Kannada News Now

1.8M Followers

ರಾಜ್ಯದ 'ಸರ್ಕಾರಿ ನೌಕರ'ರಿಗೆ ಬಹುಮುಖ್ಯ ಮಾಹಿತಿ : ಏ.20ರೊಳಗೆ 'ಆಧಾರ್ ವಿವರ'ಗಳನ್ನು 'HRMSನಲ್ಲಿ ಇಂದೀಕರಿಸಲು' ರಾಜ್ಯ ಸರ್ಕಾರ ಸೂಚನೆ

06 Apr 2021.4:08 PM

ಬೆಂಗಳೂರು : ದಿನಾಂಕ 16-02-2021ರಲ್ಲಿ ನೀಡಿರುವ ಮಾರ್ಗಸೂಚಿಗಳನ್ವಯ, ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ತಮ್ಮ ಆಧಾರ್ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಇಂದೀಕರಿಸಲು, ತಮ್ಮ ಒಪ್ಪಿಗೆ ಪತ್ರವನ್ನು ( Consent Form) ಭರ್ತಿ ಮಾಡಿದ ನಂತ್ರ, ಸಹಿ ಮಾಡಿ ದಿನಾಂಕ 20-04-2021ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

'ರಮೇಶ್ ಜಾರಕಿಹೊಳಿ' ದಾಖಲಾಗಿದ್ದ ಗೋಕಾಕ್ ತಾಲೂಕು ಆಸ್ಪತ್ರೆಗೆ 'ಎಸ್‌ಐಟಿ ಅಧಿಕಾರಿ'ಗಳು ಭೇಟಿ : ಆರೋಗ್ಯ ಸಂಬಂಧಿ ದಾಖಲೆಗಳ ಪರಿಶೀಲನೆ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸಿಬ್ಬಂದಿ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ದಿನಾಂಕ 04-02-2021 ಹಾಗೂ ಸಮಸಂಖ್ಯೆಯ ಸರ್ಕಾರಿ ಆದೇಶ ದಿನಾಂಕ 16-02-2021ರಲ್ಲಿ ನೀಡಿರುವ ಮಾರ್ಗಸೂಚಿಗಳನ್ವಯ ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ತಮ್ಮ ಆಧಾರ್ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಇಂದೀಕರಿಸಲು ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸಲಾಗಿರುತ್ತದೆ.

ಬಿಗ್ ಬಾಸ್ ವೇದಿಕೆಯಲ್ಲಿಯೇ ಕಿಚ್ಚನ ಮುಂದೆ ಪತ್ನಿಗೆ ಕ್ಷಮೆಯಾಚಿಸಿದ್ದೇಕೆ ಹಿರಿಯ ನಟ ಶಂಕರ್ ಅಶ್ವತ್ಥ್..?

ಅದರಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ದಿನಾಂಕ 08-03-2021ರಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರು ತಮ್ಮ ಆಧಾರ್ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಇಂದೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.

ಅರೆಸ್ಟ್‌ ಮಾಡ್ತೀವಿ.. ಜಡ್ಜ್‌ ಮುಂದೆ ನಿಲ್ಲಿಸಿ, ಜೈಲಿಗೆ ಕಳಿಸ್ತೇವೆ: ಪ್ರತಿಭಟನೆಕಾರರಿಗೆ ಪೊಲೀಸ್‌ ಆಯುಕ್ತರ ಎಚ್ಚರಿಕೆ

ಅದುದ್ದರಿಂದ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಎಲ್ಲಾ ಅಧಿಕಾರಿ, ನೌಕರರು ತಮ್ಮ ಆಧಾರ್ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಇಂದೀಕರಿಸಲು ಕ್ರಮ ಕೈಗೊಳ್ಳುವ ಸಲುವಾಗಿ ತಮ್ಮ ಮೂಲ ಆಧಾರ್ ಕಾರ್ಡ್ ಹಾಗೂ ಅದರ ದೃಢೀಕರಿಸಿದ ಜೆರಾಕ್ಸ್ ಪ್ರತಿಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ತಮ್ಮ ಸೇವಾ ವಿಷಯಗಳನ್ನು ನಿರ್ವಹಿಸುವ ಸಂಬಂಧಿಸಿದ ಶಾಖೆಗಳ ಶಾಖಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆಧಾರ್ ಕಾರ್ಡ್ ನಲ್ಲಿನ ವಿವರಗಳನ್ನು ಇಂದೀಕರಿಸಲು ಹಾಗೂ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ತಮ್ಮ ಆಧಾರ್ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಇಂದೀಕರಿಸಲು ತಮ್ಮ ಒಪ್ಪಿಗೆ ಪತ್ರವನ್ನು(Consent Form) ಭರ್ತಿ ಮಾಡಿದ ನಂತ್ರ ಸಹಿ ಮಾಡಿ ಒದಗಿಸಲು ದಿನಾಂಕ 20-04-2021ರೊಳಗಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags