ವಿಜಯವಾಣಿ

505k Followers

ಯುವ ಇಂಜಿನಿಯರ್ಸ್​ಗೆ ಯುಪಿಎಸ್​ಸಿಯಿಂದ ಭರ್ಜರಿ ಅವಕಾಶ: ಅರ್ಜಿ ಆಹ್ವಾನ

08 Apr 2021.1:18 PM

ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕೆಂಬ ಆಸೆ ಹೊತ್ತ ಯುವ ಇಂಜಿನಿಯರ್ಸ್‍ಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಅವಕಾಶ ಕಲ್ಪಿಸಿದೆ. ಅಖಿಲ ಭಾರತ ಇಂಜಿನಿಯರಿಂಗ್ ಸೇವೆಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ, ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ವಿವಿಧ ಇಲಾಖೆಗಳಲ್ಲಿ ಒಟ್ಟು 215 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 215 ಹುದ್ದೆಗಳಲ್ಲಿ 7 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಉಳಿದಂತೆ ಇತರ ಮೀಸಲಾತಿ ಅಭ್ಯರ್ಥಿಗಳಿಗೂ ಮೀಸಲು ಕಾಯ್ದಿರಿಸಲಾಗುವುದು.

ಇಂಜಿನಿಯರಿಂಗ್‍ನಲ್ಲಿ ಪದವಿ, ಡಿಪ್ಲೋಮಾ ಮಾಡಿರುವ ಅಭ್ಯರ್ಥಿಗಳು ಹಾಗೂ ಗ್ರಾಜುಯೇಟ್ ಮೆಂಬರ್‍ಶಿಪ್ ಎಕ್ಸಾಮಿನೇಷನ್ ಅನ್ನು ಇನ್‍ಸ್ಟಿಟ್ಯೂಟ್ ಆಫ್​ ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್ ಇಂಜಿನಿಯರ್ಸ್ ನಲ್ಲಿ ಉತ್ತೀರ್ಣರಾಗಿರುವ, ಏರೋನಾಟಿಕಲ್ ಸೊಸೈಟಿ ಆಫ್​ ಇಂಡಿಯಾದಲ್ಲಿ ಅಸೋಸಿಯೇಟ್ ಮೆಂಬರ್​ಷಿಪ್​ ಎಕ್ಸಾಮಿನೇಷನ್ ಉತ್ತೀರ್ಣ, ಲಂಡನ್‍ನ ಇನ್‍ಸ್ಟಿಟ್ಯೂಟ್ ಆಫ್​ ಎಲೆಕ್ಟ್ರಾನಿಕ್ಸ್ ಆಯಂಡ್ ರೇಡಿಯೋ ಇಂಜಿನಿಯರ್ಸ್‍ನಲ್ಲಿ ಗ್ರಾಜುಯೇಟ್ ಮೆಂಬರ್​ಷಿಪ್​ ಪರೀಕ್ಷೆ ಪಾಸಾದವರೂ ಅರ್ಜಿ ಸಲ್ಲಿಸಬಹುದು.

ಯಾವ ವಿಭಾಗಗಳಲ್ಲಿ ನೇಮಕಾತಿ?
* ಸಿವಿಲ್ ಇಂಜಿನಿಯರಿಂಗ್
* ಮೆಕ್ಯಾನಿಕಲ್ ಇಂಜಿನಿಯರಿಂಗ್
* ಎಲೆಕ್ಟ್ರಿಕಲ್ ಇಂಜಿನಿಯರಿಂಗ್
* ಎಲೆಕ್ಟ್ರಾನಿಕ್ಸ್ ಆಯಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್

ವಯೋಮಿತಿ: 1.1.2021ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. (1991 ಜನವರಿ 2 ರಿಂದ 2000 ಜನವರಿ 1ರ ನಡುವೆ ಜನಿಸಿರಬೇಕು) ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇರುತ್ತದೆ.

ಪರೀಕ್ಷೆ ಯಾವಾಗ?
ಪೂರ್ವಭಾವಿ ಪರೀಕ್ಷೆಯು ಜು.18ರಂದು ನಡೆಯಲಿದೆ. ಇದರಲ್ಲಿ ಅರ್ಹತೆ ಪಡೆದವರು ಅಕ್ಟೋಬರ್ 10ರಂದು ನಡೆಯಲಿರುವ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.

ಪರೀಕ್ಷೆ ವಿಧಾನ:
ಪೂರ್ವಭಾವಿ ಪರೀಕ್ಷೆಯು ಬಹು ಆಯ್ಕೆ ಮಾದರಿಯಲ್ಲಿರಲಿದ್ದು, 2 ಪತ್ರಿಕೆಗಳಿರುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುತ್ತದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಅನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ:
ಅಭ್ಯರ್ಥಿಗಳು ವೆಬ್‍ಸೈಟ್‍ನಲ್ಲಿ ನೀಡಲಾದ ಲಿಂಕ್ ಮೂಲಕ ಅಗತ್ಯ ಮಾಹಿತಿ ಹಾಗೂ ಅಗತ್ಯ ದಾಖಲೆಗಳ ಸ್ಕಾೃನ್ ಕಾಪಿಯನ್ನು ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರ ಹಾಗೂ ಇಂಜಿನಿಯರಿಂಗ್‍ನ ಯಾವ ವಿಭಾಗಕ್ಕೆ ಎಂದು ನಮೂದಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಹಿಂಪಡೆಯಲು ಅವಕಾಶ ಇದ್ದು, ಮೇ4- 10ರ ವರೆಗೆ ಅರ್ಜಿ ಹಿಂಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 27.4.2021
ಅಧಿಸೂಚನೆಗೆ: https://bit.ly/3uHPTCX
ಮಾಹಿತಿಗೆ: https://www.upsc.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಹ್ವಾನ- ಎಸ್​ಎಸ್​ಎಲ್​ಸಿ ಆದವರಿಗೂ ಅವಕಾಶ

ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು…

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags