Kannada News Now

1.8M Followers

ಇನ್ಮುಂದೆ ATMʼನಿಂದ ಹಣ ತೆಗೆಯೋಕೆ ಕಾರ್ಡ್ʼಗಳ ಅವಶ್ಯಕತೆ ಇಲ್ಲ.. ʼUPI ಆಪ್ QR ಕೋಡ್ʼ ಸ್ಕ್ಯಾನ್ ಮಾಡಿ, ವಿತ್‌ ಡ್ರಾ ಮಾಡ್ಕೊಳ್ಳಿ

01 Apr 2021.5:08 PM

ನವದೆಹಲಿ: ಸ್ವಯಂಚಾಲಿತ ಟೆಲ್ಲರ್ ಯಂತ್ರಗಳ (ಎಟಿಎಂ) ತಯಾರಕ ಎನ್ ಸಿಆರ್ ಕಾರ್ಪೊರೇಷನ್, ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಪ್ಲಾಟ್ ಫಾರ್ಮ್ ಆಧರಿಸಿದ ಮೊದಲ ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾ ಮಾಡುವ (ICCW) ಸೌಲಭ್ಯವನ್ನ ಬಿಡುಗಡೆ ಮಾಡಿದೆ ಎಂದು ತಿಳಿಸಿದೆ.

ಈ ಹೊಸ ಸೌಲಭ್ಯವನ್ನ ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್ ಸಿಆರ್ ನೊಂದಿಗೆ ಕೈಜೋಡಿಸಿದೆ ಎಂದು ಸಾಲದಾತರು ತಿಳಿಸಿದ್ದು, ಕ್ಯೂಆರ್ ಕೋಡ್ ಆಧಾರಿತ ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾ ಸೌಲಭ್ಯಕ್ಕಾಗಿ ಬ್ಯಾಂಕ್ ಈಗಾಗಲೇ ತನ್ನ 1,500 ಎಟಿಎಂಗಳನ್ನ ಅಪ್ ಗ್ರೇಡ್ ಮಾಡಿದೆ ಎಂದಿದೆ.

ಇನ್ನು 'ಮೊಬೈಲ್ ಫೋನ್ʼನಲ್ಲಿ ಯುಪಿಐ ಆಯಪ್ ಬಳಕೆ ಮಾಡುವುದ್ರಿಂದ ಯಾವುದೇ ಎಟಿಎಂಗೆ ಕಾರ್ಡ್ʼಗಳನ್ನು ಬಳಸುವ ಆಗತ್ಯವಿಲ್ಲ' ಎಂದು ಎನ್ ಸಿಆರ್ ಕಾರ್ಪೊರೇಷನ್ʼನ ಆಗ್ನೇಯ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಆಗ್ನೇಯ ಏಷ್ಯಾದ ಪ್ರಾದೇಶಿಕ ಉಪಾಧ್ಯಕ್ಷ ನವ್ರೋಜ್ ದಸ್ತೂರ್ ತಿಳಿಸಿದ್ದಾರೆ.

BIG BREAKING : 'ಸಚಿವ ಈಶ್ವರಪ್ಪ' ವಿರುದ್ಧ ಸಿಡಿದೆದ್ದ ಶಾಸಕರು : ಈಶ್ವರಪ್ಪ ವಿರುದ್ಧ 'BJP ಹೈಕಮಾಂಡ್'ಗೆ ದೂರು

'ನಾವು ನಮ್ಮ ಗ್ರಾಹಕರಿಗೆ ಈ ಮುಂದಿನ ಪೀಳಿಗೆಯ ಪರಿಹಾರವನ್ನ ಒದಗಿಸಲು NCR ನೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ, ಇದು ನಮ್ಮ ಎಟಿಎಂಗಳಲ್ಲಿ ಯುಪಿಐ ಕ್ಯೂಆರ್ ಕೋಡ್ ಬಳಸಿ ಕಾರ್ಡ್ ರಹಿತ ನಗದು ಹಿಂತೆಗೆತಕ್ಕೆ ಅನುವು ಮಾಡಿಕೊಡುತ್ತದೆ' ಎಂದು ಸಿಟಿ ಯೂನಿಯನ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಎನ್.ಕಾಮಕೋಡಿ ತಿಳಿಸಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ..?
ಈ ಹೊಸ ಸೌಲಭ್ಯವು ಗ್ರಾಹಕರು ತಮ್ಮ ಮೊಬೈಲ್ ಬಳಸಿ ಭೀಮ್, ಪೇಟಿಎಂ, ಜಿಪೇ ಮುಂತಾದ ಯಾವುದೇ ಯುಪಿಐ ಸಕ್ರಿಯಗೊಳಿಸಿದ ಆಪ್ ಮೂಲಕ ನಗದು ಹಿಂತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಯುಪಿಐ ಸಕ್ರಿಯಗೊಂಡ ಎಟಿಎಂಗಳಿಗೆ ಭೇಟಿ ನೀಡುವಾಗ ಕಾರ್ಡ್ ಸ್ವೈಪ್ ಅಥವಾ ಕಾರ್ಡ್ ಕ್ಯಾರಿ ಮಾಡುವ ಅಗತ್ಯವಿಲ್ಲ. ಒಬ್ಬ ಬಳಕೆದಾರನು ತನ್ನ ಮೊಬೈಲ್ ಫೋನ್ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕ್ರೀನ್ʼನಲ್ಲಿ ಸ್ಕ್ಯಾನ್ ಮಾಡಿ ನಗದು ಹಿಂತೆಗೆತವನ್ನ ಅಧಿಕೃತಗೊಳಿಸಿಕೊಳ್ಳಬೇಕು. ವಹಿವಾಟುಗಳನ್ನ ಹೆಚ್ಚು ಸುರಕ್ಷಿತವಾಗಿಸಲು, QR ಕೋಡ್ ಅನ್ನು ನಿರಂತರವಾಗಿ ಬದಲಾಯಿಸಲಾಗುತ್ತೆ.

ಸದ್ಯಕ್ಕೆ, ಹಿಂಪಡೆಯುವ ಮಿತಿಯನ್ನು ₹5,000 ಕ್ಕೆ ನಿಗದಿಮಾಡಲಾಗಿದೆ. 'ಇದು ಯುಪಿಐ ಆಧಾರಿತವಾಗಿರುವುದರಿಂದ, ಇದು ಯುಪಿಐ ಆಪ್ʼನ ವಿಸ್ತರಣೆಯಾಗಿರುವುದರಿಂದ ಅದಕ್ಕೆ ಯಾವುದೇ ಹೆಚ್ಚುವರಿ ನಿಯಂತ್ರಣ ಅನುಮತಿಯ ಅಗತ್ಯವಿಲ್ಲ' ಎಂದು ದಸ್ತೂರ್ ಹೇಳಿದರು.

ಬ್ಯಾಂಕ್ ಗ್ರಾಹಕರೇ ಗಮನಿಸಿ : ಕರ್ನಾಟಕದಲ್ಲಿ ಬ್ಯಾಂಕ್ ಗಳಿಗೆ ಏಪ್ರಿಲ್ ನಲ್ಲಿ 9 ದಿನ ರಜೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

'ಸಿಟಿ ಯೂನಿಯನ್ ಬ್ಯಾಂಕ್ʼನ ಎಟಿಎಂಗಳಲ್ಲಿ ಈ ರೀತಿ ವಹಿವಾಟು ನಡೆಸಲು ಅವಕಾಶ ನೀಡುವ ಸಲುವಾಗಿ ಈಗಿರುವ ಸಾಫ್ಟ್ ವೇರ್ ಅನ್ನು ಅಪ್ ಗ್ರೇಡ್ ಮಾಡಿದ್ದೇವೆ. ಹಾರ್ಡ್ ವೇರ್ ಅಪ್ ಗ್ರೇಡ್ ಅಥವಾ ಬದಲಾವಣೆ ಇಲ್ಲ' ಎಂದು ಅವರು ಉಲ್ಲೇಖಿಸಿದ್ದಾರೆ.

ಇದು ಸುರಕ್ಷಿತವೇ?
ಭದ್ರತಾ ದೃಷ್ಟಿಯಿಂದ ಇದು ಅತ್ಯಂತ ಸುರಕ್ಷಿತ ಸೌಲಭ್ಯವಾಗಿದ್ದು, ಕಾರ್ಡ್ʼನ್ನ ಸ್ವೈಪ್ ಮಾಡುವ ಅಗತ್ಯವಿಲ್ಲ ಎಂದು ದಸ್ತೂರ್ ಹೇಳಿದರು. ಎರಡನೆಯದಾಗಿ, ಟ್ರ್ಯಾಕ್ಷನ್ ಒಂದು ಡೈನಾಮಿಕ್ QR ಕೋಡ್ ಅನ್ನು ಆಧರಿಸಿರುವುದರಿಂದ, ಯುಪಿಐ ಆಪ್ʼನಲ್ಲಿ ಭಿನ್ನವಾಗಿ, ಪ್ರತಿ ವ್ಯವಹಾರದಂತೆ ಕ್ಯೂಆರ್ ಕೋಡ್ ಅನ್ನ ನಕಲು ಮಾಡಲು ಯಾವುದೇ ಮಾರ್ಗವಿಲ್ಲ, ಆದ್ದರಿಂದ ಇದನ್ನ ಡೈನಾಮಿಕ್ QR ಕೋಡ್ ಎಂದು ಕರೆಯಲಾಗುತ್ತದೆ ಎಂದು ಅವರು ವಿವರಿಸಿದರು.

`PNB' ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ : ಚೆಕ್ ಬುಕ್ ಸಿಂಧುತ್ವದ ಅವಧಿ ವಿಸ್ತರಣೆ

ಈ ಚಲನಶೀಲ ಕ್ಯೂಆರ್ ಕೋಡ್ ಆಧಾರಿತ ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾ ಸೌಲಭ್ಯದೊಂದಿಗೆ, ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣ ತೆಗೆಯಬಹುದು. ಒಂದ್ವೇಳೆ ಅವರು ಅಪ್ ಗ್ರೇಡ್ ಮಾಡಿದ್ರೆ, ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣ ತೆಗೆಯಬಹುದು ಎಂದು ಹೇಳಿದರು.

ಭವಿಷ್ಯದ ಯೋಜನೆಗಳ ಬಗ್ಗೆ, ಎನ್ ಸಿಆರ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (ಎನ್ ಪಿಸಿಐ) ಕೆಲವು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳೊಂದಿಗೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಔಪಚಾರಿಕ ವಾಗಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ದಸ್ತೂರ್ ಹೇಳಿದರು.

ರಾಜ್ಯದಲ್ಲಿ ಇಂದಿನಿಂದ 5,500 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ಸಚಿವ ಡಾ.ಕೆ. ಸುಧಾಕರ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags