ಕನ್ನಡದುನಿಯಾ

1.6M Followers

ATM ನಲ್ಲಿ ಹರಿದ ನೋಟು ಸಿಕ್ಕಿದ್ರೆ ಮಾಡಬೇಕಾದ್ದೇನು.? ನಿಮಗೆ ತಿಳಿದಿರಲಿ ಈ ಮಾಹಿತಿ

05 Apr 2021.11:46 AM

ಮನೆಯಲ್ಲಿ ಹಣವಿಲ್ಲವೆಂದಾಗ ಜನರು ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಕೆಲವೊಮ್ಮೆ ಎಟಿಎಂನಿಂದ ಹರಿದ ಹಣ ಬರುತ್ತದೆ. ಇದ್ರಿಂದ ಚಿಂತೆಗೊಳ್ಳುವ ಜನರು ಆ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಇನ್ಮುಂದೆ ಹರಿದ ನೋಟುಗಳು ಸಿಕ್ಕಿದ್ರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಸುಲಭವಾಗಿ ಬದಲಿಸಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಎಟಿಎಂನಲ್ಲಿ ಹರಿದ ನೋಟುಗಳು ಸಿಕ್ಕರೆ ಅದನ್ನು ಬ್ಯಾಂಕ್ ನಲ್ಲಿ ಬದಲಿಸಿಕೊಳ್ಳಬಹುದು. ಸರ್ಕಾರಿ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳು ಇದನ್ನು ಬದಲಿಸಲು ನಿರಾಕರಿಸುವಂತಿಲ್ಲ. ರಿಸರ್ವ್ ಬ್ಯಾಂಕ್ 2017 ರ ಏಪ್ರಿಲ್‌ನಲ್ಲಿ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಎಲ್ಲಾ ಬ್ಯಾಂಕುಗಳು ತಮ್ಮ ಪ್ರತಿಯೊಂದು ಶಾಖೆಯಲ್ಲಿ ಎಲ್ಲ ಹರಿದ ನೋಟುಗಳನ್ನು ಬದಲಿಸಲು ಅವಕಾಶ ನೀಡಬೇಕು.

ನೋಟು ವಿನಿಮಯ ಮಾಡುವ ಬ್ಯಾಂಕ್ ಪ್ರಕ್ರಿಯೆ ತುಂಬಾ ಸುಲಭ.

ಬ್ಯಾಂಕ್, ನೋಟು ಬದಲಿಸಲು ನಿರಾಕರಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ನೋಟು ಬದಲಿಸಲು ನಿರಾಕರಿಸಿದ ಬ್ಯಾಂಕುಗಳಿಗೆ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ನೀವು ಯಾವ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಿದ್ದೀರೋ ಅದೇ ಬ್ಯಾಂಕ್ ಗೆ ಹೋಗಬೇಕಾಗುತ್ತದೆ. ನಂತರ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಿದ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಅರ್ಜಿಯಲ್ಲಿ ನೀಡಬೇಕಾಗುತ್ತದೆ. ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಸ್ವೀಕರಿಸಿದ ಸ್ಲಿಪ್ ನಕಲನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ. ಸ್ಲಿಪ್ ಇಲ್ಲವೆಂದಾದ್ರೆ ಮೊಬೈಲ್ ನಲ್ಲಿರುವ ದಾಖಲೆ ನೀಡಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ ಕೂಡಲೇ ಬ್ಯಾಂಕ್ ಅಧಿಕಾರಿಗಳು ಖಾತೆ ವಿವರಗಳನ್ನು ಪರಿಶೀಲಿಸುತ್ತಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags