ಕನ್ನಡದುನಿಯಾ

1.6M Followers

SHOCKING NEWS: ದೇಶದಲ್ಲಿ ಕೊರೋನಾ ಸ್ಪೋಟ, ಒಂದೇ ದಿನ ದಾಖಲೆಯ 1 ಲಕ್ಷ ಜನರಿಗೆ ಸೋಂಕು ದೃಢ

05 Apr 2021.07:50 AM

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅತಿ ಹೆಚ್ಚು ಪ್ರಕರಣ ದಾಖಲಾದ ದಿನ ಇದಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,03,794 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತ ಕಂಡ ಕೋವಿಡ್-19 ಪ್ರಕರಣಗಳಲ್ಲಿ ಇದು ದಾಖಲೆಯಾಗಿದೆ. 2020 ರ ಸೆಪ್ಟೆಂಬರ್ 16 ರಂದು ಭಾರತದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣ ದಾಖಲಾಗಿತ್ತು. ಅಂದು 97,894 ಜನರಿಗೆ ಸೋಂಕು ತಗುಲಿತ್ತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags