Suvarna News

1.4M Followers

ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

06 Apr 2021.8:04 PM

ಧಾರವಾಡ, (ಏ.06): ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕಗಳನ್ನು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಇಂದು (ಮಂಗಳವಾರ) ಪ್ರಕಟಿಸಿದರು.

ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. ಈ ವರ್ಷ ಒಟ್ಟು 6,72,000 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಾಯಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ: ಇಲ್ಲಿದೆ ಪರಿಷ್ಕೃತ Time Table

ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಈ ವರ್ಷ ಆಫ್‌ಲೈನ್ ತರಗತಿಗೆ ಸಮಸ್ಯೆ ಎದುರಾಯ್ತು. ಆದರೂ ಪಠ್ಯಕ್ರಮವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

ಪಿಯುಸಿ ಪರೀಕ್ಷಾ ಕೇಂದ್ರಗಳು ಈ ಬಾರಿ ಕೇವಲ ಪರೀಕ್ಷಾ ಕೇಂದ್ರಗಳಾಗಿರಲ್ಲ; ಅವು ಸುರಕ್ಷಾ ಕೇಂದ್ರಗಳೂ ಆಗಿರುತ್ತವೆ.

ಸುಲಲಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮಕೈಗೊಳ್ಳುತ್ತೇವೆ. ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದರು.

ವೇಳಾಪಟ್ಟಿ ಇಂತಿದೆ
ಮೇ 24 ರಂದು ಇತಿಹಾಸ
ಮೇ 25 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ಮೇ 26 ಭೂಗೋಳಶಾಸ್ತ್ರ
ಮೇ 27 ಮನಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಮೇ 28 ತರ್ಕಶಾಸ್ತ್ರ
ಮೇ 29 ಕನ್ನಡ
ಮೇ 31 ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂನ್ 1 ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಜೂನ್ 2 ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂನ್ 3 ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂನ್ 4 ಅರ್ಥಶಾಸ್ತ್ರ
ಜೂನ್ 5 ಗೃಹವಿಜ್ಞಾನ
ಜೂನ್ 7 ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್ 8 ಭೂಗರ್ಭಶಾಸ್ತ್ರ
ಜೂನ್ 9 ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್ ಫ್ರೆಂಚ್
ಜೂನ್ 10 ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಜೂನ್ 11 ಉರ್ದು, ಸಂಸ್ಕೃತ
ಜೂನ್ 12 ಸಂಖ್ಯಾಶಾಸ್ತ್ರ,
ಜೂನ್ 14 ಐಚ್ಛಿಕ ಕನ್ನಡ
ಜೂನ್ 15 ಹಿಂದಿ
ಜೂನ್ 16 ಇಂಗ್ಲಿಷ್

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags