Kannada News Now

1.8M Followers

ಕೇಂದ್ರ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ʼNPS ಸೌಲಭ್ಯʼಕ್ಕೆ ಸಂಬಂಧಿಸಿದಂತೆ ʼಹೊಸ ಅಧಿಸೂಚನೆʼ..!

01 Apr 2021.2:50 PM

ಡಿಜಿಟಲ್‌ ಡೆಸ್ಕ್:‌ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಕೇಂದ್ರ ಸರ್ಕಾರಿ ನೌಕರರಿಗೆ ವಿವಿಧ ಸೌಲಭ್ಯಗಳನ್ನ ನೀಡಲು ಸರ್ಕಾರ ವಿಸ್ತೃತ ಮಾರ್ಗಸೂಚಿಗಳನ್ನ ಜಾರಿಗೆ ತಂದಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯೂ) ಪ್ರಕಟಣೆಯಲ್ಲಿ ತಿಳಿಸಿದೆ.

'ಎನ್ ಪಿಎಸ್ ಖಾತೆಗೆ ವಂತಿಗೆಗಳ ನೋಂದಣಿ ಮತ್ತು ಜಮೆ ವಿಳಂಬ, ಸೇವಾ ಅವಧಿಯಲ್ಲಿ ಸರ್ಕಾರಿ ನೌಕರನ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಸಿಸಿಎಸ್ (ಪಿಂಚಣಿ) ನಿಯಮಗಳು ಅಥವಾ ಎನ್ ಪಿಎಸ್ ನಿಯಮಗಳ ಅಡಿಯಲ್ಲಿ ಬರುವ ಸವಲತ್ತುಗಳ ಆಯ್ಕೆ, ನಿವೃತ್ತಿಯ ನಂತ್ರ ನಿವೃತ್ತಿಯ ನಂತರ ನೀಡುವ ಸವಲತ್ತುಗಳು, ಅಕಾಲಿಕ ನಿವೃತ್ತಿ, ಸ್ವಯಂ ನಿವೃತ್ತಿ, ಸ್ವಾಯತ್ತ ಸಂಸ್ಥೆ ಅಥವಾ ಪಿಎಸ್ ಯುನಲ್ಲಿ ಸೇವೆ ಸಲ್ಲಿಸಲು ಅವಕಾಶ ಇತ್ಯಾದಿ.

ಬ್ಯಾಂಕ್ ಗ್ರಾಹಕರೇ ಗಮನಿಸಿ : ಕರ್ನಾಟಕದಲ್ಲಿ ಬ್ಯಾಂಕ್ ಗಳಿಗೆ ಏಪ್ರಿಲ್ ನಲ್ಲಿ 9 ದಿನ ರಜೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ಹೊಸ ನಿಶ್ಚಿತ ಕೊಡುಗೆ ಆಧಾರಿತ ಪಿಂಚಣಿ ಯೋಜನೆಯನ್ನು ಡಿಸೆಂಬರ್ 22, 2003ರಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪರಿಚಯಿಸಲಾಯಿತು. ನಂತ್ರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನೋಂದಣಿ, ವಂತಿಗೆ, ಹೂಡಿಕೆ, ನಿಧಿ ನಿರ್ವಹಣೆ, ಹಣ ಹಿಂತೆಗೆತ, ವಾರ್ಷಿಕ ಸೇರಿದಂತೆ ಇತರೆ ಚಟುವಟಿಕೆಗಳನ್ನು 2013ರ 'PFRDA ಕಾಯ್ದೆ'ಯಲ್ಲಿ ನಿಯಂತ್ರಿಸಲಾಯಿತು.

ಆದ್ರೆ, ಎನ್ ಪಿಎಸ್ ನೌಕರರಿಗೆ ಸಂಬಂಧಿಸಿದ ಹಲವು ಸೇವಾ ವಿಷಯಗಳು ಪಿ.ಎಫ್.ಆರ್.ಡಿಎ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಎನ್ ಪಿಎಸ್ ಅನುಷ್ಠಾನವನ್ನ ಸುಸೂತ್ರಗೊಳಿಸುವ ಸಲುವಾಗಿ, ಎನ್ ಪಿಎಸ್ ನೌಕರರಿಗೆ ಪ್ರತ್ಯೇಕ ಸೇವಾ ನಿಯಮಗಳನ್ನ ರೂಪಿಸುವ ಪ್ರಸ್ತಾವವನ್ನು DoPPW ಪ್ರಾರಂಭಿಸುತ್ತಿದೆ.

ಸೇನಾಪಡೆಯಲ್ಲಿ ಸೇವೆ ಸಲ್ಲಿಸಲು ಲೈಂಗಿಕ ಅಲ್ಪಸಂಖ್ಯಾತರು ಅರ್ಹರು : ಅಮೆರಿಕ ರಕ್ಷಣಾ ಇಲಾಖೆಯಿಂದ ಹೊಸ ನಿಯಮ ಜಾರಿ

ಈ ಹಿಂದೆ, ಸೇವಾ ಅವಧಿಯಲ್ಲಿ ಮರಣ ಹೊಂದಿದಾಗ ಮರಣ ಹೊಂದಿದಾಗ ಕುಟುಂಬ ಪಿಂಚಣಿ, ಅಂಗವಿಕಲ ಪಿಂಚಣಿ ಮತ್ತು ಅಸಾಧಾರಣ ಕುಟುಂಬ ಪಿಂಚಣಿಯ ಪ್ರಯೋಜನಗಳನ್ನ ಜನವರಿ 01, 2004ಕ್ಕಿಂತ ಮೊದಲು ನೇಮಕಗೊಂಡ ನೌಕರರಿಗೆ ಸರಿಸಮನಾಗಿ, DoPPWನ ಮೇ 05, 2009 ರ ಆದೇಶದ ಮೂಲಕ ಎನ್ ಪಿಎಸ್ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ ನೌಕರರಿಗೆ ವಿಸ್ತರಿಸಲಾಯಿತು.

ಇದಾದ ನಂತರ, ಎನ್ ಪಿಎಸ್ ವ್ಯಾಪ್ತಿಗೆ ಒಳಪಡುವ ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿಯ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಪ್ರಯೋಜನಗಳನ್ನ ಆಗಸ್ಟ್ 26, 2016 ರ ಡಿಒಪಿಡಬ್ಲ್ಯೂ ಆದೇಶದ ಅನ್ವಯ, CCS(ಪಿಂಚಣಿ) ನಿಯಮಗಳ ಅನ್ವಯ ಅನ್ವಯವಾಗುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಇಂದಿನಿಂದ 5,500 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ಸಚಿವ ಡಾ.ಕೆ. ಸುಧಾಕರ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags