AIN Live News

264k Followers

6-9ನೇ ತರಗತಿವರೆಗೆ ಪರೀಕ್ಷೆ ವಿಚಾರ ಇನ್ನೆರಡು ದಿನಗಳಲ್ಲಿ ನಿರ್ಧಾರ :ಸಚಿವ ಸುರೇಶ್ ಕುಮಾರ್

05 Apr 2021.2:20 PM

ಬೆಂಗಳೂರು: ರಾಜ್ಯದಲ್ಲಿ 6-9 ನೇ ತರಗತಿವರೆಗೆ ಪರೀಕ್ಷೆ ನಡೆಯಬೇಕೋ ಬೇಡವೋ ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಎರಡು ದಿನಗಳಲ್ಲಿ ಇಲಾಖೆಯಿಂದ ಮತ್ತೊಂದು ಸಭೆ ನಡೆಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, 6-9 ನೇ ತರಗತಿವರೆಗೆ ತರಗತಿಗಳು ಆರಂಭವಾಗಿತ್ತು. ಆದರೆ, ಕೋವಿಡ್ ಸೋಂಕು ಹೆಚ್ಚಳವಾದ ಕಾರಣ ಸ್ಥಗಿತ ಮಾಡಿ ಆದೇಶಿಸಲಾಗಿದೆ. ಇದರ ಜೊತೆಗೆ ಪರೀಕ್ಷೆ ನಡೆಯಬೇಕೋ ಬೇಡ್ವೋ ಎಂಬ ಚರ್ಚೆ ನಡೀತಿದೆ. ಈ ಕುರಿತು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.‌ ಶಿಕ್ಷಣ ಇಲಾಖೆಯಿಂದ ಸಭೆ ನಡೆಸಲಾಗಿದ್ದು,

ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಭಾಗಿಯಾಗಿದ್ದರು.

ಸಭೆಯಲ್ಲಿ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ, ಪೋಷಕರ ಪ್ರತಿನಿಧಿ, ಕ್ಯಾಮ್ಸ್, ರೂಪ್ಸಾ, ಮಾಧ್ಯಮಿಕ ಶಾಲೆಗಳ ಸಂಘ ಭಾಗಿಯಾಗಿದ್ದವು. 44 ಜನರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಎಲ್ಲರೂ ಕೂಡ ತಮ್ಮ ಅಭಿಪ್ರಾಯ ತಿಳಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು ಎಂದರು.

ಖಾಸಗಿ ಶಾಲಾ ಸಂಘಟನೆಗಳು ಯಾವುದಾದರೂ ಒಂದು ಮಾದರಿಯಲ್ಲಿ ಕಲಿಕಾ ಮೌಲ್ಯಾಂಕನ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ತಜ್ಞರು- ಕಡ್ಡಾಯ ಶಿಕ್ಷಣ ಕಾಯಿದೆ ಅಡಿ ಮುಂದಿರುವ ದಾರಿಯನ್ನು ವಿವರಿಸಿದ್ದಾರೆ.‌ ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಸಭೆಯಲ್ಲಿ ನಾನು ಎಲ್ಲರ ಅನಿಸಿಕೆ, ಅಭಿಪ್ರಾಯ ಮುಕ್ತವಾಗಿ ಸ್ವೀಕರಿಸಿದ್ದೇನೆ. ಇನ್ನು ಎರಡು ದಿನಗಳಲ್ಲಿ ಇಲಾಖೆಯಿಂದ ಮತ್ತೊಂದು ಸಭೆ ನಡೆಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಭಾರತದ ಸುಪ್ರಸಿದ್ಧ ಜ್ಯೋತಿಷ್ಯರುಗಳಾದ ಪಂಡಿತ ಶ್ರೀ ಗೋಪಾಲಕೃಷ್ಣ ಭಟ್ ರವರು ನಿಮ್ಮ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಮಕ್ಕಳ ಸಮಸ್ಯೆ, ಹಾಗೂ ಗಂಡ ಹೆಂಡತಿ ಜಗಳ ಇನ್ನೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.. ಸಂಪರ್ಕಿಸಿ 9535402066 ವಿಳಾಸ : ೧ನೇ ಮಹಡಿ ಆರ್.ವಿ ಭದ್ರಯ್ಯ ಸ್ಟೋರ್ ಎದುರು ಬಾಷ್ಂ ಸರ್ಕಲ್ ರಾಜಾಜಿನಗರ ಬೆಂಗಳೂರು.

Share

Continue Reading

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags