Kannada News Now

1.8M Followers

`CBSE' 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

03 Apr 2021.05:51 AM

ವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 9, 10, 11 ಮತ್ತು 12ನೇ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಪ್ರಕಟಿಸಿದೆ. ಈ ವಿದ್ಯಾರ್ಥಿಗಳ ಹೊಸ ಶೈಕ್ಷಣಿಕ ಅಧಿವೇಶನವು 2021ರ ಏಪ್ರಿಲ್ʼನಿಂದ ಆರಂಭವಾಗಲಿದೆ. ಗಮನಾರ್ಹವೆಂದರೆ, 2021-22ನೇ ಶೈಕ್ಷಣಿಕ ಸಾಲಿನ ಪಠ್ಯಕ್ರಮದಲ್ಲಿ ಸಿಬಿಎಸ್ ಇ ಯಾವುದೇ ಕಡಿತ ಮಾಡಿಲ್ಲ. ಇದರರ್ಥವೇನೆಂದರೆ, ಹೊಸ ಶೈಕ್ಷಣಿಕ ಅಧಿವೇಶನದಲ್ಲಿ ಮೌಲ್ಯಮಾಪನಗಳಿಗೆ ಸಂಪೂರ್ಣ ಪಠ್ಯಕ್ರಮದ ಪ್ರಕಾರ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಹಿಂದಿನ ಶೈಕ್ಷಣಿಕ ಸಾಲಿನ ಪರಿಷ್ಕೃತ/ಕಡಿಮೆ ಮಾಡಿದ ಸಿಬಿಎಸ್ ಇ ಪಠ್ಯಕ್ರಮ ಹೊಸ ಶೈಕ್ಷಣಿಕ ವರ್ಷದಲ್ಲಿ ಅನ್ವಯವಾಗುವುದಿಲ್ಲ ಅನ್ನೋದನ್ನ ವಿದ್ಯಾರ್ಥಿಗಳು ಗಮನಿಸಬೇಕು. ಹೀಗಾಗಿ, ಈ ಶೈಕ್ಷಣಿಕ ಅಧಿವೇಶನಕ್ಕಾಗಿ ಹೊಸ ತರಗತಿಯಲ್ಲಿ ವ್ಯಾಸಂಗ ಆರಂಭಿಸುತ್ತಿದ್ದಂತೆ ಸಿಬಿಎಸ್ ಇ 9-12ನೇ ತರಗತಿ ವಿದ್ಯಾರ್ಥಿಗಳು ಹೊಸ ಪಠ್ಯಕ್ರಮವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಸಿಬಿಎಸ್ ಇ ವಾರ್ಷಿಕವಾಗಿ 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯ, ಪರೀಕ್ಷೆಗಳ ಪಠ್ಯಕ್ರಮ, ಕಲಿಕಾ ಫಲಿತಾಂಶಗಳು, ಬೋಧನೆಯ ಅಭ್ಯಾಸಗಳು ಮತ್ತು ಮೌಲ್ಯಮಾಪನ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಒಂದು ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮವನ್ನು ಒದಗಿಸುತ್ತದೆ.

ಪಠ್ಯಕ್ರಮವನ್ನ ನೀಡಿದ ನಂತ್ರ, ಪ್ರತಿ ವಿಷಯದ ಪಠ್ಯಕ್ರಮದೊಂದಿಗೆ 9 ರಿಂದ 10ನೇ ತರಗತಿಗಳಿಗೆ ಅರ್ಹತೆ ಆಧಾರಿತ ಪ್ರಶ್ನೆಗಳನ್ನು ಅನುಷ್ಠಾನಗೊಳಿಸಲು ಎನ್ ಸಿಇಆರ್ ಟಿ ಯು ನಿಗದಿಪಡಿಸಿದ ಕಲಿಕಾ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲು ಶಾಲೆಗಳಿಗೆ ಸಿಬಿಎಸ್ ಇ ಸೂಚಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags