ಕನ್ನಡದುನಿಯಾ

1.6M Followers

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಒಂದೇ ದಿನ 6150 ಜನರಿಗೆ ಸೋಂಕು. 39 ಮಂದಿ ಸಾವು -ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

06 Apr 2021.6:22 PM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಭಾರಿ ಸ್ಪೋಟವಾಗಿದ್ದು, ಇವತ್ತು ಒಂದೇ ದಿನ 6150 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.

ಒಟ್ಟು ಸೋಂಕಿತರ ಸಂಖ್ಯೆ 10,26,584 ಕ್ಕೆ ಏರಿಕೆಯಾಗಿದೆ. ಇವತ್ತು 3487 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,68,762 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಒಂದೇ ದಿನ 39 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,696 ಜನ ಸಾವನ್ನಪ್ಪಿದ್ದಾರೆ.

45,107 ಸಕ್ರಿಯ ಪ್ರಕರಣಗಳಿದ್ದು 351 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ 4266 ಜನರಿಗೆ ಸೋಂಕು ತಗಲಿದೆ. 26 ಜನ ಸೋಂಕಿತರು ಮೃತಪಟ್ಟಿದ್ದಾರೆ. 32605 ಸಕ್ರಿಯ ಪ್ರಕರಣಗಳು ಇವೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags