Kannada News Now

1.8M Followers

ʼ10ನೇ ಕ್ಲಾಸ್‌ ಪಾಸ್‌ʼ ಆದವ್ರಿಗೆ ಗುಡ್‌ ನ್ಯೂಸ್:‌ ನರೇಗಾ ಯೋಜನೆಯಡಿ ʼಕಾಯಕ ಮಿತ್ರ ಹುದ್ದೆʼಗಳಿಗೆ ಅರ್ಜಿ ಆಹ್ವಾನ

01 Apr 2021.2:37 PM

ಡಿಜಿಟಲ್‌ ಡೆಸ್ಕ್:‌ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋ 25 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳ ಸಂಖ್ಯೆ: 25

ಹುದ್ದೆಗೆ ಬೇಕಾದ ಅರ್ಹತೆಗಳೇನು..?

ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಗರಿಷ್ಠ 45 ವರ್ಷ ಮೀರಿರಬಾರದು.

BIG BREAKING : 'ಸಚಿವ ಈಶ್ವರಪ್ಪ' ವಿರುದ್ಧ ಸಿಡಿದೆದ್ದ ಶಾಸಕರು : ಈಶ್ವರಪ್ಪ ವಿರುದ್ಧ 'BJP ಹೈಕಮಾಂಡ್'ಗೆ ದೂರು

ಈ ಹುದ್ದೆಗೆ ಯಾರೇಲ್ಲಾ ಅರ್ಜಿ ಸಲ್ಲಿಸಬಹುದು..?

* ಮಹಿಳೆಯರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
* ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್‍ಕಾರ್ಡ್ ಹೊಂದಿರಬೇಕು. ಅದು ಕೂಡ ದಿನಾಂಕ 1.1.2021ಕ್ಕೆ ಅನ್ವಯಿಸುವಂತಿರಬೇಕು.
* ಅಭ್ಯರ್ಥಿಯು ಕಳೆದ 3 ವರ್ಷಗಳಲ್ಲಿ ಕನಿಷ್ಠ 2 ವರ್ಷವಾದ್ರು ಈ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿಬೇಕು.
* ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಬ್ಯಾಂಕ್ ಗ್ರಾಹಕರೇ ಗಮನಿಸಿ : ಕರ್ನಾಟಕದಲ್ಲಿ ಬ್ಯಾಂಕ್ ಗಳಿಗೆ ಏಪ್ರಿಲ್ ನಲ್ಲಿ 9 ದಿನ ರಜೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ಅರ್ಜಿ ಸಲ್ಲಿಸಲು ಕೊನೆ ದಿನ: 10.4.2021

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ 080-29781057 ಸಂಖ್ಯೆಗೆ ಕರೆ ಮಾಡಿ

ರಾಜ್ಯದಲ್ಲಿ ಇಂದಿನಿಂದ 5,500 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ಸಚಿವ ಡಾ.ಕೆ. ಸುಧಾಕರ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags