ವಿಜಯವಾಣಿ

505k Followers

ನೀವು ಸೈನ್ಸ್​ ವಿದ್ಯಾರ್ಥಿಯೆ? ಹಾಗಿದ್ದರೆ ರಾಜ್ಯ ಸರ್ಕಾರದ ಇಲಾಖೆಯಲ್ಲಿದೆ 154 ಹುದ್ದೆಗಳು

11 Apr 2021.3:34 PM

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 154

ಹುದ್ದೆಗಳ ವಿವರ: ಸಮಾಲೋಚಕ. ಯೋಜನಾ ವ್ಯವಸ್ಥಾಪಕ, ವಿಶ್ಲೇಷಕ ಹುದ್ದೆಗಳು

ಒಟ್ಟು 11 ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದರೆ ಅಂತಹವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆಯ್ದ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ಸಂದರ್ಶನ ದಿನಾಂಕ ತಿಳಿಸಲಾಗುವುದು.

ಸಂದರ್ಶನವನ್ನು ಕೇಂದ್ರ ಕಚೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.

ಎಲ್ಲೆಲ್ಲಿ ಉದ್ಯೋಗಾವಕಾಶ?
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಗದಗ, ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಧಾರವಾಡ, ಕೊಪ್ಪಳ, ಹಾಸನ, ಬೀದರ್

ಹುದ್ದೆ ಸಂಖ್ಯೆ ವಿವರ
- ಕೇಂದ್ರ ಕಚೇರಿ
* ಜೆಜೆಎಂ ಸಮಾಲೋಚಕರು - 3
* ಐಟಿ ಸಮಾಲೋಚಕರು - 1
* ಡಬ್ಲ್ಯುಕ್ಯುಎಮ್‍ಎಸ್ ಸಮಾಲೋಚಕರು - 4
* ಐಎಮ್‍ಐಎಸ್ ಸಮಾಲೋಚಕರು - 1

- ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ - ಜಲ ಜೀವನ ಮಿಷನ್
* ಜಿಲ್ಲಾ ಯೋಜನಾ ವ್ಯವಸ್ಥಾಪಕ - 2
* ಜಿಲ್ಲಾ ಎಂಐಎಸ್ ಸಮಾಲೋಚಕ - 5
* ನೀರಿನ ಮಾದರಿಗಳ ಸಂಗ್ರಹಕೋಶದ ಉಸ್ತುವಾರಿ - 32
* ಸೂಕ್ಷ್ಮಾಣುಜೀವಿ ಶಾಸಜ್ಞ - 80
* ಹಿರಿಯ ವಿಶ್ಲೇಷಣೆಗಾರ - 4
* ವಿಶ್ಲೇಷಣೆಗಾರ - 6
* ಕಿರಿಯ ವಿಶ್ಲೇಷಣೆಗಾರ - 9

- ಜಿಲ್ಲಾ ಪಂಚಾಯಿತಿ ಕಚೇತಿ- ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
* ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು - 1
* ಜಿಲ್ಲಾ ಎಂಐಎಸ್ ಸಮಾಲೋಚಕರು - 1
* ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು - 1

- ವೃತ್ತ ಕಚೇರಿ-ಜಲ ಜೀವನ ಮಿಷನ್
* ಹಿರಿಯ ಸಮಾಲೋಚಕರು - 1

ವಿದ್ಯಾರ್ಹತೆ: ಬಿಜಿನೆಸ್ ಮ್ಯಾನೇಜ್‍ಮೆಂಟ್, ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಸೈನ್ಸ್/ ಎಲೆಕ್ಟ್ರಾನಿಕ್ಸ್, ಕೆಮಿಸ್ಟ್ರಿ/ ಬಯೋಲಜಿ/ ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ, ಸ್ಟ್ಯಾಟಿಸ್ಟಿಕ್ಸ್/ ಎಕನಾಮಿಕ್ಸ್, ಎನ್ವಿರಾನ್‍ಮೆಂಟಲ್/ ಸಿವಿಲ್ ಇಂಜಿನಿಯರಿಂಗ್, ಸೋಷಿಯಲ್ ಸೈನ್ಸ್, ಮ್ಯಾನೇಜ್‍ಮೆಂಟ್, ಸೋಷಿಯಲ್ ವರ್ಕ್, ಮಾಸ್ ಕಮ್ಯುನಿಕೇಷನ್, ಜರ್ನಲಿಸಂನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಜತೆ ವೃತ್ತಿ ಅನುಭವ ಅವಶ್ಯ.

ವಯೋಮಿತಿ: 23.12.2020ಕ್ಕೆ ಗರಿಷ್ಠ 45 ವರ್ಷ.

ವೇತನ: ಹುದ್ದೆಗೆ ಅನುಗುಣವಾಗಿ ಮಾಸಿಕ 22,000 ರೂ.ನಿಂದ 1,50,000 ರೂ. ವರೆಗೆ ಇದೆ.

ಗುತ್ತಿಗೆ / ಹೊರಗುತ್ತಿಗೆ ಅವಧಿ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕ ಹುದ್ದೆಗಳಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವಧಿ ನವೀಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 28.4.2021
ಅರ್ಜಿ ಸಲ್ಲಿಕೆ ವಿಳಾಸ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಎಚ್‍ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು-5600009

ಅಧಿಸೂಚನೆಗೆ: https://bit.ly/3us5BBG
ಮಾಹಿತಿಗೆ: https://rdpr.karnataka.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ಜರ್ನಲಿಸಂ ಪದವೀಧರರಿಗೆ ದೂರದರ್ಶನದಲ್ಲಿ ಉದ್ಯೋಗಕ್ಕೆ ಅವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೆಟಲರ್ಜಿ ವಿಷಯದಲ್ಲಿ ಡಿಪ್ಲೋಮಾ ಆಗಿದೆಯಾ? ನಿಮಗಾಗಿ ಇವೆ 21 ಹುದ್ದೆಗಳು

ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಪದವಿ ಮುಗಿಸಿದವರಿಗೆ ಅರ್ಜಿ ಆಹ್ವಾನ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags