News18 ಕನ್ನಡ

400k Followers

ಭಾರತದ ಐಟಿ ಉದ್ಯೋಗದಲ್ಲಿ ಶೇ. 300ರಷ್ಟು ಉದ್ಯೋಗಾವಕಾಶ ಹೆಚ್ಚಳ!; ಇಂಡೀಡ್ ಜಾಬ್ ವೆಬ್​ಸೈಟ್

09 Apr 2021.12:15 PM

2020ರ ಮೇಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇ. 60ರಷ್ಟು ಕುಸಿತ ಕಂಡುಬಂದಿತ್ತು. ಅಲ್ಲದೆ, ಆರ್ಥಿಕ ಕುಸಿತವೂ ಆರಂಭವಾಗಿತ್ತು. ಆದರೆ, ಈ ವರ್ಷ 2021ರಲ್ಲಿ ನಿಧಾನವಾಗಿ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಈ ಬೆಳವಣಿಗೆ ಇನ್ನೂ ಹೆಚ್ಚಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಈಗ ಎಲ್ಲವೂ ಸಂಪೂರ್ಣ ಡಿಜಿಟಲೀಕರಣವಾಗಿದ್ದು, ಅವಕಾಶಗಳು ಹೆಚ್ಚಾಗಿವೆ. ಕಳೆದ ವರ್ಷ ಅಕ್ಟೋಬರ್ ನಂತರ ಐಟಿ ವಲಯದಲ್ಲಿ ಶೇ. 10ರಷ್ಟು ನೇಮಕಾತಿ ಹೆಚ್ಚಾಗಿತ್ತು. ನಂತರದಲ್ಲಿ ಮುಂದಿನ ದಿನಗಳ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಈಗ ಅದರಂತೆಯೇ ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ವರ್ಕ್ ​ಫ್ರಮ್​ ಹೋಂ ಆಯ್ಕೆ ಇರುವ ಕಾರಣ ಬಹುತೇಕ ಮಹಿಳೆಯರು ಕೂಡ ಈಗ ಐಟಿ ಉದ್ಯೋಗಕ್ಕೆ ಮರು ನೇಮಕವಾಗುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಡಿಜಿಟಲೀಕರಣವಾಗುತ್ತಿರುವ ಕಾರಣ ಐಟಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದೆ.

ಜನವರಿ 2020 ರಿಂದ 2021 ಫೆಬ್ರವರಿಯ ನಡುವೆ ಫೀಲ್ಡ್ ಎಂಜಿನಿಯರ್, ಸೇಲ್ಸ್ ಲೀಡ್ ಮತ್ತು ಎಡಿಟರ್ ಮುಂತಾದ ಉದ್ಯೋಗಗಳಿಗೆ ಶೇ. 55ರಿಂದ ಶೇ. 85ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು Indeed ಜಾಬ್​ ವೆಬ್​ಸೈಟ್ ತಿಳಿಸಿದೆ. ಟೆಕ್​ ಸಲ್ಯೂಷನ್​ ಮೇಲಿನ ಮುಂದುವರಿದ ಅವಲಂಬನೆಯಿಂದಾಗಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ಹೆಚ್ಚಾಗಿದೆ. ಸೌಕರ್ಯಗಳನ್ನು ಹೆಚ್ಚಿಸಲು, ಸರಾಗವಾಗಿ ಬ್ಯುಸಿನೆಸ್ ಮುಂದುವರೆಸಲು ತಾಂತ್ರಿಕ ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದರಿಂದ ಉದ್ಯೋಗಿಗಳಿಗೆ ಹೆಚ್ಚಿನ ಸಂಖ್ಯೆಯ ಪೋಸ್ಟಿಂಗ್ ಅವಕಾಶ ಲಭ್ಯವಾಗಿದೆ. ಭಾರತದ ಪ್ರಮುಖ ಮೆಟ್ರೋ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಕೋಲ್ಕತಾ, ಪುಣೆ ಮತ್ತು ದೆಹಲಿ ಸೇರಿದಂತೆ ಉದ್ಯೋಗದ ಪೋಸ್ಟಿಂಗ್‌ಗಳನ್ನು ರಾಷ್ಟ್ರಾದ್ಯಂತ ನೀಡಲಾಗಿದೆ. ಈ ಎಲ್ಲಾ ಪ್ರಮುಖ ನಗರಗಳಲ್ಲೂ ಉದ್ಯೋಗವಕಾಶಗಳು ಹೆಚ್ಚುತ್ತಿದ್ದು, ಕೋಲ್ಕತಾದಲ್ಲಿ ಮಾತ್ರ ರೀಟೇಲ್ ಮತ್ತು ಬ್ಯುಸಿನೆಸ್​ ವಲಯದ ಕಡೆಗೆ ಆದ್ಯತೆ ನೀಡಿವೆ.

ಸಾಮಾಜಿಕ ಅಂತರದ ಪಾಲನೆ ಮತ್ತು ಆನ್​ಲೈನ್​ ಶಾಪಿಂಗ್​ನ ಮುಂದುವರೆದ ಬೆಳವಣಿಗೆಯಿಂದ ಗ್ರಾಹಕರೊಟ್ಟಿಗೆ ಬಾಂಧವ್ಯ ವೃದ್ಧಿಸುವ ಕೆಲಸಗಳಲ್ಲಿ ಬೆಳವಣಿಗೆಯಾಗಿದೆ. ಕಾಲರ್‌, ಗ್ರಾಹಕ ಪ್ರತಿನಿಧಿ ಸೇವಾದಾರರು, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಸೇಲ್ಸ್ ಪ್ರತಿನಿಧಿ ಸೇವೆಗಳ ಉದ್ಯೋಗವಕಾಶದಲ್ಲೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ.

ಇಂಡೀಡ್ ಆನ್​ಲೈನ್ ಜಾಬ್​​​ ವೆಬ್​ನ ಭಾರತದ ಮ್ಯಾನೇಜರ್​ ಆದ ಶಶಿಕುಮಾರ್​ ಅವರು ಹೇಳುವ ಪ್ರಕಾರ ''ಸಾಂಕ್ರಾಮಿಕದ ನಂತರ ಜಗತ್ತು ಭವಿಷ್ಯದಲ್ಲಿ ಡಿಜಿಟಲ್ ಇಂಡಿಯಾ ಇಂಕ್​ ಕಡೆಗೆ ತನ್ನ ಹೊರಳುತ್ತಿದೆ. ಆದರೆ ಟೆಕ್​ ಜಾಬ್​ ಮಾತ್ರ ಸಾಂಕ್ರಾಮಿಕದ ಸಂದರ್ಭಕ್ಕೂ ಮೊದಲು ಮತ್ತು ಅನಂತರ ಒಂದೇ ರೀತಿಯಾದ ಬೆಳವಣಿಗೆಯನ್ನು ಕಾಯ್ದುಕೊಂಡಿದೆ' ಎಂದರು.

'ಪ್ರತಿ ಉದ್ಯಮ ಮತ್ತು ಪ್ರತಿ ನಗರದಲ್ಲೂ ಶಾಪಿಂಗ್, ರಿಮೋಟ್ ವರ್ಕಿಂಗ್, ಕಲಿಕೆಯು ಟೆಕ್ನಾಲಜಿ ಸಲ್ಯೂಷನ್ಸ್​ಗಳ ಮೇಲಿನ ಅವಲಂಬನೆಯು ಟೆಕ್​ ಡೆವಲಪರ್ಸ್​ ಅವಕಾಶಗಳನ್ನು ಹೆಚ್ಚು ಮಾಡಿದೆ' ಎಂದು ಹೇಳಿದರು.
ಆನ್​ಲೈನ್​ನಲ್ಲಿ ಬ್ಯುಸಿನೆಸ್​ ಅಭಿವೃದ್ಧಿ ಕಡೆಗೆ ಗಮನ ವಹಿಸುವುದು, ಗ್ರಾಹಕರ ಸಂಪರ್ಕ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಟೆಕ್ನಿಕಲ್ ಸಲ್ಯೂಷನ್​ಗಳ ಬೆಳವಣಿಗೆ ಮಾಡುವುದರಿಂದ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags