Kannada News Now

1.8M Followers

ALEART: ಹೊಸ PF ತೆರಿಗೆ ನಿಯಮ: ಇದು ನಿಮ್ಮ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನೋ ವಿವರ ಇಲ್ಲಿದೆ

04 Apr 2021.07:04 AM

ಡಿಜಿಟಲ್‌ ಡೆಸ್ಕ್:‌ ಏಪ್ರಿಲ್ 1ರಿಂದ ಆರಂಭವಾಗುವ ಭವಿಷ್ಯ ನಿಧಿಗೆ ವಾರ್ಷಿಕ ₹2.5 ಲಕ್ಷಕ್ಕಿಂತ ಹೆಚ್ಚು ಉದ್ಯೋಗಿಗಳ ಕೊಡುಗೆಗಳ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು 2021ರ ಕೇಂದ್ರ ಬಜೆಟ್ʼನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

₹2.5 ಲಕ್ಷದವರೆಗೂ ಠೇವಣಿಯ ಮಿತಿಯಲ್ಲಿ ಬಡ್ಡಿ ವಿನಾಯಿತಿಯಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದು, ಹಣಕಾಸು ಮಸೂದೆ 2021ರಲ್ಲಿ ನಿಯಮಕ್ಕೆ ತಿದ್ದುಪಡಿಯನ್ನ ಸರ್ಕಾರ ಜಾರಿಗೆ ತಂದಿದೆ. ಇನ್ನು ಹಣಕಾಸು ಸಚಿವಾಲಯ ಭವಿಷ್ಯ ನಿಧಿಯಲ್ಲಿ ಠೇವಣಿ ಮಿತಿಯನ್ನ ₹5 ಲಕ್ಷಕ್ಕೆ ಹೆಚ್ಚಿಸಿದ್ದು, ಉದ್ಯೋಗದಾತರ ಕೊಡುಗೆ ಇಲ್ಲದಿದ್ದರೆ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ ಎಂದಿದೆ. ಉದ್ಯೋಗಿಯ ಮೂಲ ವೇತನ ಮತ್ತು ಕಾರ್ಯಕ್ಷಮತೆಯ ವೇತನದಲ್ಲಿ ಕನಿಷ್ಠ 12% ರಷ್ಟನ್ನ ಭವಿಷ್ಯ ನಿಧಿಯಾಗಿ ಕಡ್ಡಾಯವಾಗಿ ಕಡಿತ ಮಾಡಲಾಗುತ್ತೆ.

ಹಾಗೆಯೇ ಉದ್ಯೋಗದಾತರು 12% ನಷ್ಟು ಹಣವನ್ನ ನೀಡುತ್ತಾರೆ.

ಪಿಎಫ್ ಮೇಲಿನ ಬಡ್ಡಿ ತೆರಿಗೆಯ ಹೊಸ ನಿಯಮದ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು..!

1) 'ಅಧಿಕ ಆದಾಯ ಪಡೆಯುವ ಉದ್ಯೋಗಿಗಳು ತಾವು ಗಳಿಸಿದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನ ತರ್ಕ ಬದ್ಧಗೊಳಿಸಲು, ಉದ್ಯೋಗಿಗಳು ವಿವಿಧ ಭವಿಷ್ಯ ನಿಧಿಗಳಿಗೆ ವಾರ್ಷಿಕ ವಂತಿಗೆಗೆ ₹2.5 ಲಕ್ಷಗಳ ಕೊಡುಗೆಯನ್ನ ನೀಡ್ತಾರೆ. ಈ ಮೂಲಕ ಗಳಿಸಿದ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನ ಸೀಮಿತಗೊಳಿಸಲು ಉದ್ದೇಶಿಸಲಾಗಿದೆ' ಎಂದು ಸೀತಾರಾಮನ್ 2021ರ ಬಜೆಟ್ʼನಲ್ಲಿ ಹೇಳಿದರು.

2) ನಂತ್ರ ಉದ್ಯೋಗದಾತರು ನಿಧಿಗೆ ಯಾವುದೇ ಕೊಡುಗೆಯನ್ನ ನೀಡದಿದ್ರೆ, ಕೇಂದ್ರ ಸರ್ಕಾರವು ಬಡ್ಡಿಯ ಮೇಲಿನ ತೆರಿಗೆಯ ಮಿತಿಯನ್ನ ₹5 ಲಕ್ಷಕ್ಕೆ ಏರಿಸಿತು.

'5 ಲಕ್ಷ ರೂ.ವರೆಗಿನ ಪಿಎಫ್ʼವಂತಿಗೆ ತೆರಿಗೆ ಮುಕ್ತ ಬಡ್ಡಿಯನ್ನ ಹೆಚ್ಚಿಸುವ ತಿದ್ದುಪಡಿಯಿಂದ ದೊಡ್ಡ ತೆರಿಗೆ ಪಾವತಿದಾರರಿಗೆ ಸ್ವಲ್ಪ ನಿರಾಳತೆ ಸಿಗಲಿದೆ. ಇದರಲ್ಲಿ ಉದ್ಯೋಗಿಯು ಯಾವುದೇ ಉದ್ಯೋಗದಾತ ಕೊಡುಗೆಯನ್ನ ಹೊಂದಿಲ್ಲದ ನಿಧಿಗೆ ಕೊಡುಗೆ ನೀಡಿದ ಪ್ರಕರಣಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಉದ್ಯೋಗಿಗಳು ತಮ್ಮ ಪಾಲನ್ನ ನೀಡುವ ಅದೇ ನಿಧಿಗೆ ಸ್ವಯಂ ಪ್ರೇರಿತರಾಗಿ ತಮ್ಮ ಕೊಡುಗೆಯನ್ನ ಹೆಚ್ಚಿಸುತ್ತಾರೆ' ಎಂದು ಡಿವಿಎಸ್ ಅಡ್ವೈಸರ್ಸ್ ಎಲ್ ಎಲ್ ಪಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರ ದಿವಾಕರ್ ವಿಜಯ ಸಾರಥಿ ಸ್ಪಷ್ಟಪಡಿಸಿದ್ದಾರೆ.

3) ಈ ನಡೆ ಅಧಿಕ ಆದಾಯ ಗಳಿಸುವವರು ಮತ್ತು ಅಧಿಕ ನಿವ್ವಳ ಆದಾಯ ಹೊಂದಿರುವ ವ್ಯಕ್ತಿಗಳು (ಎಚ್ ಎನ್ ಐ) ಮೇಲೆ ಪರಿಣಾಮ ಬೀರಲಿದೆ.

'ಶೇ.93ರಷ್ಟು ವಂತಿಗೆದಾರರು ₹2.5 ಲಕ್ಷ ಮಿತಿಯ ವ್ಯಾಪ್ತಿಗೆ ಒಳಪಡುತ್ವೆ ಮತ್ತು ಈ ಮಿತಿಯಿಂದ ಹೊರಗಿರುವ ದೊಡ್ಡ ತೆರಿಗೆ ಪಾವತಿದಾರರು ಮಾತ್ರ ಎಂದು ಹೇಳುವ ಮೂಲಕ ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ.

4) ಹೊಸ ನಿಯಮವು ಕೇವಲ ನೌಕರರ ಕೊಡುಗೆಯನ್ನ ಗಣನೆಗೆ ತೆಗೆದುಕೊಳ್ಳುತ್ತದೆಯೇ ಹೊರತು ಯಾವುದೇ ವರ್ಷದಲ್ಲಿ ನಿಧಿಗೆ ಒಟ್ಟು ಕೊಡುಗೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ನಾವು ಕಾಣಬಹುದು' ಎಂದು ವಿಪಿಟಿಪಿ ಅಂಡ್ ಕಂಪೆನಿಯ ಪಾಲುದಾರ ಗೌರವ್ ಸರಾಫ್ ಹೇಳಿದ್ದಾರೆ.

5) ಮೂಲ ವೇತನದ ಶೇ.12ಕ್ಕಿಂತ ಹೆಚ್ಚು ಹಣವನ್ನ ಹೂಡಿಕೆ ಮಾಡಲು ಸ್ವಯಂ ಪ್ರೇರಿತ ಭವಿಷ್ಯ ನಿಧಿಯನ್ನು ಬಳಸುವ ವೇತನದಾರ ಉದ್ಯೋಗಿಗಳ ಮೇಲೂ ಪರಿಣಾಮ ಬೀರಲಿದೆ. 'ಹಿಂತೆಗೆತಕ್ಕೆ ತೆರಿಗೆ ರಹಿತ ವಾದ ಒಂದು ದೊಡ್ಡ ತೆರಿಗೆ ಮುಕ್ತ ಬಡ್ಡಿಯನ್ನು ಈಗ ತರ್ಕ ಬದ್ಧಗೊಳಿಸಲಾಗಿದ್ದು, ಇದು ಹೆಚ್ಚಿನ ಆದಾಯವನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ' ಎಂದು ಕ್ಲಿಯರ್ ಟ್ಯಾಕ್ಸ್ ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ಚಿತ್ ಗುಪ್ತಾ ಹೇಳಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags