Kannada News Now

1.8M Followers

BIG BREAKING NEWS : ನಾಳೆ 'ಸಾರಿಗೆ ನೌಕರ'ರ ಎಲ್ಲಾ ರಜೆ ರದ್ದು, ಕೆಲಸಕ್ಕೆ ಗೈರಾದ್ರೇ ವೇತನ ಕಟ್ : 'ಮುಷ್ಕರ ನಿರತ'ರಾಗುವರಿಗೆ KSRTC ಎಂಡಿ ಖಡಕ್ ಎಚ್ಚರಿಕೆ

06 Apr 2021.11:32 AM

ಬೆಂಗಳೂರು : ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅಳವಡಿಸಿಕೊಳ್ಳುವ ಬೇಡಿಕೆ ಕುರಿತಂತೆ ಚರ್ಚಿಸುತ್ತಿದೆ. ಇಂತಹ ಬೇಡಿಕೆ ಈಡೇರಿಸಿಲ್ಲ, ಈಡೇರಿಸುವಂತೆ ಆಗ್ರಹಿಸಿ ಏಪ್ರಿಲ್ 7ರ ನಾಳೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂತಹ ನೌಕರರ ಎಲ್ಲಾ ರಜೆಯನ್ನು ರದ್ದುಗೊಳಿಸಿರುವಂತ ಕೆಎಸ್ ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ, ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ-2013ರ ಅನುಸಾರ ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ನಾಲ್ಕು ನಿಗಮದ ಸಾರಿಗೆ ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

BIG BREAKING NEWS : 'ಸುಪ್ರೀಂ ಕೋರ್ಟ್'ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ನೇಮಕ ಮಾಡಿ 'ರಾಷ್ಟ್ರಪತಿ ಆದೇಶ'

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪ ನಿರ್ದೇಶಕರು ಎಲ್ಲಾ ಹಿರಿಯ, ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂದು ಮತ್ತು ಸರ್ಕಾರಿ ನೌಕರರು ಪಡೆಯುತ್ತಿರುವ ಎಲ್ಲಾ ಸವಲತ್ತುಗಳನ್ನು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೂ ಸಹ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಒತ್ತಾಯಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದವರು ದಿನಾಂಕ 07-04-2021ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯದ ಜನಸಾಮಾನ್ಯರಿಗೆ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಅದಕ್ಕನುಗುಣವಾಗಿ ಘನ ಕರ್ನಾಟಕ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಎಂಬುದಾಗಿ ಘೋಷಿಸಿರುತ್ತದೆ.

BIG NEWS : ನಾಳೆ ಸಾರಿಗೆ ನೌಕರರ ಮುಷ್ಕರ : ಇಂದು ಮಧ್ಯಾಹ್ನದಿಂದಲೇ `BMTC' ಬಸ್ ಸಂಚಾರ ಬಂದ್?

ಅಲ್ಲದೇ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ-2013(Karnataka Act No-25/2015) ಯಡಿ ತಂದು ಅಧಿಸೂಚನೆಯನ್ನು ಘನ ಸರ್ಕಾರವು ಹೊರಡಿಸಿದ್ದು, ಅದರನ್ವಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಮುಷ್ಕರವನ್ನು ನಿರ್ಬಂಧಿಸಲಾಗಿದೆ. ಅದರನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೊಡುವಂತಿಲ್ಲ. ಇತರ ಯಾವುದೇ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳು ನಿಗಮದ ನೌಕರರು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ. ಬೆಂಬಲ ಸಹ ವ್ಯಕ್ತ ಪಡಿಸುವಂತಿಲ್ಲ. ಅಧಿಸೂಚನೆಯ ಪ್ರತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದವರಿಗೆ ಸಹ ಜಾರಿಗೊಳಿಸಲಾಗಿದೆ.

ದಿನಾಂಕ 07-04-2021ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡುವುದಾಗಿ ತಿಳಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದವರು ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿಷಯದ ವಿವಾದವು ಪ್ರಸ್ತುತ ರಾಜ್ಯದ ಅಪರ ಕಾರ್ಮಿಕ ಆಯುಕ್ತರು (ಕೈಗಾರಿಕಾ ಬಾಂಧವ್ಯ)ರವರಲ್ಲಿ ರಾಜೀ ಸಂಧಾನದ ಹಂತದಲ್ಲಿರುತ್ತದೆ.

BREAKING : ನಾಳಿನ 'ಸಾರಿಗೆ ನೌಕರರ ಮುಷ್ಕರ'ದ ಬಗ್ಗೆ 'ಡಿಸಿಎಂ ಲಕ್ಷ್ಮಣ್ ಸವದಿ' ಹೇಳಿದ್ದೇನು ಗೊತ್ತಾ.?

ಕೈಗಾರಿಕಾ ವಿವಾದಗಳ ಕಾಯ್ದೆ-1947 ಮತ್ತು ನಿಯಮಗಳನ್ವಯ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಯ ನೌಕರರ ಮುಷ್ಕರದ ನೋಟಿಸು ಸಂಬಂಧಪಟ್ಟ ವಿಷಯವು ರಾಜೀ ಸಂಧಾನದಲ್ಲಿರುವಾಗ್ಗೆ ಸಂಸ್ಥೆಯ ನೌಕರರು ಅಥವಾ ಕಾರ್ಮಿಕ ಸಂಘಟನೆಗಳು ಮುಷ್ಕರ ಹೂಡುವಂತಿಲ್ಲ.

ದಿನಾಂಕ 07-04-2021ರಿಂದ ನಿಗಮದ ಅನುಸೂಚಿಗಳ ಆಚರಣೆಯು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಕೆಲಸಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಸೂಚನೆಗಳು ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಮಾತ್ರ ಅನ್ವಯಿಸುವುದಿಲ್ಲ ಎಂದಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags