.6M Followers

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಹಳೆ ಪಿಂಚಣಿ ಯೋಜನೆಯಿಂದ ಸಿಗಲಿದೆ ಲಾಭ

02 Apr 2021.11:14 AM

ಕೇಂದ್ರ ಸರ್ಕಾರ,‌ ನೌಕರರ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರಿ ನೌಕರರು, ಮೇ.31, 2021ರವರೆಗೆ ಎನ್ ಪಿ ಎಸ್ ಬಿಟ್ಟು ಹಳೆ ಪಿಂಚಣಿ ಯೋಜನೆ ಲಾಭ ಪಡೆಯಬಹುದೆಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ಹಳೆ ಪಿಂಚಣಿ ಯೋಜನೆ (ಒಪಿಎಸ್) ಲಾಭ ಪಡೆಯಲು ಬಯಸುವ ಸರ್ಕಾರಿ ನೌಕರರು ಮೇ.5 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಲಾಭ ಪಡೆಯುತ್ತಿರುತ್ತಾರೆ. ಜನವರಿ 1, 2004 ರಿಂದ ಅಕ್ಟೋಬರ್ 28, 2009 ರ ನಡುವೆ ನೇಮಕಗೊಂಡ ನೌಕರರಿಗೆ ಸಿಸಿಎಸ್ ಪಿಂಚಣಿ ಅಡಿಯಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಸಿಗುತ್ತದೆ.

ಹಳೆಯ ಪಿಂಚಣಿ ಯೋಜನೆ ಎನ್‌ಪಿಎಸ್‌ಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಳೆಯ ಯೋಜನೆಯಲ್ಲಿ ನಿವೃತ್ತಿಯ ನಂತರ ಪಿಂಚಣಿದಾರರ ಜೊತೆ ಕುಟುಂಬ ಸದಸ್ಯರು ಸಹ ಭದ್ರತೆಯನ್ನು ಪಡೆಯುತ್ತಾರೆ. ರೈಲ್ವೆ ಪಿಂಚಣಿ ನಿಯಮಗಳು ಅಥವಾ ಸಿಸಿಎಸ್ ನಿಯಮ 1972ರ ಅಡಿಯಲ್ಲಿ, ಜನವರಿ 1, 2004ರ ಮೊದಲು ನೇಮಕಗೊಂಡ ನೌಕರರಿಗೆ ಹಳೆ ಪಿಂಚಣಿ ಯೋಜನೆ ಲಾಭ ಸಿಗುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags