News18 ಕನ್ನಡ

400k Followers

ಸಾರಿಗೆ ನೌಕರರ ಮುಷ್ಕರ: ನಿವೃತ್ತ ಚಾಲಕ, ನಿರ್ವಾಹಕರಿಗೆ ಒಪ್ಪಂದದ ಸೇವೆ ನೀಡಲು ಆಹ್ವಾನ

08 Apr 2021.4:34 PM

ಬೆಂಗಳೂರು (ಏ. 8): ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ನೌಕರರ ಬಿಗಿ ಪಟ್ಟು ಸಡಿಲಿಸದ ಹಿನ್ನಲೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ನಿವೃತ್ತ ಸಿಬ್ಬಂದಿಗಳನ್ನ ಕರೆಸಿ ಬಸ್ ಸೇವೆ ನೀಡಲು ಸಾರಿಗೆ ನಿಗಮಗಳ ಚಿಂತನೆ ನಡೆಸಿದೆ. ಈಗಾಗಲೇ ನಿವೃತ್ತ ಚಾಲಕ ಮತ್ತು ನಿವೃತ್ತ ನಿರ್ವಾಹಕರಿಗೆ ಸಾರಿಗೆ ನಿಗಮ ಕರೆ ಕೊಟ್ಟಿದ್ದು, ಸೇವೆ ನೀಡುವಂತೆ ಮನವಿ ಮಾಡಿದೆ. ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ಈ ನಿಯೋಜನೆ ಮಾಡಲಾಗುತ್ತಿದ್ದು, 62 ವರ್ಷ ಮೀರದ, ದೈಹಿಕ ಸಾರ್ಮರ್ಥ್ಯ ಹೊಂದಿರುವ ನಿವೃತ್ತಿ ಸಿಬ್ಬಂದಿಗಳಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ.

ಸಾರಿಗೆ ನಿಗಮನದ ಈ ಆಹ್ವಾನದ ಮೇಲೆ ಸೇವೆಗೆ ಹಾಜರಾಗುವರಿಗೆ ಗೌರವ ಧನ ನೀಡಲಾಗುವುದು. ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿರುವ ಚಾಲಕ ಮತ್ತು ನಿರ್ವಹಾಕರನ್ನು ತಾತ್ಕಾಲಿಕವಾಗಿ ನಿಗಮದಲ್ಲಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲು ಉದ್ದೇಶಿಸಲಾಗಿದೆ. ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುವುದು. ನಿಗಮದ ಷರತ್ತುಗಳಿಗೆ ಒಪ್ಪಿ ಕರ್ತವ್ಯಕ್ಕೆ ಹಾಜರಾಗುವವರು ಬಂದು ವರದಿ ಮಾಡಿಕೊಳ್ಳುವಂತೆ ಕೆಎಸ್ ಆರ್ ಟಿಸಿ ನಿಗಮದ ಎಂಡಿ ಶಿವಯೋಗಿ ಕಳಸದ್ ರಿಂದ ಅಧಿಸೂಚನೆ ಪ್ರಕಟಿಸಿದ್ದಾರೆ.

ಇನ್ನು ಸೇವೆಗೆ ಹಾಜಾರಾಗಿವ ನಿವೃತ್ತ ಚಾಲಕರಿಗೆ 800 ರೂ, ನಿರ್ವಾಹಕರಿಗೆ 700 ಗೌರವ ಧನ ನಿಗದಿಸಲಾಗಿದೆ. ಹಾಜರಾಗುವವರಿಗೆ ಕೋವಿಡ್​ ವರದಿ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ನೌಕರರಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಮನವಿ ಮಾಡಿದೆ. ಅಲ್ಲದೇ ಎಸ್ಮಾ ಜಾರಿ ಮಾಡುವ ಎಚ್ಚರಿಕೆಯನ್ನು ಸಿಎಂ ನೀಡಿದ್ದಾರೆ. ಆದರೂ ನೌಕರರು ತಮ್ಮ ಮುಷ್ಕರ ಮುಂದುವರಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬಿಗಿ ಪಟ್ಟು ಹಿಡಿದಿದ್ದಾರೆ. ಆದರೆ, ಸರ್ಕಾರ ಇದನ್ನು ಹೊರತುಪಡಿಸಿ ಉಳಿದ ಉಳಿದ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಮೇ ತಿಂಗಳ ವರೆಗೆ ಕಾಲಾವಕಾಶ ಕೇಳಿದೆ. ಆದರೆ, ಮುಷ್ಕರ ನಿರತರು ಸರ್ಕಾರದ ಮನವಿಗೆ ಸ್ಪಂದಿಸುತ್ತಿಲ್ಲ. ತಮ್ಮ ಮುಷ್ಕರವನ್ನು ಮುಂದುವರಿಸಿರುವ ಪರಿಣಾಮ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಮುಂದಾಗಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags