ಉದಯವಾಣಿ

1.4M Followers

ಆದಾಯ ಹೆಚ್ಚಿಸಲು ಪಿಪಿಎಫ್ ನಲ್ಲಿ ಯಾವಾಗ ಹೂಡಿಕೆ ಮಾಡಬೇಕು..?

03 Apr 2021.11:51 AM

ನವ ದೆಹಲಿ : ಪಿಪಿಎಫ್ ಭಾರತೀಯರು ತಮ್ಮ ದೀರ್ಘಕಾಲೀನ ಉಳಿತಾಯವನ್ನು ಠೇವಣಿ ಮಾಡಲು ಬಳಸುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಗ್ಯಾರಂಟಿ ರಿಟರ್ನ್ಸ ನನ್ನು ಒದಗಿಸುತ್ತದೆ.

ಪ್ರಸ್ತುತ, ಪಿಪಿಎಫ್ 7.1% ಬಡ್ಡಿಯನ್ನು ನೀಡುತ್ತಿದೆ. ಸರ್ಕಾರ ಇತ್ತೀಚೆಗೆ ಬಡ್ಡಿದರಗಳನ್ನು ಕೆಳಕ್ಕೆ ಪರಿಷ್ಕರಿಸಿತು, ಆದಾಗ್ಯೂ, ನಂತರ ಆ ನಿರ್ಧಾರವನ್ನು ವಾಪಸ್ ಪಡೆಯಲಾಯಿತು.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ನೀವು ಪಿಪಿಎಫ್‌ ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕಾಗಿಲ್ಲ. ಇನ್ನು, ನಿಮ್ಮ ಪಿಪಿಎಫ್ 20 ಜೂನ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 7.1% ಬಡ್ಡಿದರ ಯತಾವತ್ತಾಗಿ ಮುಂದುವರಿಯುತ್ತದೆ.

ಓದಿ : ರಶ್ಮಿಕಾ ಮಂದಣ್ಣ ಎರಡನೇ ಬಾಲಿವುಡ್‌ ಚಿತ್ರ ಶುರು

ಆದಾಗ್ಯೂ, ಬಡ್ಡಿದರಗಳ ಹೊರತಾಗಿ ನೀವು ಪಿಪಿಎಫ್‌ ನಲ್ಲಿ ಹೂಡಿಕೆ ಮಾಡುತ್ತಿದ್ದರೆ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ಕೆಲವು ವಿಷಯಗಳಿವೆ.

ವರ್ಷದ ಆರಂಭದಲ್ಲಿ ಪಿಪಿಎಫ್‌ ನಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಸೂಕ್ತ. ಈ ರೀತಿಯಾಗಿ ನೀವು ಇಡೀ ವರ್ಷ ಠೇವಣಿಗಳ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ. ಒಂದು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಮಾಡಿದ ಹೂಡಿಕೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ನೀವು ವರ್ಷದ ಕೊನೆಯಲ್ಲಿ ಹೂಡಿಕೆ ಮಾಡಿದರೆ, ನೀವು ವರ್ಷದ ಇಂಟ್ರೆಸ್ಟ್ ನ್ನು ಕಳೆದುಕೊಳ್ಳುತ್ತೀರಿ.

ಇದಲ್ಲದೆ ಪಿಪಿಎಫ್ ಮೇಲಿನ ಇಂಟ್ರೆಸ್ಟ್ ನ್ನು ತಿಂಗಳ ಐದನೇ ಮತ್ತು ಕೊನೆಯ ದಿನದ ನಡುವಿನ ಕನಿಷ್ಠ ಮಾಸಿಕ ಸಮತೋಲನದ ಮೇಲೆ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ಪಿಪಿಎಫ್‌ ನಲ್ಲಿ ನಿಮ್ಮ ಬಾಕಿ ಏಪ್ರಿಲ್ 1 ರಂತೆ ₹ 50,000 ಆಗಿದ್ದರೆ ಮತ್ತು ಏಪ್ರಿಲ್ 6 ರಂದು ನೀವು 20,000 ಠೇವಣಿ ಇಟ್ಟರೆ, ಏಪ್ರಿಲ್ ತಿಂಗಳ ಬಡ್ಡಿಯನ್ನು 70,000 ಬದಲಿಗೆ 50,000 ಕ್ಕೆ ಲೆಕ್ಕಹಾಕಲಾಗುತ್ತದೆ.

ನೀವು ವರ್ಷದ ಆರಂಭದಲ್ಲಿ ಮೊತ್ತವನ್ನು ಠೇವಣಿ ಮಾಡಿದರೆ ಮಾತ್ರ ಗರಿಷ್ಠ ಬಡ್ಡಿಯನ್ನು ಗಳಿಸಬಹುದಾಗಿದೆ.

ಓದಿ : ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ: ಸಚಿವ ಸೋಮಣ್ಣ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags