Kannada News Now

1.8M Followers

Big Breaking News : ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ 'RBI', 4% ರಷ್ಟು ಮುಂದುವರಿಸಲು ನಿರ್ಧಾರ

07 Apr 2021.10:11 AM

ನವದೆಹಲಿ: ಆರ್ಥಿಕತೆ ಚೇತರಿಕೆಯ ಸೂಚನೆಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಯಾವುದೇ ಬದಲಾವಣೆ ಮಾಡದೇ ಇರುವುದಕ್ಕೆ ಮುಂದಾಗಿದೆ. ರೆಪೋ ದರವನ್ನು 4% ರಷ್ಟು ಮುಂದುವರಿಸಲು ನಿರ್ಧರಿಸಿದೆ ಇದೇ ವೇಳೇ ರಿವರ್ಸ್ ರೆಪೊ ದರವು 3.35% ನಿಗದಿ ಮಾಡಲಾಗಿದೆ. . ಆರು ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಇದು 2021-22ರ ಆರ್ಥಿಕ ವರ್ಷದ ಮೊದಲ ಎಂಪಿಸಿ ಸಭೆಯಾಗಿದೆ. ರಿಸರ್ವ್ ಬ್ಯಾಂಕ್ ಕೊನೆಯದಾಗಿ 2020ರ ಮೇ 22ರಂದು ನೀತಿ ದರಗಳನ್ನು ಪರಿಷ್ಕರಿಸಿತ್ತು ಎಂದು ತಿಳಿದುಬಂದಿದೆ.

ರೆಪೊ ದರವು ಒಂದು ದೇಶದ ಕೇಂದ್ರ ಬ್ಯಾಂಕ್ (ಭಾರತೀಯ ರಿಸರ್ವ್ ಬ್ಯಾಂಕ್) ಹಣದ ಕೊರತೆಯಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ರೆಪೊ ದರವನ್ನು ಹಣದುಬ್ಬರ ವನ್ನು ನಿಯಂತ್ರಿಸಲು ಹಣಕಾಸು ಪ್ರಾಧಿಕಾರಗಳು ಬಳಸಲ್ಪಡುತ್ತಿದೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರಿಯ ಬ್ಯಾಂಕುಗಳು ರೆಪೊ ದರವನ್ನು ಹೆಚ್ಚಿಸುತ್ತವೆ, ಏಕೆಂದರೆ ಇದು ಬ್ಯಾಂಕ್ ಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯಲು ಒಂದು ಅಸಹಕಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಂತಿಮವಾಗಿ ಅರ್ಥವ್ಯವಸ್ಥೆಯಲ್ಲಿ ಹಣದ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಣದುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ.

ರೆಪೋ ದರ ಎಂದರೇನು?
ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು. ಕೇಂದ್ರ ಬ್ಯಾಂಕ್ ರೆಪೋ ದರ ಕಡಿತಗೊಳಿಸಿದಾಗ ಸಹಜವಾಗಿ ಅಧೀನ ಬ್ಯಾಂಕ್‌ಗಳು ಗೃಹ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತದೆ.

ರಿವರ್ಸ್ ರೆಪೊ ದರ: ಬ್ಯಾಂಕ್ಗಳು ಆರ್ಬಿಐನಲ್ಲಿ ಇಟ್ಟಿರುವ ಹಣಕ್ಕೆ ಆರ್ಬಿಐ ನೀಡುವ ಬಡ್ಡಿಯಾಗಿದೆ.

ಸಾರಿಗೆ ನೌಕರರ ಮುಷ್ಕರ : ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಸಾವು

ನಿಮ್ಮ ಸಂಗಾತಿಯೊಂದಿಗೆ ಪೋರ್ನ್‌ ವಿಡಿಯೋಗಳನ್ನು 'ಈ ಕಾರಣಕ್ಕೆ ತಪ್ಪದೇ ನೋಡಿ'

HELTH TIPS: ಬಾಳೆಹಣ್ಣಿನ 10 ಆರೋಗ್ಯ ಪ್ರಯೋಜನಗಳು ಹೀಗಿದೆ

ಭಾರತದಿಂದ ಮಾನವ ಕೂದಲು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಚೀನಾ ಪ್ರಜೆಗಳು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags