Kannada News Now

1.8M Followers

`ಫೇಸ್ ಬುಕ್' ಬಳಕೆದಾರರಿಗೆ ಬಿಗ್ ಶಾಕ್ : 50 ಕೋಟಿ ಖಾತೆದಾರರ ಮಾಹಿತಿ ಸೋರಿಕೆ!

05 Apr 2021.05:36 AM

ನವದೆಹಲಿ : ಫೇಸ್ ಬುಕ್ ಖಾತೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಫೇಸ್ ಬುಕ್ ನ 50 ಕೋಟಿ ಗ್ರಾಹಕರ ಡೇಟಾ ಆನ್ ಲೈನ್ ನಲ್ಲಿ ಲಭ್ಯವಾಗಿದ್ದು, ಈ ಮಾಹಿತಿ ಹ್ಯಾಕರ್ ಗಳ ಪಾಲಾಗುವ ಸಾಧ್ಯತೆ ಇದೆ.

ಕೊರೊನಾ 2ನೇ ಅಲೆ ಹೆಚ್ಚಳದ ನಡುವೆ ಕೇಂದ್ರದಿಂದ ಕರ್ನಾಟಕಕ್ಕೆ ಭರ್ಜರಿ ಗುಡ್ ನ್ಯೂಸ್

ವೆಬ್ ಸೈಟ್ ಗಳಲ್ಲಿ ಲಭ್ಯವಾಗಿರುವ ಫೇಸ್ ಬುಕ್ ಡೇಟಾದಲ್ಲಿ ದೂರವಾಣಿ ಸಂಖ್ಯೆ, ಫೇಸ್ ಬುಕ್ ಐಡಿ, ಬಳಕೆದಾರರ ಹೆಸರು, ಸ್ಥಳ, ಹುಟ್ಟಿದ ದಿನ, ಇ-ಮೇಲ್ ಐಡಿ ಮಾಹಿತಿ ಇದೆ. ಆದರೆ, ಈ ಮಾಹಿತಿ ಹಿಂದಿನದ್ದಾಗಿದ್ದು, 2019 ರಲ್ಲೇ ಈ ವಿಚಾರ ಬಗೆಹರಿದಿದೆ ಎಂದು ಕ್ಯಾಲಿಪೋರ್ನಿಯಾ ಮೂಲದ ಮೆನ್ಲೊ ಪಾರ್ಕ್ ಹೇಳಿದೆ.

2019 ರ ಡಿಸೆಂಬರ್ ನಲ್ಲಿ ಫೇಸ್ ಬುಕ್ ನ ಅಮೆರಿಕದ 267 ಮಿಲಿಯಲ್ ಗ್ರಾಹಕರ ಮಾಹಿತಿಯನ್ನು ಉಕ್ರೇನ್ ಸುರಕ್ಷತಾ ಸಂಶೋಧಕರು ಕಲೆ ಹಾಕಿದ್ದರು.

2018 ರಲ್ಲಿ ಫೇಸ್ ಬುಕ್ ನ 87 ಮಿಲಿಯನ್ ಬಳಕೆದಾರರ ಡೇಟಾವನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಪಡೆದುಕೊಂಡಿತ್ತು ಎನ್ನಲಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags