Kannada News Now

1.8M Followers

ಮುಷ್ಕರ ನಿರತ 'ಬಿಎಂಟಿಸಿ ಸಿಬ್ಬಂದಿ'ಗಳಿಗೆ ಮತ್ತೊಂದು ಶಾಕ್ : 55 ವರ್ಷ ಮೇಲ್ಪಟ್ಟವರಿಗೆ 'ಫಿಟ್ನೆಸ್ ಸರ್ಟಿಫಿಕೇಟ್' ಇಲ್ಲದಿದ್ರೇ ಗೇಟ್ ಪಾಸ್ : ನಾಳೆಯೇ ಸಲ್ಲಿಸಲು ಕೊನೆಯ ದಿನ.!

11 Apr 2021.09:17 AM

ಬೆಂಗಳೂರು : ಒಂದಲ್ಲ.. ಎರಡಲ್ಲ.. ಮೂರಲ್ಲ.. ನಾಲ್ಕು ಅಲ್ಲ, ಐದನೇ ದಿನಕ್ಕೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಟ್ಟಿದೆ. ಸರ್ಕಾರ ಬಗ್ಗುತ್ತಿಲ್ಲ. ಸಾರಿಗೆ ಸಿಬ್ಬಂದಿಗಳು ಜಗ್ಗುತ್ತಿಲ್ಲ. ಇದರಿಂದಾಗಿ ಸಾರಿಗೆ ಬಸ್ ಪ್ರಯಾಣಿಕರಿಗೆ ಪರದಾಟ ತಪ್ಪಿಲ್ಲದಂತೆ ಆಗಿದೆ. ಇದರ ಮಧ್ಯೆ ಮುಷ್ಕರ ನಿರತ ಬಿಎಂಟಿಸಿಯ 55 ವರ್ಷ ಮೇಲ್ಪಟ್ಟ ನೌಕರರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸೋದನ್ನು ಕಡ್ಡಾಯಗೊಳಿಸಿದೆ. ನಾಳೆಯೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸದೇ ಇದ್ದರೇ ಗೇಟ್ ಪಾಸ್ ನೀಡೋದಕ್ಕೂ ಮುಂದಾಗಿದೆ. ಈ ಮೂಲಕ ಬಿಎಂಟಿಸಿ ಮುಷ್ಕರ ನಿರತ ನೌಕರರಿಗೆ ಬಿಗ್ ಶಾಕ್ ಗೆ ಮುಂದಾಗಿದೆ.

5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು 8 ಗಂಟೆಯವರೆಗೆ ಸಂಚರಿಸಿದ ಸಾರಿಗೆ ಬಸ್ ಗಳು ಎಷ್ಟು ಗೊತ್ತಾ.?

ಈ ಕುರಿತಂತೆ ಬಿಎಂಟಿಸಿ ಆದೇಶ ಹೊರಡಿಸಿದ್ದು, 55 ವರ್ಷ ಮೇಲ್ಪಟ್ಟ ಬಿಎಂಟಿಸಿ ನೌಕರರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸೋದು ಕಡ್ಡಾಯವಾಗಿದೆ.

ಇಂತಹ ಸರ್ಟಿಫಿಕೇಟ್ ಅನ್ನು ನಾಳೆಯೊಳಗೆ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ತಪ್ಪಿದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬುದಾಗಿಯೂ ಎಚ್ಚರಿಕೆ ನೀಡಿದೆ. ಹೀಗಾಗಿ ನಾಳೆಯೊಳಗೆ ಮುಷ್ಕರ ನಿರತ 55 ವರ್ಷ ಮೇಲ್ಪಟ್ಟ ಬಿಎಂಟಿಸಿಯ 1,800 ನೌಕರರು ಫಿಟ್ನಸ್ ಸರ್ಟಿಫಿಕೇಟ್ ಸಲ್ಲಿಸದಿದ್ದರೇ, ಗೇಟ್ ಪಾಸ್ ಮಾಡಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಇಂದಿನಿಂದ 4 ದಿನ `ಲಸಿಕೆ ಉತ್ಸವ' : ಸಚಿವ ಡಾ.ಕೆ. ಸುಧಾಕರ್

ಇನ್ನೂ ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೇ, ಯುಗಾದಿ ಹಬ್ಬ ಕೂಡ ಹತ್ತಿರ ಬರ್ತಾ ಇದೆ. ಪ್ರತಿಬಾರಿ ತಿಂಗಳ 1 ರಿಂದ 5ನೇ ತಾರೀಕಿನ ಒಳಗೆ ಆಗುತ್ತಿದ್ದಂತ ವೇತನ, ಈಗ ಏಪ್ರಿಲ್ 11 ಆದ್ರೂ ಆಗಿಲ್ಲ. ಈಗಾಗಲೇ ಏಪ್ರಿಲ್ 1ರಂದೇ ನಾಲ್ಕು ನಿಗಮದ ಅಧಿಕಾರಿಗಳು, ಕಚೇರಿ, ಮೇಕಾನಿಕಲ್ ಸಿಬ್ಬಂದಿಗಳು, ಭದ್ರತಾ ಕೆಲಸಗಾರರಿಗೆ ವೇತನ ನೀಡಲಾಗಿದೆ. ಆದ್ರೇ ಕಂಡಕ್ಟರ್, ಡ್ರೈವರ್ ಗಳಿಗೆ ಮಾತ್ರ ಏಪ್ರಿಲ್ 11 ಆದ್ರೂ ವೇತನ ನೀಡಿಲ್ಲ. ಇದರಿಂದಾಗಿ ಈ ಬಾರಿ ಯುಗಾದಿ ಹಬ್ಬಕ್ಕೆ ವೇತನವಿಲ್ಲದ ಬಿಸಿ ನೌಕರರಿಗೆ ತಟ್ಟಿದೆ.

ಅಜ್ಜ ಸೇರಿ ಇಬ್ಬರಿಂದ ಬಾಲಕಿ ಮೇಲೆ ಅತ್ಯಾಚಾರ : ಸಮೋಸ, 20 ರೂ. ಕೊಟ್ಟು ಸುಮ್ಮನಿರುವಂತೆ ಬೆದರಿಸಿದ ಪಾಪಿಗಳು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags