ವಿಜಯವಾಣಿ

505k Followers

ದೊಡ್ಡಪ್ಪನಿಗೆ ವಾರಸುದಾರರು ಇಲ್ಲದಿದ್ದರೆ ಅವರ ಆಸ್ತಿ ತಮ್ಮನ ಮಕ್ಕಳಿಗೆ ಸಿಗುತ್ತಾ? ಕಾನೂನು ಹೀಗೆ ಹೇಳಿದೆ ನೋಡಿ.

23 Jun 2022.2:32 PM

 ಪ್ರಶ್ನೆ: ನಮ್ಮ ದೊಡ್ಡಪ್ಪ ಅಂದರೆ ನಮ್ಮ ತಂದೆಯ ಖಾಸಾ ಅಣ್ಣನಿಗೆ ಸಂತತಿ ಇಲ್ಲ.

ನಮ್ಮ ತಾಯಿ ತೀರಿಕೊಂಡು ಐವತ್ತು ವರ್ಷಗಳಿಗೂ ಮೇಲಾಗಿದೆ. ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನೇ ಸಾಕಿರುವ ವಿಚಾರ ಎಲ್ಲರಿಗೂ ಗೊತ್ತು.

ನಮ್ಮಿಬ್ಬರಿಗೂ ನಾಲ್ಕೂವರೆ ಎಕರೆ ಜಮೀನು ಸಹ ಖರೀದಿಸಿ ನೋಂದಾಯಿಸಿ ಕೊಟ್ಟಿದ್ದಾರೆ. ದೊಡ್ಡಪ್ಪ ಮತ್ತು ದೊಡ್ಡಮ್ಮ ತೀರಿಕೊಂಡು ನಲವತ್ತು ವರ್ಷಗಳಾಗಿವೆ. ಅವರ ಆಸ್ತಿಯನ್ನು ನಾವೇ ಅನುಭವಿಸುತ್ತ ಬಂದಿದ್ದೇವೆ. ಈಗ ಅವರ ಎಲ್ಲ ಆಸ್ತಿಗಳಿಗೂ ನಾವೇ ಮಾಲೀಕತ್ವ ಪಡೆಯಲು ನಾವು ಏನು ಮಾಡಬೇಕು?

ಉತ್ತರ: ನೀವು ನಿಮ್ಮ ದೊಡ್ಡಪ್ಪನಿಗೆ ಸೇರಿದ ಎಲ್ಲ ಆಸ್ತಿಗಳ ಖಾತೆ ಬದಲಾವಣೆ ನಿಮ್ಮ ಮತ್ತು ನಿಮ್ಮ ತಂಗಿಯ ಹೆಸರಿಗೆ ಆಗಬೇಕೆಂದು ರೆವಿನ್ಯೂ ಅಧಿಕಾರಿಗಳಿಗೆ ಅರ್ಜಿ ಕೊಡಿ. ಯಾರಾದರೂ ತಕರಾರು ಕೊಡುತ್ತಾರೆಯೇ ಎಂದು ಗಮನಿಸಿ. ಯಾರೂ ತಕರಾರು ಕೊಡದಿದ್ದರೆ ಖಾತೆ ಬದಲಾಯಿಸಿಕೊಂಡು ಕಂದಾಯ ಕಟ್ಟಿಕೊಂಡು ಅನುಭವಿಸುತ್ತ ಬನ್ನಿ. ಕೊಳ್ಳುವವರು ಮುಂದೆ ಬಂದರೆ ಮಾರಾಟವನ್ನೂ ಮಾಡಬಹುದು.

ಒಂದುವೇಳೆ ಯಾರಾದರೂ ತಕರಾರು ಮಾಡಿದರೆ, ಆಗ ಅಂತಹ ವ್ಯಕ್ತಿಗಳ ವಿರುದ್ಧ ನೀವು ನ್ಯಾಯಾಲಯದಲ್ಲಿ ಹಕ್ಕು ಘೋಷಣೆಯ ದಾವೆಯನ್ನು ಹಾಕಬೇಕಾಗುತ್ತದೆ.

ನೀವು ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾದ್ದರಿಂದ ಅವರ ಆಸ್ತಿಗೆ ನೀವೇ ಮಾಲೀಕರು ಎಂದು ನಿಮ್ಮ ಹಕ್ಕನ್ನು ಘೋಷಿಸಿ ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಅಥವಾ ಸಕ್ಸೆಷನ್ ಸರ್ಟಿಫಿಕೇಟ್ ಪಡೆಯಲೂ ನೀವು ವಕೀಲರ ಸಹಾಯ ಪಡೆದು ಅರ್ಜಿ ಹಾಕಬಹುದು. ನಿಮ್ಮ ದೊಡ್ಡಪ್ಪನ ಮೊದಲನೇ ದರ್ಜೆಯ ವಾರಸುದಾರರು, ಅಂದರೆ, ನಿಮ್ಮ ದೊಡ್ಡಮ್ಮ, ಅವರ ಮಕ್ಕಳು ಮತ್ತು ನಿಮ್ಮ ದೊಡ್ಡಪ್ಪನ ತಾಯಿ ಇಲ್ಲದೇ ಇರುವುದರಿಂದ, ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾಗಿ ಅವರ ತಮ್ಮನ ಮಕ್ಕಳಿಗೆ ಆಸ್ತಿಯ ಮಾಲೀಕತ್ವ ಬರುತ್ತದೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

ನಾನು ಕೂಲಿಯವ, ನನ್ನಲ್ಲಿ ಆಸ್ತಿ ಇಲ್ಲ: ಹೆಂಡ್ತಿಗೆ ಡಿವೋರ್ಸ್​ ಕೊಟ್ರೆ ಹಿರಿಯರ ಆಸ್ತಿಯಲ್ಲಿ ಪಾಲು ಕೊಡಬೇಕೆ?

ಪ್ರಶ್ನೆ: ನಮ್ಮ ದೊಡ್ಡಪ್ಪ ಅಂದರೆ ನಮ್ಮ ತಂದೆಯ ಖಾಸಾ ಅಣ್ಣನಿಗೆ ಸಂತತಿ ಇಲ್ಲ. ನಮ್ಮ ತಾಯಿ ತೀರಿಕೊಂಡು ಐವತ್ತು ವರ್ಷಗಳಿಗೂ ಮೇಲಾಗಿದೆ. ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನೇ ಸಾಕಿರುವ ವಿಚಾರ ಎಲ್ಲರಿಗೂ ಗೊತ್ತು.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags