Kannada News Now

1.8M Followers

BIGG BREAKING NEWS : ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ 'ನೈಟ್ ಕರ್ಪ್ಯೂ' ಜಾರಿಗೊಳಿಸಿ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

08 Apr 2021.9:17 PM

*ಅವಿನಾಶ್‌ ಆರ್ ಭೀಮಸಂದ್ರ/ರಂಜಿತ್‌ ಶೃಂಗೇರಿ

ಬೆಂಗಳೂರು: ಏಪ್ರಿಲ್‌ 10ರಿಂದ ಏಪ್ರಿಲ್ 20ರ ವರೆಗೆ ರಾಜ್ಯದ ಬೆಂಗಳೂರು ನಗರ, ಉಡುಪಿ, ಮೈಸೂರು, ಕಲಬುರಗಿ, ತುಮಕೂರು, ,ಬೀದರ್ , ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾತ್ರಿ ಕೊರೊನಾ ಕರ್ಫ್ಯೂ ಜಾರಿ ಇರಲಿದೆ ಅಂತ ಸಿಎಂ ಬಿಎಸ್‌ವೈ ತಿಳಿಸಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಈ ನಿಯಮ ಜಾರಿಯಲ್ಲಿ ಇರಲಿದೆ ಅಂತ ಹೇಳಿದ್ರು. ಇಂದು ಪ್ರಧಾನಿ ಮೋದಿಯವರ ನೇತೃತ್ವದ ನಡೆದ ಎಲ್ಲಾ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಿಎಂ ಬಿಎಸ್‌ವೈ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.

ಕೊರೊನಾ ಸೋಂಕು ಆರ್ಭಟಿಸುತ್ತಿರುವ ಎಂಟು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಬೆಂಗಳೂರು ನಗರ, ಉಡುಪಿ, ಮೈಸೂರು, ಕಲಬುರಗಿ, ತುಮಕೂರು, ,ಬೀದರ್ , ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದೇ ಶನಿವಾರದಿಂದ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ ಅಂತ ಹೇಳಿದರು.

ದೇಶದಲ್ಲಿರುವ ಕರೋನ ಪರಿಸ್ಥಿತಿ ಕುರಿತು ಪಿಎಂ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸಿದರು. ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ರು. ಈ ಸಂದರ್ಭದಲ್ಲಿ ರಾಜ್ಯಗಳ ರಾತ್ರಿ ನಿರ್ಬಂಧಕ್ಕೆ (ಕೊರೊನಾ ಕರ್ಫ್ಯೂ) ಪ್ರಧಾನಿ ಮೋದಿ ಬೆಂಬಲ ನೀಡಿದ್ದು,ರಾತ್ರಿ 9 ರಿಂದ ಇಲ್ಲವೇ ರಾತ್ರಿ 10 ಗಂಟೆಯಿಂದ ಕರ್ಫ್ಯೂ ವಿಧಿಸಿ ಬೆಳಗ್ಗೆ ಐದರಿಂದ ಆರಕ್ಕೆ ಕರ್ಫ್ಯೂ ಮುಗಿಸಿ ಅಂತ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದರು.

ಈ ಬೆನ್ನಲ್ಲೇ ಕರ್ನಾಟಕದಲ್ಲಿ 'ನೈಟ್ ಕರ್ಪ್ಯೂ' ಜಾರಿಗೊಳಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ಆದೇಶ ಹೊರಡಿಸಿದ್ದಾರೆ. ರಾಜ್ಯದ ಜನತೆ ನೈಟ್ ಕರ್ಪ್ಯೂ ವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಹೊರಗಡೆ ಬರಬಾರದು ಎಂದು ಸಿಎಂ ಯಡಿಯೂರಪ್ಪ ಕಟ್ಟು ನಿಟ್ಟಾಗಿ ಸೂಚನೆ ನೀಡಿದ್ದಾರೆ.

ಮಾತನಾಡಿ ಅಗತ್ಯ ವಸ್ತುಗಳ ಸೇವೆಗಳು ಎಂದಿನಂತೆ ಇರಲಿದೆ ಅಂತ ಅವರು ಹೇಳಿದ್ರು. ಇದೇ ವೇಳೆ ರಾಜ್ಯದ ಜನತೆ ಬಳಿಯಲ್ಲಿ ಕರೋನ ಹೆಚ್ಚಳದಿಂದಾಗಿ ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ, ದಯವಿಟ್ಟು ಮಾಸ್ಕ್‌ ಹಾಕಿಕೊಳ್ಳಿ, ಅಂತರವನ್ನು ಕಾಪಾಡಿಕೊಳ್ಳಿ ಅಂತ ಹೇಳಿದ್ರು. ಇನ್ನೂ ಮುಂದಿನ ದಿನದಲ್ಲಿ ಮಾಸ್ಕ್‌ ಹಾಕದೇ ಇರುವವರಿಗೆ ಹೆಚ್ಚಿನ ದಂಡವನ್ನು ಹಾಕಲಾಗುವುದು ಅಂತ ಹೇಳಿದರು. ಈ ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾಗಿದ್ದು, ಇದರಲ್ಲಿ ಉತ್ತಮ ಫಲಿತಾಂಶ ಬರದೇ ಹೋದ್ರೆ, ಮುಂದಿನ ದಿನದಲ್ಲಿ ರಾಜ್ಯದ ಉಳಿದ ಕಡೆಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಅಂಥ ಹೇಳಿದರು. ಮದುವೆ, ಸಭೆ ಸಮಾರಂಭಗಳನ್ನು ಇತಿ ಮಿತಿಗಳಲ್ಲಿ ಆಚರಣೆ ಮಾಡಬೇಕು ಅಂತ ಅವರು ಹೇಳಿದರು. ನಾವು ನಾಳೆಯಿಂದ ಮಾಸ್ಕ್‌ ಹಾಕಿಕೊಳ್ಳದವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು, ಯಾವುದೇ ಕಾರಣಕ್ಕೂ ಈ ಜಿಲ್ಲೆಗಳಲ್ಲಿ ಸಭೆ, ಸಮಾರಂಭಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಬಾರದು ಅಂತ ಹೇಳಿದರು. ಇನ್ನೂ ಇದಕ್ಕೆ ಜನತೆ ಕೈ ಜೋಡಿಸುವಂತೆ ಅವರು ಇದೇ ವೇಳೆ ರಾಜ್ಯದ ಜನತೆ ಬಳಿ ಮನವಿ ಮಾಡಿಕೊಂಡರು.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಬ್ಯೂಟಿಗಳ ಆಗಮನ ..ಆದ್ರೆ ಲ್ಯಾಗ್ ಮಂಜು ಮಿಸ್.!

BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಏ.27 ರಂದು ನಿಗದಿಯಾಗಿದ್ದ ಕುವೆಂಪು ವಿವಿ 'ಪದವಿ' ಪರೀಕ್ಷೆ ಮುಂದೂಡಿಕೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags