Oneindia

1.1M Followers

ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮಾರ್ಗಸೂಚಿ ಪ್ರಕಟ,ಯಾವುದಕ್ಕೆ ಅನುಮತಿ?

10 Apr 2021.1:41 PM

ಬೆಂಗಳೂರು, ಏಪ್ರಿಲ್ 9; ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ರಾತ್ರಿ ಕರ್ಫ್ಯೂವನ್ನು ಏಪ್ರಿಲ್ 10ರಿಂದ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯ ಬಳಿಕ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ್ದರು.

ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 20ರ ತನಕ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ.

Corona Curfew: ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ!

ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ ಏಪ್ರಿಲ್ 10ರಿಂದ 20ರ ತನಕ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ (ಕೊರೊನಾ ಕರ್ಫ್ಯೂ) ಜಾರಿಯಲ್ಲಿರುತ್ತದೆ.

ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ

ರಾತ್ರಿ ಕರ್ಫ್ಯೂ ಅವಧಿಯಲ್ಲಿ ಯಾವುದಕ್ಕೆ ಅನುಮತಿ ಇದೆ, ಯಾವುದಕ್ಕೆ ಇಲ್ಲ? ಎಂದು ಕರ್ನಾಟಕ ಸರ್ಕಾರ ಶುಕ್ರವಾರ ಮಾರ್ಗಸೂಚಿಯನ್ನು ಹೊರಡಿಸಿದೆ.

ಸಾರಿಗೆ ಮುಷ್ಕರ; ಜನರ ತೊಂದರೆ ನಿವಾರಿಸಲು ಮೂರು ಕ್ರಮ

Corona Curfew: ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ!

ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ

ಸಾರಿಗೆ ಮುಷ್ಕರ; ಜನರ ತೊಂದರೆ ನಿವಾರಿಸಲು ಮೂರು ಕ್ರಮ

 ವೈದ್ಯಕೀಯ ಚಿಕಿತ್ಸೆಗೆ ಅವಕಾಶ

ವೈದ್ಯಕೀಯ ಚಿಕಿತ್ಸೆಗೆ ಅವಕಾಶ

ರಾತ್ರಿ ಕರ್ಫ್ಯೂ ಅವಧಿಯಲ್ಲಿ ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಯನ್ನು ನೀಡಲಾಗಿದೆ.

 ಎಲ್ಲಾ ವಾಣಿಜ್ಯ ಚಟುವಟಿಕೆ ಬಂದ್

ಎಲ್ಲಾ ವಾಣಿಜ್ಯ ಚಟುವಟಿಕೆ ಬಂದ್

ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.

 ಯಾವ ವಾಹನ ಸಂಚಾರಕ್ಕೆ ಅನುಮತಿ

ಯಾವ ವಾಹನ ಸಂಚಾರಕ್ಕೆ ಅನುಮತಿ

ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು/ ಹೋಂ ಡೆಲಿವರಿ/ ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

 ರಾತ್ರಿ ಪಾಳಿಯ ಕಾರ್ಖಾನೆಗಳು

ರಾತ್ರಿ ಪಾಳಿಯ ಕಾರ್ಖಾನೆಗಳು

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಎಲ್ಲಾ ಕಾರ್ಖಾನೆ/ ಕಂಪನಿ/ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಣೆ ಮಾಡಲು ಅನುಮತಿಸಿದೆ.

 ಬಸ್‌ಗಳ ಸಂಚಾರದ ಮಾಹಿತಿ

ಬಸ್‌ಗಳ ಸಂಚಾರದ ಮಾಹಿತಿ

ರಾತ್ರಿ ವೇಳೆಯಲ್ಲಿ ಬಸ್, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿಸಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಆಧಾರದ ಮೇಲೆ ಆಟೋ/ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿ ನೀಡಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags