ವಿಜಯವಾಣಿ

505k Followers

18 ವರ್ಷ ಆದ್ರೆ ಸಾಕು- ಯಾವ ಧರ್ಮವನ್ನಾದ್ರೂ ಆಯ್ಕೆ ಮಾಡಿಕೊಳ್ಳಬಹುದು ಎಂದ ಸುಪ್ರೀಂಕೋರ್ಟ್​

09 Apr 2021.5:11 PM

ನವದೆಹಲಿ: ಕಳೆದ ಕೆಲ ವರ್ಷಗಳಿಂದ ಲವ್​ ಜಿಹಾದ್​ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಎಷ್ಟೋ ಹೆಣ್ಣುಮಕ್ಕಳು ಆಮಿಷಕ್ಕೆ ಬಲಿಯಾಗಿ ಮತಾಂತರಗೊಂಡು ನಂತರ ಚಿತ್ರಹಿಂಸೆ ಪಡುತ್ತಿರುವ, ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಇದರ ಬೆನ್ನಲ್ಲೇ ಇಂಥದ್ದೊಂದು ಪ್ರಕರಣ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಮೂಢನಂಬಿಕೆ, ಪ್ರಚೋದನೆ, ಮಾಟಮಂತ್ರ, ಆರ್ಥಿಕ ಲಾಭದ ಹೆಸರಿನಲ್ಲಿ ಮತಾಂತರ ನಡೆಯುತ್ತಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಲಾಗಿತ್ತು. ಬಿಜೆಪಿ ಮುಖಂಡರಾದ ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್​, ಅರ್ಜಿಯನ್ನು ವಜಾ ಮಾಡಿರುವ ಕೋರ್ಟ್​, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ, 18 ವರ್ಷ ದಾಟಿದರೆ ಧರ್ಮ ಆಯ್ಕೆಗೆ ಅವರು ಸ್ವತಂತ್ರರು ಎಂದು ಹೇಳಿದೆ.

ಬಲವಂತದ ಮತಾಂತರವು ಅನುಚ್ಛೇದ 14, 21, 25 ರ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿರುವ ಜಾತ್ಯತೀತತೆಯ ತತ್ವಕ್ಕೂ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಧರ್ಮದ ದುರುಪಯೋಗ ತಡೆಯಲು ಸಮಿತಿ ನೇಮಿಸಿ ಮತಾಂತರ ಕಾನೂನು ಜಾರಿಗೆ ತರುವ ಸಾಧ್ಯತೆ ಗಳನ್ನು ಕಂಡುಹಿಡಿಯಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಆದರೆ, ಕೋರ್ಟ್​ ಇದನ್ನು ಮಾನ್ಯ ಮಾಡಲಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಬದಲಿಗೆ ಪಬ್ಲಿಸಿಟಿಗಾಗಿ ಸಲ್ಲಿಸಿರುವ ಅರ್ಜಿಯಂತಿದೆ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.

ಕೋರ್ಟ್​ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಹೇಳಿ ವಜಾ ಮಾಡಿದ ಹಿನ್ನೆಲೆಯಲ್ಲಿ ಇದೇ ಬೇಡಿಕೆಯನ್ನಿಷ್ಟು ಅಶ್ವಿನಿ ಅವರು ಇದೀಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ರಾಹುಲ್​ ದ್ರಾವಿಡ್​ಗೆ ಕೋಪ ಉಕ್ಕೇರಿದಾಗ ಬಂತು ಕನ್ನಡದ ನುಡಿ… 'ಒಡೆದ್​ಹಾಕ್​​ ​​ಬಿಡ್ತೀನಿ….'

ನಾಳೆಯಿಂದ ನೈಟ್​ ಕರ್ಫ್ಯೂ: ಸರ್ಕಾರದ ಈ ಅಧಿಕೃತ ಆದೇಶದಲ್ಲಿ ಎಲ್ಲ ಸಂದೇಹಗಳಿಗೆ ಪರಿಹಾರ…

ಕಷ್ಟಪಟ್ಟು ಸ್ಮಾರ್ಟ್​​ಫೋನ್​ ಎಗರಿಸಿದ ಕಳ್ಳ ವಾಪಸ್​ ಕೊಟ್ಟುಬಿಟ್ಟ- ಕಾರಣ ಕೇಳಿ ಪತ್ರಕರ್ತ ಸುಸ್ತಾದ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags